ತೈಮೂರ್ ಅಲಿ ಖಾನ್ ಇತ್ತೀಚೆಗಷ್ಟೇ ಅಮ್ಮ ಕರೀನಾ ಕಪೂರ್ ಖಾನ್ ಜೊತೆ ಹೊರಗೆ ಕಾಣಿಸಿಕೊಂಡಿದ್ದ. ಈಗ ಪುಟ್ಟ ತೈಮೂರ್ ಚಕ್ ಚಕ್‌ ಅಂತ ತನ್ನ ಫೋಟೋ ಕ್ಲಿಕ್ಕಿಸೋ ಮಾಧ್ಯಮದವರನ್ನ ಬಹಳ ಬೇಗ ಗುರುತು ಹಿಡಿಯುತ್ತಾನೆ. ತನ್ನ ಮತ್ತು ಅಮ್ಮನ ಫೋಟೋ ತೆಗೆಯೋ ಮೀಡಿಯಾಗೆ ಪುಟ್ಟ ಕಂದ ಏನ್ ಹೇಳಿದ್ದಾನೆ ಕೇಳಿ..

ಇದೀಗ ತೈಮೂರ್‌ನ ವಿಡಿಯೋ ವೈರಲ್ ಆಗ್ತಿದ್ದು, ಕ್ಯಾಮೆರಾಮೆನ್ ಕರೀನಾ ಜೀ ಎಂದು ಕರೆದಾಗ ತೈಮೂರ್ ತಿರುಗಿ ನೋ ಫೋಟೋಸ್ ಎಂದಿದ್ದಾನೆ. ಇದನ್ನು ನೋಡಿ ಕರೀನಾ ಮೀಡಿಯಾ ಕಡೆ ಕೈ ಬೀಸಿ, ತೈಮೂರ್ ಕೈ ಹಿಡಿದು ಒಳಗೆ ನಡಿ ಎಂದು ಕರೆದೊಯ್ದಿದ್ದಾರೆ.

ಧರಂಶಾಲಾದಲ್ಲಿ ಸೈಫೀನಾ..! ನೋ ಫೋಟೋ ಎಂದ ಪುಟ್ಟ ತೈಮೂರ್..!

ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬೇಬೋ  ತೈಮೂರ್ ಜೊತೆ ಹಲವು ಕಡೆ ಕಾಣಿಸಿಕೊಳ್ಳುತ್ತಿದ್ದಾರೆ. ಪತಿ ಸೈಫ್ ಜೊತೆ ಹಿಮಾಚಲ ಪ್ರದೇಶಕ್ಕೆ ಹೋಗಿದ್ದ ನಟಿ ಈಗ ಮತ್ತೆ ಮುಂಬೈಗೆ ಮರಳಿದ್ದಾರೆ.

ತುಂಟ ತೈಮೂರ್‌ಗೆ ಫೋಟೋಸ್ ಅಂದ್ರೆ ಇಷ್ಟ ಇಲ್ಲ ಅನ್ಸುತ್ತೆ. ಹಿಂದೊಮ್ಮೆಯೂ ಫೋಟೋ ತೆಗೆಯುವಾಗ ನೋ ಫೋಟೋಸ್ ಎಂದಿದ್ದರು ಸೈಫ್ ಪುತ್ರ. ಸ್ಟಾರ್‌ ಕಿಡ್‌ಗಳಲ್ಲಿ ಐಶ್ವರ್ಯಾ ರೈ ಪುತ್ರಿಯೂ ಈ ಹಿಂದೆ ಫೋಟೋ ತೆಗೆಯುವಾಗ ಕಿರಿಕಿರಿಯಾಗಿದ್ದ ವಿಡಿಯೋ ವೈರಲ್ ಆಗಿತ್ತು.