Asianet Suvarna News Asianet Suvarna News

ತಮನ್ನಾ ನೋಡಲು ಬ್ಯಾರಿಕೇಡ್​ ಜಿಗಿದು, ಸೆಕ್ಯುರಿಟಿ ಭೇದಿಸಿದ ಅಭಿಮಾನಿ: ನಟಿ ರಿಯಾಕ್ಷನ್ ಹೇಗಿತ್ತು?

 ನಟಿ ತಮನ್ನಾ ಭಾಟಿಯಾರ ಜೊತೆ ಸೆಲ್ಫಿ ಕ್ಕಿಕ್ಕಿಸಲು ಅಭಿಮಾನಿಯೊಬ್ಬ  ಬ್ಯಾರಿಕೇಡ್​ ಜಿಗಿದು,  ಸೆಕ್ಯುರಿಟಿ ಭೇದಿಸಿ ಬಂದ. ಮುಂದಾದದ್ದೇ ಕುತೂಹಲ 
 

Tamannaahs tactful response to overenthusiastic fan in Kollam suc
Author
First Published Aug 8, 2023, 5:31 PM IST

ಮಿಲ್ಕಿ ಬ್ಯೂಟಿ (Milky beauty) ಎಂದೇ ಫೇಮಸ್​ ಆಗಿರುವ ಬಾಲಿವುಡ್​ ನಟಿ ತಮನ್ನಾ ಭಾಟಿಯಾ,  ತೆಲುಗು , ತಮಿಳು ಚಿತ್ರರಂಗದಲ್ಲಿಯೂ ಸಕತ್​ ಫೇಮಸ್​.  70 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಅವರು ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದ ಈ ನಟಿ ಸದ್ಯ ಎಲ್ಲರ ಬಾಯಲ್ಲೂ ನಲಿದಾಡುತ್ತಿದ್ದಾರೆ. ಇದಕ್ಕೆ ಕಾರಣ, ಜೈಲರ್​ ಚಿತ್ರದ ಕಾವಾಲಯ್ಯ ಹಾಡು. ಚಿಕ್ಕಮಕ್ಕಳಿಂದ ಹಿಡಿದು, ವಯೋವೃದ್ಧರವರೆಗೂ ಈ ಹಾಡನ್ನು ಗುನುಗುನಿಸದ ಸಿನಿ ಪ್ರಿಯರು ಇಲ್ಲವೇ ಎನ್ನಬಹುದೇನೋ. ಅದೆಷ್ಟೋ ಮಂದಿ ಈ ಹಾಡಿಗೆ ತಾವೂ ಸ್ಟೆಪ್​ ಹಾಕಿ ಕುಣಿದಿದ್ದಾರೆ, ರೀಲ್ಸ್​ ಮಾಡಿದ್ದಾರೆ.  ಎಂಟು ಫಿಲ್ಮ್‌ಫೇರ್ ಪ್ರಶಸ್ತಿಗಳ ದಕ್ಷಿಣ ನಾಮನಿರ್ದೇಶನಗಳನ್ನು ಪಡೆದ ಅಪರೂಪದ ನಟಿ ತಮನ್ನಾ. ವಿಶೇಷ ಏನೆಂದರೆ, ಇವರು ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ 2010 ರಲ್ಲಿ ಕಲೈಮಾಮಣಿ ಮತ್ತು 2022 ರಲ್ಲಿ ಗೌರವ ಡಾಕ್ಟರೇಟ್ ಕೂಡ ಪಡೆದಿದ್ದಾರೆ. 34 ವರ್ಷಗಳ ಈ ಚೆಲುವೆ ಸಹಜವಾಗಿಯೇ ಚಿತ್ರರಂಗದಲ್ಲಿ ಸಕತ್​ ಬೇಡಿಕೆ ನಟಿಯಾಗಿದ್ದಾರೆ. ಸದ್ಯ ವೆಬ್ ಸೀರಿಸ್‌ಗಳಲ್ಲಿ ತಮನ್ನಾ (Tamanna Batia) ಬ್ಯುಸಿಯಾಗಿದ್ದಾರೆ. ಇದಾಗಲೇ ಲಸ್ಟ್ ಸ್ಟೋರಿ 2 ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡು  ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.  ಜೀ ಕರ್ದ ಸೀರಿಸ್‌ನಲ್ಲಿ ನಟಿಸಿದ್ದು ರಿಲೀಸ್‌ಗೆ ರೆಡಿಯಾಗಿದೆ. 

ಕಾವಾಲಯ್ಯ ಹಾಡು ಮತ್ತು ಲಸ್ಟ್​ ಸ್ಟೋರೀಸ್​-2 ಬಿಡುಗಡೆ ಬಳಿಕ ಇನ್ನಷ್ಟು ಬೇಡಿಕೆ ಕುದುರಿಸಿಕೊಳ್ಳುವ ಜೊತೆಗೆ ಇನ್ನಷ್ಟು ಅಭಿಮಾನಿಗಳನ್ನು ಪಡೆದಿರುವ ನಟಿ ತಮನ್ನಾ ಹೋದಲ್ಲಿ, ಬಂದಲ್ಲಿ ಫ್ಯಾನ್ಸ್​ ಮುತ್ತಿಗೆ ಹಾಕುವುದು ವಿಶೇಷವೇನಲ್ಲ. ಅಷ್ಟಕ್ಕೂ ಚಿತ್ರ ತಾರೆಯರನ್ನು ತಮ್ಮ ದೇವರೆಂದೇ ನಂಬುವ ಅದೆಷ್ಟೋ ಫ್ಯಾನ್ಸ್​ ಇದ್ದಾರೆ. ತಮ್ಮ ಇಷ್ಟದ ತಾರೆಯರನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಿ ಕಣ್ತುಂಬಿಸಿಕೊಳ್ಳುವುದೇ ಕೆಲವರಿಗೆ ಜೀವನದ ಅತಿದೊಡ್ಡ ಕನಸಾಗಿರುತ್ತದೆ. ಅಂಥ ಸಂದರ್ಭದಲ್ಲಿ  ಸಾರ್ವಜನಿಕ ಸ್ಥಳಗಳಲ್ಲಿ (public place) ಕಾಣಿಸಿಕೊಂಡರೆ ಮುಗಿದೇ ಹೋಯ್ತು. ಇದೇ ಕಾರಣಕ್ಕೆ ನಟ-ನಟಿಯರು ಎಲ್ಲಿಯೇ ಹೋದರೂ ಅವರಿಗೆ ಟೈಟ್​ ಸೆಕ್ಯುರಿಟಿ ಇರುತ್ತದೆ. ಹಲವು ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಮುನ್ನುಗ್ಗಿ ಬರುವ ಅಭಿಮಾನಿಗಳನ್ನು ತಡೆದಿರುವುದುಂಟು. ಎಷ್ಟೋ ಸಮಯದಲ್ಲಿ ತೀರಾ ಕಿರಿಕಿರಿಯಾಗಿ ಖುದ್ದು ನಟ-ನಟಿಯರೇ ಅವರನ್ನು ತಳ್ಳಿರುವುದೂ ಉಂಟು. ಅಂಥ ಸಂದರ್ಭಗಳಲ್ಲಿ ಟ್ರೋಲ್​ಗೆ ಒಳಗಾಗುವುದೂ ಸಹಜವೇ.

Viral Video: ಅಭಿಮಾನಿಯ ಈ ಪ್ರೀತಿಯ ಪರಿಗೆ ನಟಿ ತಮನ್ನಾ ಕಣ್ಣೀರ ಧಾರೆ!

ನಟಿ ತಮನ್ನಾ ಅವರು   ಕೇರಳದ ಕೊಲ್ಲಂನಲ್ಲಿ ಭೇಟಿ ನೀಡಿದ್ದಾಗ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗುತ್ತಿದೆ. ನಿನ್ನೆ ಸೋಮವಾರ ಕೇರಳದ ಕೊಲ್ಲಂನಲ್ಲಿ ಮಳಿಗೆಯೊಂದರ ಉದ್ಘಾಟನೆಗೆ ತಮನ್ನಾ  ಆಗಮಿಸಿದ್ದರು. ಇವರ ಬರುವಿಕೆಯ ಸುದ್ದಿ ತಿಳಿಯುತ್ತಿದ್ದಂತೆಯೇ ನಟಿಯನ್ನು ನೋಡಲು ಸಹಸ್ರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಸಹಜವಾಗಿ ನಟಿಗೆ ಬಿಗಿ ಭದ್ರತೆ (Security) ಒದಗಿಸಲಾಗಿತ್ತು. ಬ್ಯಾರಿಕೇಡ್​ ಹಾಕಲಾಗಿತ್ತು. ಟೈಟ್​ ಸೆಕ್ಯುರಿಟಿ ನೀಡಲಾಗಿತ್ತು. ಆದರೆ ಅಭಿಮಾನ ಅತಿರೇಕಕ್ಕೆ ಹೋದಾಗ ಏನೆಲ್ಲಾ ಆಗಬಹುದು ಎನ್ನುವುದನ್ನು ಇದಾಗಲೇ ಸಾಕಷ್ಟು ಘಟನೆಗಳಲ್ಲಿ ನೋಡಿದ್ದೇವೆ. ಇಲ್ಲಿ ಕೂಡ ಅದೇ ರೀತಿ ಆಗಿದೆ. ಸೆಕ್ಯುರಿಟಿ ಎಷ್ಟಿದ್ದರೇನು? ನಟಿಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜೀವವನ್ನೇ ಪಣಕ್ಕಿಡಲು ತಯಾರಿದ್ದ ಎನ್ನುವಂತಿದ್ದ ಯುವಕನೊಬ್ಬ ಬ್ಯಾರಿಕೇಡ್​ ಹಾರಿ, ಸೆಕ್ಯುರಿಟಿಯನ್ನೂ ಲೆಕ್ಕಿಸದೇ ನಟಿಯ ಬಳಿ ಬಂದಿದ್ದಾನೆ.

ಅರೆಕ್ಷಣ ಗೊಂದಲದ ವಾತಾವರಣ ಉಂಟಾಗಿದೆ. ಆಗ ಅಲ್ಲಿನ ಭದ್ರತಾ ಸಿಬ್ಬಂದಿ ಆ ಯುವಕನನ್ನು ತಳ್ಳಿದ್ದಾರೆ, ದೂರ ಹೋಗುವಂತೆ ಹೇಳಿದ್ದಾರೆ. ಆದರೆ ಪಟ್ಟು ಬಿಡದ ಯುವಕ  ಪ್ಲೀಸ್​ ಪ್ಲೀಸ್​ ಒಂದೇ ಒಂದು ಸೆಲ್ಫಿ ಎಂದಿದ್ದಾನೆ. ಸೆಕ್ಯುರಿಟಿ ಗಾರ್ಡ್​ಗಳು (Security guard) ತಳ್ಳುತ್ತಿದ್ದರೂ ಅವರಿಗೆ ಆತ ಕೇರೇ ಮಾಡದೇ ನಟಿಯ ಬಳಿ ರಿಕ್ವೆಸ್ಟ್​ ಮಾಡಿಕೊಂಡಿದ್ದಾನೆ. ಕಾರ್ಯಕ್ರಮದ ಭದ್ರತೆಗಾಗಿ ನೇಮಿಸಿದ್ದ ಬೌನ್ಸರ್​ಗಳೂ ಆತನನ್ನು ತಳ್ಳುತ್ತಿದ್ದಾರೆ. ಇವನ ಕಥೆ ಮುಗೀತು ಎಂದುಕೊಂಡವರೇ ಹೆಚ್ಚು. ಅದರೆ ಕುತೂಹಲ ಎಂಬಂತೆ ಈತನ ಈ ಸ್ಥಿತಿಗೆ ನಟಿ ತಮನ್ನಾ ಮರುಗಿದ್ದಾರೆ. ಇರಲಿ ಬಿಡಿ ಒಂದು ಸೆಲ್ಫಿಗೆ ಆತನನ್ನು ಬಿಟ್ಟುಬಿಡಿ ಎಂದು ಭದ್ರತಾ ಸಿಬ್ಬಂದಿಗೆ ಹೇಳಿದ್ದಾರೆ. ನಂತರ ಒಂದು ಸೆಲ್ಫಿ ತೆಗೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಬದುಕಿದ್ದೂ ಸಾರ್ಥಕವಾಯ್ತು ಎನ್ನುವ ಧನ್ಯತಾ ಭಾವದೊಂದಿಗೆ ಯುವಕ ಸೆಲ್ಫಿ ಕ್ಲಿಕ್ಕಿಸಿ ವಾಪಸಾಗಿದ್ದಾನೆ.   ನಟಿಯ ಔದಾರ್ಯಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ. 

ಶಿವರಾಜ್‌ಕುಮಾರ್ ಅಭಿನಯದ 'ಜೈಲರ್' ಸಾಂಗ್​ ರಿಲೀಸ್: ತಮನ್ನಾ ಹಾಟ್​ನೆಸ್​ಗೆ ಫ್ಯಾನ್ಸ್​ ಫಿದಾ

 

Latest Videos
Follow Us:
Download App:
  • android
  • ios