ಸಾಹಸ ಸನ್ನಿವೇಶ ಚಿತ್ರೀಕರಣದ ವೇಳೆ ನಟಿ ಶಾನ್ವಿ ಶ್ರೀವಾಸ್ತವಗೆ ಗಾಯ!
'ಬ್ಯಾಂಗ್' ಸಿನಿಮಾ ಚಿತ್ರೀಕರಣದ ವೇಳೆ ಅವಘಡ. ಅರ್ಧಕ್ಕೇ ಶೂಟಿಂಗ್ ನಿಲ್ಲಿಸಿದ ಚಿತ್ರಮ ತಂಡ.
ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಶಾನ್ವಿ ಶ್ರೀವಾಸ್ತವ ಕೆಲವು ದಿನಗಳಿಂದ 'ಬ್ಯಾಂಗ್' ಸಿನಿಮಾ ಚಿತ್ರೀಕರಣದಲ್ಲಿ ಬ್ಯಸಿಯಾಗಿದ್ದಾರೆ. ಡಾರ್ಕ್ ಕಾಮಿಡಿ ಚಿತ್ರ ಇದಾಗಿದ್ದು, ಶಾನ್ವಿ ಕೊಂಚ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಸಾಹಸ ಸನ್ನಿವೇಶ ಚಿತ್ರೀಕರಣದಲ್ಲಿ ಶಾನ್ವಿಗೆ ಪೆಟ್ಟಾಗಿದೆ.
ಸ್ಟ್ರೀಟ್ ಫುಡ್ ಅಂದ್ರೆ ಶಾನ್ವಿಗೆ ಸಖತ್ ಇಷ್ಟ..! ಫ್ಯಾನ್ಸ್ ಪ್ರಶ್ನೆಗಳಿಗೆ ನಟಿಯ ಉತ್ತರಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶಾನ್ವಿ ಸಾಹಸ ಸನ್ನಿವೇಶಗಳ ಚಿತ್ರೀಕರಣ ಮಾಡುತ್ತಿದ್ದರು. ಮಳೆ ಬರುತ್ತಿದ್ದ ಕಾರಣ ಫೈಟ್ ಮಾಡುವಾಗ ಆಯತಪ್ಪಿ ಜಾರಿ ಬಿದ್ದಿದ್ದಾರೆ. ಇದರಿಂದ ಕೈಗೆ ಪೆಟ್ಟಾಗಿದೆ. ತಕ್ಷಣವೇ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ನಂತರ ಪುನಾ ಚಿತ್ರೀಕರಣಕ್ಕೆ ಮರಳಳು ಶಾನ್ವಿ ರೆಡಿ ಆಗಿದ್ದರಂತೆ. ಆದರೆ ವೈದರು ಹಾಗೂ ಚಿತ್ರ ತಂಡದವರು ವಿಶ್ರಾಂತಿ ತೆಗೆದುಕೊಳ್ಳಲಿ ಎಂದು ಶೂಟಿಂಗ್ ನಿಲ್ಲಿಸಿದ್ದಾರೆ.
ಯುಕೆ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಬ್ಯಾಂಗ್ ಒಂದು ಡಾರ್ಕ್ ಕಾಮಿಡಿ ಸಿನಿಮಾ. ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಶಾನ್ವಿ, 'ನನ್ನ ಪಾತ್ರ ಎಕ್ಸ್‌ಪ್ಲೋರ್ ಮಾಡೋಕೆ ಬಹಳ ಇದೆ. ಫೈಟ್ ದೃಶ್ಯ ಮಾಡುವ ಮೊದಲು ನಾಲ್ಕೈದು ದಿನ ಟ್ರೈನಿಂಗ್ ಕೊಟ್ಟಿದ್ದಾರೆ,' ಎಂದು ಹೇಳಿದ್ದರು. ಬಹುತೇಕ ಚಿತ್ರೀಕರಣ ಮುಗಿದಿದ್ದು ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಭಾಷೆಯಲ್ಲೂ ಈ ಚಿತ್ರ ಬಿಡುಗಡೆ ಮಾಲಾಗುತ್ತಿದೆ.