ನಟಿ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಪ್ರೀತಿ ಬ್ರೇಕ್ ಅಪ್ ಆಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ತಮನ್ನಾ ಮೊದಲ ಬಾರಿ ಪ್ರೀತಿ ಕುರಿತು ಮಾತನಾಡಿದ್ದಾರೆ. ಮಾತುಗಳನ್ನೇ ನೋವು ಹೊರಹಾಕಿದ್ರಾ ತಮನ್ನಾ? 

ಮುಂಬೈ(ಮಾ.07) ಬಾಲಿವುಡ್ ನಟಿ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಸುದೀರ್ಘ ದಿನಗಳ ಸಂಬಂಧಕ್ಕೆ ಬ್ರೇಕ್ ಬಿದ್ದಿದೆ ಅನ್ನೋದು ಇದೀಗ ಬಲವಾಗಿ ಕೇಳಿಬರುತ್ತಿದೆ. ಕಳದೆ ಕೆಲ ವರ್ಷಗಳಿಂದ ಈ ಜೋಡಿ ಪ್ರೀತಿಯಲ್ಲಿ ವಿಹರಿಸುತ್ತಿತ್ತು. ಅಧಿಕೃತವಾಗಿ ಈ ಜೋಡಿ ಎಲ್ಲೂ ಹೇಳದಿದ್ದರೂ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದೀಗ ತಮನ್ನಾ ಹಾಗೂ ವಿಜಯ್ ವರ್ಮಾ ನಡುವಿನ ಸಂಬಂಧ ಮುರಿದು ಬಿದ್ದಿದೆ ಅನ್ನೋದು ಬಾಲಿವುಡ್ ಮಾತ್ರವಲ್ಲ ಅಭಿಮಾನಿಗಳಲ್ಲು ಕೋಲಾಹಲ ಸೃಷ್ಟಿಸಿದೆ. ಬ್ರೇಕ್ ಅಪ್ ಸುದ್ದಿ ಬಳಿಕ ತಮ್ನನಾ ಹಾಗೂ ವಿಜಯ್ ವರ್ಮಾ ಯಾವುದೇ ಹೇಳಿಕೆ ನೀಡಿಲ್ಲ, ಪೋಸ್ಟ್ ಮಾಡಿಲ್ಲ. ಆದರೆ ಇದೀಗ ಮೊದಲ ಬಾರಿಗೆ ತಮನ್ನಾ ಭಾಟಿಯಾ ನೋವು ಹೊರಹಾಕಿದ್ದಾರೆ. ಪ್ರೀತಿ, ಸಂಬಂಧ ಕುರಿತು ಮಾತನಾಡಿದ್ದಾರೆ.

ವಿಜಯ್ ವರ್ಮಾ ಜೊತೆ ಬ್ರೇಕ್ ಅಪ್ ಆಗಿದೆ ಅನ್ನೋ ಮಾತುಗಳು ಎಲ್ಲೆಡೆ ಕೇಳಿಬರುತ್ತಿರುವ ನಡುವೆ ತಮನ್ನಾ ಭಾಟಿಯಾ ಆಡಿದ ಮಾತುಗಳು ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರೀತಿಗೆ ಮಿತಿಗಳಿರಬಾರದು. ಅನಿಯಮತಿ ಪ್ರೀತಿ ಸಿಗಬೇಕು. ಅದು ಪೋಷಕರಾಗಿರಬಹುದು, ಗೆಳೆಯರಾಗಿರಹದು ಮುದ್ದಿನ ಸಾಕು ಪ್ರಾಣಿಗಳಾಗಿರಬಹುದು. ಆದರೆ ಪ್ರೀತಿ ಯಾವತ್ತೂ ಯಾಂತ್ರಿಕವಾಗಬಾರದು ಎಂದು ತಮನ್ನಾ ಸೂಕ್ಷವಾಗಿ ಹೇಳಿದ್ದಾರೆ. ಇದರ ಜೊತೆಗೆ ಪ್ರೀತಿ ಒನ್ ಸೈಡೆಡ್ ಕುರಿತು ಮಾತನಾಡಿದ್ದಾರೆ.

ವಿಜಯ್ ವರ್ಮಾ ಮೊದಲು ಕೊಹ್ಲಿ ಸೇರಿ ಮೂವರ ಜೊತೆ ಡೇಟಿಂಗ್ ಮಾಡಿದ್ರಾ ತಮನ್ನಾ?

ಬಹುತೇಕರು ಪ್ರೀತಿ ಎಂದರೇನು? ಸಂಬಂಧ ಎಂದರೇನು? ಇವೆರನ್ನು ಗೊಂದಲದಲ್ಲೇ ನೋಡುತ್ತಾರೆ. ಪ್ರೀತಿಯಲ್ಲಿ ಯಾವುದೇ ಷರತ್ತುಗಳು ಇರಬಾರದು. ಪ್ರೀತಿ ಯಾವತ್ತೂ ಷರತ್ತು ರಹಿತವಾಗಿರಬೇಕು, ಪ್ರೀತಿ ಅನಿಯಮಿತವಾಗಿರಬೇಕು. ಆದರೆ ಈ ರೀತಿಯ ಅನಿಯಮಿತ ಪ್ರೀತಿ ಯಾವತ್ತೂ ಒನ್ ಸೈಡೆಡ್ ಆಗಿರುತ್ತೆ. ಪ್ರೀತಿ ನಮ್ಮೊಳಗಿನ ಭಾವನೆ, ಸಂಬಂಧ. ನಿಮಗೆ ಮತ್ತೊಬ್ಬರ ಬಳಿ ಇರುವ ಕಾಳಜಿ, ಪ್ರೀತಿ, ಸಂಬಂಧ ಎಲ್ಲವೂ ಪ್ರೀತಿಯೆ. ನಾನು ಯಾರನ್ನಾದರು ಪ್ರೀತಿಸಿದರೆ ಅವರನ್ನು ಬಂಧನದಲ್ಲಿಡಲು ನಾನು ಇಷ್ಟಪಡುವುದಿಲ್ಲ ಎಂದು ತಮನ್ನಾ ಹೇಳಿದ್ದಾರೆ.

ತಮನ್ನಾ ಈ ಹೇಳಿಕೆ ಇದೀಗ ಹಲವು ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಕಾರಣ ತಮನ್ನಾ ಮನಸ್ಸು ತುಂಬಿ ಪ್ರೀತಿಸಿದರೂ ವಿಜಯ್ ವರ್ಮಾ ಬಳಿಯಿಂದ ಆ ಪ್ರೀತಿ ಸಿಗಲಿಲ್ಲ ಅನ್ನೋ ದಾಟಿಯಲ್ಲಿ ಮಾತನಾಡಿದ್ದಾರೆ. ಇಷ್ಟೇ ಅಲ್ಲ ಪ್ರೀತಿಯಲ್ಲಿ ಷರತ್ತುಗಳು ಸರಿಯಲ್ಲ, ಸಾಧ್ಯವೂ ಇಲ್ಲ ಎಂದು ಹೇಳುವ ಮೂಲಕ ನಟಿ ಸಂಬಂಧದಲ್ಲಿ ಈ ರೀತಿಯ ಷರತ್ತುಗಳಿದ್ದ ಕಾರಣದಿಂದ ಹೊರಬಂದಿರುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಉದ್ಯಮಿ, ಲೇಖಕ ಮತ್ತು ಜೀವನಶೈಲಿ ತರಬೇತುದಾರ ಲ್ಯೂಕ್ ಕೌಟಿನ್ಹೋ ಜೊತೆಗಿನ ಮಾತುಕತೆ ವೇಳೆ ತಮನ್ನಾ ಈ ಮಾತುಗಳನ್ನಾಡಿದ್ದಾರೆ. ಅನೇಕ ಜನರು ಪ್ರೀತಿಯನ್ನು ಸಂಬಂಧವೆಂದು ನೋಡುತ್ತಾರೆ. ಕೇವಲ ಪ್ರೇಮ ಸಂಬಂಧಗಳಲ್ಲಿ ಮಾತ್ರವಲ್ಲ, ಸ್ನೇಹದಲ್ಲಿಯೂ ಸಹ. ಅವರ ಪ್ರಕಾರ, ಅವರ ದೃಷ್ಟಿಯಲ್ಲಿ ನಿಜವಾದ ಪ್ರೀತಿ ಎಂದರೆ ಯಾವುದೇ ಷರತ್ತುಗಳಿಲ್ಲದಿರುವುದು ಎಂದಿದ್ದಾರೆ.

ತಮನ್ನಾ ಅವರ ಪ್ರಕಾರ, ಪ್ರೀತಿ ಯಾವಾಗಲೂ ಒಂದೇ ಆಗಿರುತ್ತದೆ, ಅದು ಸಾಕುಪ್ರಾಣಿಗಳ ಮೇಲಿನ ಪ್ರೀತಿಯಾಗಿರಲಿ, ಪೋಷಕರ ಮೇಲಿನ ಪ್ರೀತಿಯಾಗಿರಲಿ ಅಥವಾ ಪ್ರೇಮಿಯ ಮೇಲಿನ ಪ್ರೀತಿಯಾಗಿರಲಿ ಅಥವಾ ಯಾರ ಮೇಲಾದರೂ ಆಗಿರಲಿ. ತಮನ್ನಾ ಹೇಳುತ್ತಾರೆ, "ನನಗೆ, ನಾನು ಯಾರನ್ನಾದರೂ ಪ್ರೀತಿಸಿದರೆ, ನಾನು ಅವರಿಗೆ ಸ್ವಾತಂತ್ರ್ಯವನ್ನು ನೀಡಬೇಕು. ನೀವು ನಿಮ್ಮ ಆಲೋಚನೆಗಳನ್ನು ಹೇರಿ ಪ್ರೀತಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. 

ತಮನ್ನಾ ಭಾಟಿಯಾ ಬ್ರೇಕ್ ಅಪ್
ನಟಿ ತಮನ್ನಾ ತಮ್ಮ ಬ್ರೇಕ್ಅಪ್ ಕುರಿತು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಪರೋಕ್ಷವಾಗಿ ನೋವು ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಪಾಡ್‌ಕಾಸ್ಟ್ ವಿಡಿಯೋದಲ್ಲಿ ತಮನ್ನಾ ಆಡಿದ ಮಾತುಗಳು ಇದೀಗ ಅಭಿಮಾನಿಗಳಲ್ಲಿ ಕೋಲಾಹಲ ಸೃಷ್ಟಿಸಿದೆ.

ಟ್ರೆಂಡ್ ಆಗುತ್ತಿದೆ ತಮನ್ನಾ ಭಾಟಿಯಾ ಬ್ಲಾಕ್ ಡ್ರೆಸ್ ಫ್ಯಾಶನ್, ಡಬಲ್ ಮಾಡಲಿದೆ ಸೌಂದರ್ಯ