ಕಂಗನಾಳ ಒಳಗಿನವರು-ಹೊರಗಿನವರು ಚರ್ಚೆಗೆ ವೈಬ್ರೇಟರ್ ಬೆಡಗಿ ಸ್ವರಾ ಪ್ರತಿಕ್ರಿಯೆ
ನಟ ಸುಶಾಂತ್ ಸಿಂಗ್‌ರ ಸಾವಿನ ನಂತರ ಬಾಲಿವುಡ್ ಇಬ್ಭಾಗವಾಗಿದೆ. ಈ ಸಂಧರ್ಭದಲ್ಲಿ ಸುಶಾಂತ್ ಸಿಂಗ್ ಸಾವಿನ ಪರ ಮಾತನಾಡಲಿಲ್ಲ ಎಂದು ತಾಪ್ಸಿ ಮತ್ತು ಸ್ಟರಾರನ್ನೂ ಕಂಗನಾ ರಣಾವತ್ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಹೊರಗಿನಿಂದ ಬಂದು, ಬಿ ಗ್ರೇಡ್ ನಟಿಯರಾಗಿದ್ದಾರೆಂದೂ ಹೇಳಿದ್ದಾಳೆ. ಬಾಲಿವುಡ್‌ಗೆ ವೈಬ್ರೇಟರ್ ಪರಿಚಯಿಸಿದ ನಟಿ ಎಂದು ತಮ್ಮನ್ನು ಪರಿಚಯಿಸಿಕೊಳ್ಳುವ ನಟಿ ಸ್ವರಾ ಭಾಸ್ಕರ್ ಹೇಳಿದ್ದೇನು?
ಸುಶಾಂತ್ ಸಿಂಗ್ ರಜಪೂತ್‌ರನ್ನು ಸ್ವಜನಪಕ್ಷಪಾತ ಮತ್ತು ಪವರ್‌ನಿಂದ ಕೆಲವರು ಕಡೆಗಣಿಸಿದ್ದರು ಎಂಬ ಕಾರಣದಿಂದ ನಟ ಸುಶಾಂತ್ ಸಾವಿನ ನಂತರ ಹಿಂದಿ ಚಲನಚಿತ್ರೋದ್ಯಮ ಡಿವೈಡ್ ಆಗಿದೆ.
ಆದರೆ, ಹಿಂದಿ ಸಿನಿಮಾ ಇಂಡಸ್ಟ್ರಿಯನ್ನು ಕೋಲ್ಡ್ ಬ್ಲಡ್ ಹಾಗೂ ಹಾರ್ಟ್‌ಲೆಸ್ ಜನರು ಇರುವಂತೆ ತೋರಿಸುತ್ತಿರುವುದು ವಿಷಾದ ಎಂದು ನಟಿ ಸ್ವರಾ ಭಾಸ್ಕರ್ ಹೇಳುತ್ತಾರೆ.
ಕಂಗನಾ ರಣಾವತ್, ರಿಪಬ್ಲಿಕ್ ಟಿವಿಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಸ್ವರಾ ಮತ್ತು ತಾಪ್ಸಿ ಪನ್ನು ಸುಶಾಂತ್ ಪರವಾಗಿ ಮಾತನಾಡಲಿಲ್ಲ ಮತ್ತು ಬದಲಾಗಿ 'ಬಾಲಿವುಡ್ ಮಾಫಿಯಾಗಳನ್ನು' ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಸಿಎನ್ಎನ್-ನ್ಯೂಸ್ 18 ಜೊತೆ ಮಾತನಾಡಿದ ಸ್ವರಾ, 'ಬಾಲಿವುಡ್ ಅಷ್ಟೊಂದು ಕೆಟ್ಟದಾಗಿಲ್ಲ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಕ್ತಿ ಪ್ರದರ್ಶಿಸುವುದು ಕಷ್ಟ,' ಎಂದಿದ್ದಾರೆ.
....ಆದರೆ ಜೀವನ ಮತ್ತು ನಮ್ಮ ಸಮಾಜವೂ ಹಾಗೆಯೇ ಆಗಿದೆ. ಉದ್ಯಮ ಮುಕ್ತ ಮಾರುಕಟ್ಟೆಯಂತಿದೆ. ಇದು ಖಾಸಗಿ ಉದ್ಯಮ ಮತ್ತು ನಮ್ಮಲ್ಲಿ ಹೆಚ್ಚಿನವರು ಗುತ್ತಿಗೆ ಕಾರ್ಮಿಕರು. ಆದ್ದರಿಂದ, ಆ ರೀತಿಯ ನೆಗೆಟಿವ್ ರಚನೆ ಸಹಜ. ಹಾಗಂಥ ಯಾರಿಗೂ ಯಶಸ್ಸೇ ಸಿಕ್ಕಿಲ್ಲವೆಂದರ್ಥವಲ್ಲ,' ಎಂದಿದ್ದಾರೆ.
ಸುಶಾಂತ್ ಅವರ ಸಾವು ಉದ್ಯಮದಲ್ಲಿ ಔಟ್‌ಸೈಡರ್ ಇನ್‌ಸೈಡರ್ ಚರ್ಚೆಯನ್ನು ಹುಟ್ಟು ಹಾಕಿದೆ, ಇಂಡಸ್ಟ್ರಿಯ ಹಲವರು ಮುಂದೆ ಬಂದು ತಮ್ಮ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.
'ಎರಡು ಕಡೆಯವರು ತಮ್ಮ ಅಭಿಪ್ರಾಯಗಳನ್ನು ಸಮನಾಗಿ ಪ್ರಸ್ತುತಪಡಿಸುವ ಚರ್ಚೆಯಲ್ಲ ಇದು. ನಮ್ಮ ಹೆಸರನ್ನು ಈ ಇಡೀ ವಿಷಯಕ್ಕೆ ಎಳೆಯಲಾದ ಕಾರಣದಿಂದ ನಾನು, ತಾಪ್ಸೀ (ಪನ್ನು), ರಿಚಾ (ಚಾಧಾ) ಮತ್ತು ಅನುರಾಗ್ (ಕಶ್ಯಪ್) ಈಗ ಮಾತನಾಡಿದ್ದೇವೆ. ಇದರ ಬಗ್ಗೆ ಮಾತು ಆರಂಭಿಸಲು ನನಗೆ ಇಷ್ಟವಿರಲಿಲ್ಲ. ನನ್ನನ್ನು ಈ ಚರ್ಚೆಗೆ ಎಳೆಯಲಾಗಿದೆ. ಹಿಸ್ಟರಿಕ್ ಜನಸಮೂಹ ಸತ್ಯಗಳು ಅಥವಾ ತರ್ಕಗಳಿಲ್ಲದೆ ಈ ಸಂಭಾಷಣೆಯ ಸಂಪೂರ್ಣ ಚೌಕಟ್ಟನ್ನು ರಚಿಸಿ ಜನರನ್ನು ಕೆಣಕಲಾಗುತ್ತಿದೆ, ಎಂದಿದ್ದಾರೆ ಸ್ವರಾ.
...... ದುಃಖವೆಂದರೆ, ವಾಸ್ತವ ಅದಲ್ಲ. ಅಂತಹ ಬ್ರೈಟ್, ಪ್ರತಿಭಾವಂತ ಮತ್ತು ಯಶಸ್ವಿ ಸ್ಟಾರ್‌ನ ಆತ್ಮಹತ್ಯೆ ವೈಯಕ್ತಿಕ ದುರಂತದ ದಿಕ್ಕು ಬದಲಿಸುವುದು ಸರಿಯಲ್ಲ...... ಪ್ರತಿಯೊಬ್ಬರೂ ಒಂದು ಹೆಜ್ಜೆ ಹಿಂದಕ್ಕೆ ಹೋಗಿ 'ನಾವು ಏನು ಮಾಡುತ್ತಿದ್ದೇವೆ?' ಎಂದು ನಮ್ಮನ್ನು ನಾವು ಕೇಳಿಕೊಳ್ಳಬೇಕು. ಪೊಲೀಸರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಮತ್ತು ಅವರು ಅದನ್ನು ನ್ಯಾಯಯುತವಾಗಿ ಮಾಡುತ್ತಾರೆ ಎಂದು ನನಗೆ ಖಾತ್ರಿಯಿದೆ' ಎಂದು ಕಂಗನಾರ ಅರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ ಸ್ವರಾ.
ಕಂಗನಾ ಒಂದು ವಿಷಯದ ಬಗ್ಗೆ ಮಾತನಾಡುವಾಗ ಹಾಗೂ ಅದನ್ನು ಒಪ್ಪದವರ ಬಗ್ಗೆ ಮಾತನಾಡುವಾಗ ಒಂದು ಟೋನ್ ನಲ್ಲಿ ಹೇಳುವುದನ್ನು ರೂಢಿಸಿಕೊಂಡಿದ್ದಾರೆ. ಹಾಗಾಗಿ ಕಂಗನಾ ಹೇಳಿದ್ದಕ್ಕೆ ಆಶ್ಚರ್ಯವೇ ಇಲ್ಲ, ಎನ್ನುತ್ತಾರೆ ವೀರ್ ದೇ ವೆಡ್ಡಿಂಗ್ ನಟಿ.
....ರಾಷ್ಟ್ರೀಯ ಚಾನೆಲ್‌ನಲ್ಲಿ, ಸಾರ್ವಜನಿಕ ವೇದಿಕೆಯಲ್ಲಿ ಅನಗತ್ಯ ಚರ್ಚೆಯಲ್ಲಿ ನಮ್ಮ ಹೆಸರು ತಂದು, ನಮ್ಮನ್ನು ಚರ್ಚೆಯಲ್ಲಿ ಎಳೆದಾಗ ಸ್ವಲ್ಪ ಹಿಂಜರಿದೆ. ಫೈನ್. ಅವರಿಗೆ ವಾಕ್ ಸ್ವಾತಂತ್ರ್ಯವಿದೆ,' ಎಂದು ಕಂಗನಾರ 'ಬಿ-ಗ್ರೇಡ್ ನಟಿ' ಕಾಮೆಂಟಿಗೆ ಸ್ವರಾ ಉತ್ತರಿಸಿದರು.