ಆರೋಗ್ಯ ಏರುಪೇರಾಗಿ ಆಸ್ಪತ್ರೆ ದಾಖಲಾದ ತಬಲಾ ಮಾಂತ್ರಿಕ ಜಾಕಿರ್ ಹುಸೈನ್ ನಿಧನ!
ಭಾರತದ ತಬಲಾ ಮಾಂತ್ರಿಕ, ವಿಶ್ವದಲ್ಲೇ ಅತ್ಯಂತ ಜನಪ್ರಿಯ ಕಲಾವಿಧ ಜಾಕಿರ್ ಹುಸೈನ್ ನಿಧನರಾಗಿದ್ದಾರೆ. ಆರೋಗ್ಯ ಏರುಪೇರಾಗಿ ಆಸ್ಪತ್ರೆ ದಾಖಲಾಗಿದ್ದ ಜಾಕಿರ್ ಹುಸೈನ್ ನಿಧನರಾಗಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋ (ಡಿ.15) ಭಾರದ ಪದ್ಮ ಪ್ರಶಸ್ತಿ ವಿಜೇತ, ಅತ್ಯಂತ ಜನಪ್ರಿಯ ತಬಲಾ ಮಾಂತ್ರಿಕ ಜಾಕಿರ್ ಹುಸೈನ್ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡ ಬೆನ್ನಲ್ಲೇ ಜಾಕಿರ್ ಹುಸೈನ್‌ರನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಕಳೆದೊಂದು ವಾರದಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ಜಾಕಿರ್ ಹುಸೈನ್‌ಗೆ ಚಿಕಿತ್ಸೆ ಮುಂದುವರಿದಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಜಾಕಿರ್ ಹುಸೈನ್ ನಿಧನರಾಗಿದ್ದಾರೆ.
73ನೇ ವಯಸ್ಸಿನ ಜಾಕಿರ್ ಹುಸೈನ್ ಕಳೆದೊಂದು ವಾರದಿಂದ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೃದಯ ಸಂಬಂಧಿ ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಕಳೆದ ವಾರ ಆಸ್ಪತ್ರೆ ದಾಖಲಾಗಿದ್ದರು. ಈ ಕುರಿತು ಜಾಕಿರ್ ಹುಸೈನ್ ಆಪ್ತ, ಕಲಾವಿದ ರಾಕೇಶ್ ಚೌರಾಸಿಯಾ ಮಾಹಿತಿ ನೀಡಿದ್ದರು. ಇದೀಗ ಜಾಕಿರ್ ಹುಸೈನ್ ನಿಧನ ವಾರ್ತೆ ಭಾರತಕ್ಕೆ ತೀವ್ರ ನೋವುಂಟು ಮಾಡಿದೆ.
ಉಸ್ತಾದ್ ಜಾಕಿರ್ ಹುಸೈನ್ ಎಂದೇ ಖ್ಯಾತಿ ಗೊಂಡಿದ್ದ ತಬಲಾ ಮಾಂತ್ರಿಕ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಭಾರತದ ಶಾಸ್ತ್ರೀಯ ಸಂಗೀತ ಹಾಗೂ ವಿಶ್ವ ಸಂಗೀತಕ್ಕೆ ಜಾಕಿರ್ ಹುಸೈನ್ ಕೊಡುಗೆ ಅಪಾರವಾಗಿದೆ. 7ನೇ ವಯಸ್ಸಿಗೆ ತಬಲಾದಲ್ಲಿ ಸಾಧನೆ ಮಾಡಿದ ಜಾಕಿರ್ ಹುಸೈನ್, ವಿಶ್ವದೆಲ್ಲೆಡೆ ಸಂಗೀತ ಕಾರ್ಯಕ್ರಮ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪದ್ಮಶ್ರಿ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಾಕೀರ್ ಹುಸೇನ್-ಸಚಿನ್ ತೆಂಡೂಲ್ಕರ್ ಜುಗಲ್'ಬಂದಿ ಅಂತರ್ಜಾಲದಲ್ಲಿ ವೈರಲ್
ಮುಂಬೈನಲ್ಲಿ 1951ರಲ್ಲಿ ಹುಟ್ಟಿದ ಜಾಕಿರ್ ಹುಸೈನ್ ಭಾರತ ಕಂಡ ಅತ್ಯಂತ ಪ್ರತಿಭಾನ್ವಿತ ತಬಲಾ ಮಾಂತ್ರಿಕ. 1973ರಲ್ಲಿ ಜಾಕಿರ್ ಹುಸೈನ್ ಲಿವಿಂಗ್ ಮೆಟಿರಿಯಲ್ ವರ್ಲ್ಡ್ ಆಲ್ಬಮ್‌ನಲ್ಲಿ ತಬಲಾ ಮೂಲಕ ಭಾರಿ ಜನಪ್ರಿಯತೆ ಪಡೆದಿದ್ದರು. ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ಅನನ್ಯ ಕೊಡುಗೆ ನೀಡಿದ್ದಾರೆ. 1999ರಲ್ಲಿ ಬಿಡುಗಡೆಯಾದ ಮಲೆಯಾಳಂ ವಾನಪ್ರಸ್ಥಮ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಟರಾಗಿಯೂ ಗಮನಸೆಳೆದಿದ್ದಾರೆ.
ಇಸ್ತಾಂಬುಲ್ ಫಿಲ್ಮ್ ಫೆಸ್ಟಿವಲ್, ಮುಂಬೈ ಫಿಲ್ಮ್ ಫೆಸ್ಟಿವಲ್, ನ್ಯಾಷನಲ್ ಫಿಲ್ಮ್ ಅವಾರ್ಡ್, ಗ್ರ್ಯಾಮಿ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಜಾಕಿರ್ ಹುಸೈನ್‌ಗೆ ಸಂದಿದೆ. 2016ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಶ್ವೇತಭವನದಲ್ಲಿ ಆಯೋಜಿಸಿದ ಆಲ್ ಸ್ಟಾರ್ ಗ್ಲೋಬಲ್ ಕಾನ್ಸರ್ಟ್ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ನೀಡಿದ ಹೆಗ್ಗಳಿಗೆ ಜಾಕಿರ್ ಹುಸೈನ್‌ಗಿದೆ. 2018ರಲ್ಲಿ ಜಾಕಿರ್ ಹುಸೈನ್ ಸಾಧನೆ, ತಬಲಾ ಆರಂಭಿಕ ದಿನ ಸೇರಿದಂತೆ ಹಲವು ಕುತೂಹಲಗಳ ಪುಸ್ತಕ ಜಾಕಿರ್ ಹುಸೈನ್, ಎ ಲೈಫ್ ಇನ್ ಮ್ಯೂಸಿಕ್ ಪುಸ್ತಕ ಬಿಡುಗಡೆಯಾಗಿದೆ.