ನಟ ಕಾರ್ತಿಕ್ ಕಾಲಿಗೆ ಬಲವಾದ ಪೆಟ್ಟು. ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ.  

ತಮಿಳು ಚಿತ್ರರಂಗದ ಹಿರಿಯ ನಟ ಕಾರ್ತಿಕ್‌ ವ್ಯಾಯಾಮ ಮಾಡುವಾಗ, ಕಾಲಿಗೆ ಬಲವಾದ ಪೆಟ್ಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ತಿಕ್ ಅವರ ಪಿಆರ್‌ ರಿಯಾಜ್‌ ಅಹ್ಮದ್ ಟ್ಟೀಟರ್‌ನಲ್ಲಿ ಮಾಹಿತಿ ತಿಳಿಸಿದ್ದಾರೆ. 

'ನಟ ಕಾರ್ತಿಕ್ ವ್ಯಾಯಾಮ ಮಾಡುವ ವೇಳೆ ಗಾಯಗೊಂಡಿದ್ದಾರೆ. ಬೇಗ ಗುಣಮುಖರಾಗಿ ಎಂದು ಪ್ರಾರ್ಥಿಸುತ್ತೇನೆ,' ಎಂದು ಪೋಸ್ಟ್ ಹಾಕಿದ್ದಾರೆ. ಈ ಹಿಂದೆ ಕಾರ್ತಿಕ್‌ಗ ಅವರಿಗೆ ಅಪಘಾತದಲ್ಲಿಕಾಲಿಗೆ ಪೆಟ್ಟು ಬಿದ್ದು, ಗಾಯಗೊಂಡಿತ್ತು, ಈಗ ಅದೇ ಕಾಲಿಗೆ ಮತ್ತೆ ಪೆಟ್ಟು ಬಿದ್ದ ಕಾರಣ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಸಾಹಸ ಸನ್ನಿವೇಶ ಚಿತ್ರೀಕರಣದ ವೇಳೆ ನಟಿ ಶಾನ್ವಿ ಶ್ರೀವಾಸ್ತವಗೆ ಗಾಯ!

1981ರಿಂದ ತಮಿಳು ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕಾರ್ತಿಕ್ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಚಿತ್ರರಂಗದಲ್ಲಿ ಪೀಕ್‌ನಲ್ಲಿದ್ದಾಗಲೇ ರಾಗಿಣಿ ಅವರನ್ನು ವಿವಾಹವಾದರು. ಇಬ್ಬರು ಗಂಡು ಮಕ್ಕಳು ಗೌತಮ್ ಮತ್ತು ಗಯನ್‌ ಕೂಡ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 1992ರಲ್ಲಿ ರಾಗಿಣಿ ಸಹೋದರಿ ರತಿ ಅವರನ್ನು ಸಹ ಮದುವೆಯಾಗಿದ್ದು, ಒಬ್ಬ ಮಗ ತಿರನ್‌ ಇದ್ದಾನೆ.