Asianet Suvarna News Asianet Suvarna News

ಸೂರ್ಯ ಇಲ್ಲದೆ ಜೀವನ ನಡೆಸೋದೇ ಕಷ್ಟ; ಪತಿಯ ಬಗ್ಗೆ ನಟಿ ಜೋತಿಕಾ ಪ್ರೀತಿಯ ಮಾತು

ಫ್ಯಾಮಿಲಿ ಬಗ್ಗೆ ಮೊದಲ ಸಲ ಮಾತನಾಡಿರುವ ನಟಿ ಜೋತಿಕಾ. Gen-zಗೆ ಲವ್, ಕೆಲಸ ಆಂಡ್ ಫ್ಯಾಮಿಲಿ ಮ್ಯಾನೇಜ್‌ ಮಾಡಲು ಟಿಪ್ಸ್‌ ಕೊಟ್ಟ ಸುಂದರಿ....
 

Tamil actor Suriya is my actual support says wife Jyothika vcs
Author
First Published Mar 7, 2023, 1:29 PM IST

ತಮಿಳು ಚಿತ್ರರಂಗದಲ್ಲಿ ಪವರ್ ಕಪಲ್ ಎಂದೇ ಹೆಸರು ಮಾಡಿರುವ ನಟ ಸೂರ್ಯ ಮತ್ತು ನಟಿ ಜೋತಿಕಾ ಅನೇಕರಿಗೆ ಸ್ಪೂರ್ತಿಯಾಗುತ್ತಾರೆ. ಸಿನಿಮಾ, ವೃತ್ತಿ ಜೀವನ ಮತ್ತು ಫ್ಯಾಮಿಲಿಯನ್ನು ಅದ್ಭುತವಾಗಿ ಮ್ಯಾನೇಜ್ ಮಾಡುತ್ತಿರುವ ಜೋತಿಕಾ ಮೊದಲ ಸಲ ಸೂರ್ಯನ ಯಶಸ್ಸು ಮತ್ತು ಬೆಂಬಲದ ಬಗ್ಗೆ ಮಾತನಾಡಿದ್ದಾರೆ.    

'ನನ್ನ ಪತಿ ಸೂರ್ಯ ಜೊತೆ ಕಾಂಪಿಟೇಷನ್ ಮಾಡುವುದೇ ನನ್ನ ಫಿಟ್ನೆಸ್ ಆಂಡ್ ಬ್ಯೂಟಿ ಸೀಕ್ರೆಟ್. ದಿನ ಇಬ್ಬರು ಒಟ್ಟಿಗೆ ಜಿಮ್‌ಗೆ ಹೋಗಿ ವರ್ಕೌಟ್ ಮಾಡುತ್ತೀವಿ, ಬಿಡುವು ಇದ್ದಾಗ ವಾಕಿಂಗ್ ಮಾಡುತ್ತೀವಿ. ಸಮಯ ಸಿಕ್ಕಾಗ ಏನೇ ಕೆಲಸ ಇದ್ದರೂ ಒಟ್ಟಿಗೆ ಮಾಡುತ್ತೀವಿ. ಸಮಾಜದಲ್ಲಿ ಎಲ್ಲರೂ ನಮ್ಮನ್ನು ಕಪರ್ ಕಪಲ್ ಎಂದು ಕರೆಯುತ್ತಾರೆ. ಕೇಳಿಸಿಕೊಳ್ಳುವುದಕ್ಕೆ ಖುಷಿಯಾಗುತ್ತದೆ. ವಾಕಿಂಗ್ ಮಾಡುವಾಗ ನೆಮ್ಮದಿಯಿಂದ ಪ್ರಕೃತಿಯನ್ನು ಎಂಜಾಯ್ ಮಾಡುತ್ತೀವಿ ಮನೆ ವಿಚಾರದ ಬಗ್ಗೆ ಮಾತನಾಡುತ್ತೀವಿ. ಆಫೀಸ್‌ನಲ್ಲಿ ಮಾತ್ರ ಸಿನಿಮಾ ವಿಚಾರ ಮಾತನಾಡುವುದ' ಎಂದು 7 ವರ್ಷಗಳ ಹಿಂದೆ ನಡೆದ ತಮಿಳು ಸಂದರ್ಶನದಲ್ಲಿ ಹೇಳಿದ್ದಾರೆ.   

ನಟ ಸೂರ್ಯ- ಜೋತಿಕಾ ಪುತ್ರಿ ದಿಯಾ ಹೇಗಿದ್ದಾಳೆ ನೋಡಿದ್ದೀರಾ?

'ಚಿತ್ರರಂಗಕ್ಕೆ ಸೂರ್ಯ ಕಾಲಿಟ್ಟು 26 (1997- 2023) ಕಳೆದಿದೆ. ಅಭಿಮಾನಿಗಳು ಸಂಭ್ರಮಿಸುವುದನ್ನು ನೋಡುವುದಕ್ಕೆ ಖುಷಿಯಾಗುತ್ತದೆ ಏಕೆಂದರೆ ಸಮಯ ಕೊಟ್ಟು ಫ್ಯಾನ್ ಪೇಜ್ ಕ್ರಿಯೇಟ್ ಮಾಡುತ್ತಾರೆ ವಿಭಿನ್ನ ವಿಡಿಯೋ ಮಾಡುತ್ತಾರೆ ಆ ದಿನವನ್ನು ಹಬ್ಬದ ರೀತಿ ಆಚರಿಸುತ್ತಾರೆ. ಅಭಿಮಾನಿಗಳು ಕ್ರಿಯೇಟ್ ಮಾಡಿರುವ ಫೋಟೋ ನೋಡಿದರೆ ಸೂರ್ಯ ಎಷ್ಟೊಂದು ಪಾತ್ರ ಮಾಡಿದ್ದಾರೆ...ತಮ್ಮ ಸಾಮರ್ಥ್ಯಕ್ಕೂ ಮೀರಿದ ಪಾತ್ರಗಳನ್ನು 20 ರಿಂದ 30 ವಯಸ್ಸಿನಲ್ಲಿ ಮಾಡಿದ್ದಾರೆ. ಪಾತ್ರದಲ್ಲಿ ಮುಳುಗಿದಾಗ ವಯಸ್ಸು ಮುಖ್ಯವಾಗುವುದಿಲ್ಲ, ಚಿಕ್ಕ ವಯಸ್ಸಿಗೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸೂರ್ಯನಿಗೆ ಮತ್ತು ಈ ಕುಟುಂಬಕ್ಕೆ ನಾನು ಪಿಲ್ಲರ್ ಎಂದು ಅನೇಕರು ಹೇಳುತ್ತಾರೆ ಆದರೆ ಒಬ್ಬರಿಲ್ಲದೆ ಮತ್ತೊಬ್ಬರು ಏನೂ ಮಾಡಲು ಸಾಧ್ಯವಿಲ್ಲ. ಸೂರ್ಯ ಒಂದು ಚೂರು ಜರಗಿದರೂ ನಾನು ಬಿದ್ದು ಹೋಗುವೆ. ನಿಜ ಹೇಳಬೇಕು ಅಂದ್ರೆ ಸೂರ್ಯ ನನಗೆ ಪಿಲ್ಲರ್ ಅವರಿಂದ ಮನೆ ಕೆಲಸ ಮತ್ತು ಫ್ಯಾಮಿಲಿ ಮ್ಯಾನೇಜ್ ಮಾಡಲು ಆಗುತ್ತಿರುವುದು. ನಾವಿಬ್ಬರು ವೃತ್ತಿ ಜೀವನ ಒಂದೇ ಹಾದಿಯಲ್ಲಿ ಶುರು ಮಾಡಿದ್ದು ಕಷ್ಟ ಸಮಯದಲ್ಲಿ ಒಟ್ಟಿಗೆ ನಿಂತವರು ಆದರೆ ಒಬ್ಬರಿಂದ ಮತ್ತೊಬ್ಬರಿಗೆ ಆಫರ್‌ ಬಂತು ಅನ್ನೋದು ಸುಳ್ಳು ವಿಚಾರ. ಈ ಕಥೆ ಚೆನ್ನಾಗಿದೆ ಈ ರೀತಿ ಪಾತ್ರ ಮಾಡಿ ಈ ರೀತಿ ಬದಲಾವಣೆ ಮಾಡಿಕೊಳ್ಳಿ ಎಂದು ನಾವಿಬ್ಬರೂ ಚರ್ಚೆ ಮಾಡುತ್ತಿದ್ದೆವು. ಮದುವೆ ಆದ್ಮೇಲೆ ನಾನು ಸೂರ್ಯ ಮೇಲೆ ಬಾಗಿರುವೆ ಅವರಿಲ್ಲದೆ ಸಾಗುವುದು ಕಷ್ಟ.'ಎಂದು ಜೋತಿಕಾ ಹೇಳಿದ್ದಾರೆ.

ಮದ್ವೆಯಾಗಿ 14 ವರ್ಷವಾದ್ರೂ ಪತಿ ಸೂರ್ಯಗೆ ಒಂದ್ ಕಪ್ ಕಾಫೀನೂ ಮಾಡ್ಕೊಕೊಟ್ಟಿಲ್ಲ ಜ್ಯೋತಿಕಾ

'ಮುಖ್ಯವಾಗಿ ನಾವು ಫ್ಯಾಮಿಲಿಗೆ ಪ್ರಾಮುಖ್ಯತೆ ನೀಡುತ್ತೀವಿ. ಸಿನಿಮಾಗಳಿಗೆ ಸೂರ್ಯ ಹೆಚ್ಚಿನ ಪ್ರಮುಖ್ಯತೆ ನೀಡುತ್ತಾರೆ ಏಕೆಂದರೆ ಅದೇ ನಮ್ಮ ಜೀವನಕ್ಕೆ ದಾರಿ. ನಮ್ಮ ಜೀವನದಲ್ಲಿ ತುಂಬಾ ಮೇಲೆ ಕೆಳಗೆ ನೋಡಿದ್ದೀವಿ...ಅದರಲ್ಲೂ ಕಷ್ಟದ ಸಮಯ ಬಂದಾಗ ಫ್ಯಾಮಿಲಿಯನ್ನು ಮೊದಲು ಸೇಫ್ ಮಾಡುತ್ತೀವಿ. ಸಮಯ ಸಿಕ್ಕರೆ ಮಕ್ಕಳ ಜೊತೆ ಟ್ರಿಪ್ ಮಾಡುತ್ತೀವಿ. ಸ್ಕೂಲ್ ಡೇ, ಆನುಯಲ್ ಡೇ ಏನೇ ಇದ್ದರೂ ಕೆಲಸದಿಂದ ಬ್ರೇಕ್ ತೆಗೆದುಕೊಂಡು ಭಾಗಿಯಾಗುತ್ತಾರೆ. ಫ್ರೀ ಇದ್ದಾಗ ಮಕ್ಕಳನ್ನು ಡ್ರಾಪ್ ಆಂಡ್ ಪಿಕಪ್ ಮಾಡುತ್ತಾರೆ ಇಲ್ಲದಿದ್ದರೆ ನನ್ನ ತಂದೆ ಮಾಡುತ್ತಾರೆ. ವರ್ಷದ ಆರಂಭದಲ್ಲಿ ನಾವು ಕ್ಯಾಲೆಂಡರ್‌ ಮಾರ್ಕ್‌ ಮಾಡಿಕೊಳ್ಳುತ್ತೀವಿ ವರ್ಷದಲ್ಲಿ ಇಷ್ಟು ರಜೆ ಇದೆ ಎಲ್ಲಿಗೆ ಪ್ರಯಾಣ ಮಾಡಬೇಕು ಎಂದು. ಮಕ್ಕಳು ಹೆಚ್ಚಿಗೆ ವಿದ್ಯಾಭ್ಯಾಸದ ಮೇಲೆ ಗಮನ ಕೊಡುತ್ತಾರೆ ಆದರೆ ಅವರಿಗೆ ಆನಿಮೇಷನ್‌ ಸಿನಿಮಾಗಳು ಇಷ್ಟವಾಗುತ್ತದೆ ಹೀಗಾಗಿ ಮನೆಯಲ್ಲಿ 90% ಅನಿಮೇಷನ್‌ ಸಿನಿಮಾ ಓಡುತ್ತದೆ.  ತುಂಬಾ ಯೋಚನೆ ಮಾಡಿ ಮಾಡಿ ಸಿನಿಮಾ ತೋರಿಸುತ್ತೀವಿ' ಎಂದಿದ್ದಾರೆ ಜೋತಿಕಾ. 

Follow Us:
Download App:
  • android
  • ios