ಬಾಲಿವುಡ್‌ನ ಟಾಪ್ ನಟಿಯರಲ್ಲೊಬ್ಬರಾದ ತಾಪ್ಸಿ ಪನ್ನು ವಿವಾಹದ ಬಗ್ಗೆ ಬಾಲಿವುಡ್‌ನಲ್ಲಿ ಮಾತು ಕೇಳಿ ಬರುತ್ತಿದೆ. ಆದರೆ ಇಂಡಸ್ಟ್ರಿಯಲ್ಲಿ ಒಳ್ಳೊಳ್ಳೆ ಅವಕಾಶಗಳನ್ನು ಪಡೆದು ಬೆಳೆಯುತ್ತಿರುವ ನಟಿ ಮದುವೆ ಬಗ್ಗೆ ಯಾವ ನಿರ್ಧಾರ ಮಾಡ್ತಾರೆ ಅನ್ನೋದು ಕುತೂಹಲದ ವಿಷಯ.

ನಟಿ ತಾಪ್ಸಿ ಇತ್ತೀಚೆಗೆ ತಮ್ಮ ಮದುವೆ ಬಗ್ಗೆ ಮಹತ್ವದ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಮದುವೆ ಬಗ್ಗೆ ಮಾತನಾಡಿದ ತಪ್ಪಡ್ ನಟಿ, ಇದು ಮದುವೆ ಟೈಂ ಅಲ್ಲ, ಕೆರಿಯರ್ ಮೇಲೆ ಫೋಕಸ್ ಮಾಡಬೇಕಾದ ಸಮಯ ಎಂದಿದ್ದಾರೆ.

ಸೋನಾಕ್ಷಿ ಸಿನ್ಹಾಗೆ 'ಚೋರ್' ಎಂದ ಹುಮಾ ಖುರೇಷಿ! ಕಾರಣವೇನು?

ನನಗೆ ಇಂಡ್ಸ್ಟ್ರಿಯವರನ್ನು ಡೇಟ್ ಮಾಡೋಕೆ ಇಷ್ಟವಿಲ್ಲ. ನನ್ನ ಖಾಸಗಿ ವಿಷಯ ಖಾಸಗಿಯಾಗಿರಬೇಕು ಎಂದು ಹೇಳಿದ್ದಾರೆ. ಯಾರ ಬರ್ತ್‌ಡೇ ನನಗೆ ಮುಖ್ಯವೋ ಅಂತವರ ಜೊತೆಯಷ್ಟೇ ನಾನು ಫೋಟೋ ಶೇರ್ ಮಾಡುತ್ತೇನೆ. ಇದು ಮಾಥಿಯಾಸ್‌ಗೂ ಅನ್ವಯಿಸುತ್ತೆ. ಅವರೂ ನನ್ನ ಆತ್ಮೀರಲ್ಲೊಬ್ಬರು ಎಂದಿದ್ದಾರೆ.

ನನ್ನ ಲೈಫ್‌ನಲ್ಲಿ ಒಂದು ಘಟ್ಟ ತಲುಪುವ ತನಕ ನಾನು ಮದುವೆಯಾಗೋ ಬಗ್ಗೆ ಯೋಚಿಸುವುದಿಲ್ಲ ಎಂದಿದ್ದಾರೆ ತಾಪ್ಸಿ. ನಾನು ನಿಧಾನಿಸುವ ಬಗ್ಗೆ ಯೋಚಿಸುತ್ತಿದ್ದೇನೆ. ವರ್ಷಕ್ಕೆ 5 ಆರರ ಬದಲು ಎರಡರಿಂದ ಮೂರು ಸಿನಿಮಾ ಮಾಡುವ ಯೋಚಿಸುತ್ತಿದ್ದೇನೆ. ಹೀಗಿದ್ದರೆ ಮಾತ್ರ ನಾನು ನನ್ನ ಖಾಸಗಿ ಬದುಕಿಗೆ ಅಗತ್ಯ ಸಮಯವನ್ನು ನೀಡಬಲ್ಲೆ ಎಂದಿದ್ದಾರೆ.