ಇಡಿ, ಸಿಬಿಐನಂತ ತನಿಖಾ ಸಂಸ್ಥೆಗಳು ಹೆಚ್ಚು ಸೀರಿಯಸ್ ವಿಚಾರಗಳ ಬಗ್ಗೆ ತನಿಖೆ ನಡೆಸಬೇಕು. ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿನಟಿ ರಿಯಾ ಚಕ್ರವರ್ತಿಯನ್ನು ತನಿಖೆ ಮಾಡುವ ಬದಲು ಗಂಭೀರ ವಿಚಾರಗಳತ್ತ ತನಿಖಾ ಸಂಸ್ಥೆಗಳು ಗಮನ ಹರಿಸಬಹುದು ಎಂದಿದ್ದಾರೆ.

ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ರಿಯಾಳ ಬಗ್ಗೆ ತನಿಖೆ ನಿಲ್ಲಿಸಿ ಸೀರಿಯಸ್ ವಿಚಾರಗಳ ಬಗ್ಗೆ ತನಿಖೆ ಮಾಡಬೇಕು ಎಂದು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಹೇಳಿದ್ದಾರೆ.

ಕಂಗನಾಳ ಒಳಗಿನವರು-ಹೊರಗಿನವರು ಚರ್ಚೆಗೆ ವೈಬ್ರೇಟರ್‌ ಬೆಡಗಿ ಸ್ವರಾ ಪ್ರತಿಕ್ರಿಯೆ‌

ರಿಯಾ ಈಗ ಅನುಭವಿಸುತ್ತಿರುವುದು ನಿಜಕ್ಕೂ ಹಾರಿಬಲ್. ಸೋಷಿಯಲ್ ಮೀಡಿಯಾದಲ್ಲಿ ಒಂದೆರಡು ಬ್ಲೂ ಟಿಕ್(ವೇರಿಫೈಡ್ ಖಾತೆ) ಎಕೌಂಟ್‌ನಿಂದ ಬಂದ ವಿಚಾರಗಳು ಮತ್ತು ಅದಕ್ಕೆ ಸಿಕ್ಕಿದ ಬೆಂಬಲ ಒಬ್ಬ ವ್ಯಕ್ತಿಯನ್ನು ಸೀರಿಯಸ್ ಆರೋಪದಲ್ಲಿ ಹೇಗೆ ಸಿಕ್ಕಿ ಹಾಕಿಸುತ್ತದೆ ಎಂಬುದನ್ನು ಇಲ್ಲಿ ನೋಡಬಹುದು ಎಂದಿದ್ದಾರೆ.

ಅಕ್ರಮ ಹಣ ವರ್ಗಾವಣೆ ಬಗ್ಗೆ ಹೇಳುತ್ತಿದ್ದೇನೆ. ಇಡಿ ರಿಯಾಳ ಬಗ್ಗೆ ತನಿಖೆ ನಡೆಸುತ್ತಿದೆ. ಇವರು ನೀರವ್ ಮೋದಿ, ಮೆಹುಲ್ ಚಾಕ್ಸಿಯನ್ನು ಮರಳಿ ಕರೆತರಬೇಕು. ಸಿಬಿಐ ಸೀರಿಯಸ್ ವಿಚಾರ ತನಿಖೆ ಮಾಡೋದು ಬಿಟ್ಟು ಇದನ್ನು ಮಾಡುತ್ತಿದ್ದಾರೆ. ರಿಯಾ ಜೊತೆ ಏನು ಘಟಿಸಿದೆಯೂ ಅದು ನಿಜಕ್ಕೂ ನಾಚಿಗೆ ಮತ್ತು ಶಾಕಿಂಗ್ ಎಂದಿದ್ದಾರೆ.

ಸುಶಾಂತ್ ಹೆಸರು ಹೇಳಿದ್ದಕ್ಕೆ ಕುಟುಂಬಸ್ಥರಲ್ಲಿ ಕ್ಷಮೆ ಕೇಳಿದ ನಟಿ ಸ್ವರಾ ಭಾಸ್ಕರ್..!

ಎನ್‌ಸಿಬಿ ರಿಯಾ ಚಕ್ರವರ್ತಿಯನ್ನು ಬಂಧಿಸಿದ್ದು, ಸುಶಾಂತ್ ಪ್ರಕರಣದಲ್ಲಿ ಡ್ರಗ್ಸ್ ಆಂಗಲ್‌ನಲ್ಲಿ ತನಿಖೆ ನಡೆಸುತ್ತಿದೆ. ಡ್ರಗ್ಸ್ ಮಾಫಿಯಾದಲ್ಲಿ ರಿಯಾ ಚಕ್ರವರ್ತಿ ಸಕ್ರಿಯವಾಗಿದ್ದಳು ಎಂದು ಎನ್‌ಸಿಬಿ ಹೇಳಿದೆ.

ಮಾನಸಿಕ ಅನಾರೋಗ್ಯವಿದ್ದು, ಡ್ರಗ್ಸ್ ಎಡಿಕ್ಟ್ ಆಗಿದ್ದ ಒಬ್ಬನನ್ನು ಪ್ರೀತಿಸಿದ್ದಕ್ಕಾಗಿ ಮೂರು ತನಿಖಾ ಸಂಸ್ಥೆ ಮಹಿಳೆಯೊಬ್ಬರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ರಿಯಾ ಲಾಯರ್ ಸತೀಶ್ ಹೇಳಿದ್ದಾರೆ.