Asianet Suvarna News Asianet Suvarna News

ಹೊಸವರ್ಷಕ್ಕೆ ಬಾಯ್​ಫ್ರೆಂಡ್​ ಜೊತೆ ಹಾರಿ ಹೋಗೋ ಪ್ಲ್ಯಾನ್​ ಮಾಡಿದ್ದ ಹೃತಿಕ್​ ಮಾಜಿ ಪತ್ನಿಗೆ ಹೀಗಾಗೋದಾ?

ಹೊಸವರ್ಷಕ್ಕೆ ಬಾಯ್​ಫ್ರೆಂಡ್​ ಜೊತೆ ವಿದೇಶಕ್ಕೆ ಹೋಗುವ ಪ್ಲ್ಯಾನ್​ ಮಾಡಿದ್ದ ಹೃತಿಕ್​ ರೋಷನ್​ ಮಾಜಿ ಪತ್ನಿ ಸುಸ್ಸಾನೇಗೆ ಹೀಗಾಗೋದಾ? ಆಗಿದ್ದೇನು?
 

Sussanne Khan boyfriend Arslan Goni denied entry inside airport as he forgets passport suc
Author
First Published Dec 30, 2023, 5:42 PM IST

ಹೃತಿಕ್​ ರೋಷನ್​ ಮತ್ತು ಸುಸ್ಸಾನೇ ಖಾನ್​ ವಿಚ್ಛೇದನ ಪಡೆದು ವರ್ಷಗಳೇ ಕಳೆದಿವೆ. ಮದ್ವೆಯಾಗಿರುವಾಗಲೇ ಕಂಗನಾ ರಣಾವತ್​ ಜೊತೆ ಅಫೇರ್​ ಇಟ್ಟುಕೊಂಡಿದ್ದ ಹೃತಿಕ್​ ಕೊನೆಗೂ ಅವರಿಗೂ ಕೈಕೊಟ್ಟು, ಸುಸ್ಸಾನೇ ಖಾನ್​ಗೂ ಡಿವೋರ್ಸ್​ ಕೊಟ್ಟು, ಸದ್ಯ  ಗಾಯಕಿ ಸಬಾ ಅಜಾದ್ ಜೊತೆ ಸಂಬಂಧದಲ್ಲಿದ್ದಾರೆ. ಇವರ ಲವ್ ವಿಚಾರ ಇದೀಗ ಗುಟ್ಟಾಗಿಯೇನು ಉಳಿದಿಲ್ಲ. ಕೆಲ ತಿಂಗಳ ಸಾರ್ವಜನಿಕ ಸ್ಥಳದಲ್ಲಿ ಸಬಾ- ಹೃತಿಕ್ ಇಬ್ಬರು ಲಿಪ್ ಕಿಸ್ ಮಾಡಿ ತಮ್ಮ ಸಂಬಂಧದ ಕುರಿತು ಪರೋಕ್ಷವಾಗಿ ತಿಳಿಸಿದ್ದರು. ಇದರ ವಿಡಿಯೋ ಭಾರಿ ಸದ್ದು ಮಾಡಿತ್ತು. ಸಬಾ ಜೊತೆ ಡೇಟಿಂಗ್ ಮಾಡುತ್ತಾ ಕೆಲ ವರ್ಷಗಳೇ ಆಗಿವೆ. ಕಳೆದ ವರ್ಷ ನವೆಂಬರ್‌ನಲ್ಲಿ ಹೃತಿಕ್ ರೋಷನ್- ಸಬಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ ಈ ಜೋಡಿ ಮಾತ್ರ ತುಟಿಕ್​ ಪಿಟಿಕ್​ ಅಂದಿರಲಿಲ್ಲ.  ಆದರೆ ಈಗ ಅವರಿಬ್ಬರು ಯಾವುದೇ ಹಿಂಜರಿಕೆ ಇಲ್ಲದೇ ತಮ್ಮ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾ ಕೆಲಸಗಳಿಂದ ಸಣ್ಣ ಬ್ರೇಕ್​ ತೆಗೆದುಕೊಂಡಿರೋ ನಟ,  ಅರ್ಜೆಂಟೀನಾದಲ್ಲಿ ಗರ್ಲ್​ಫ್ರೆಂಡ್​ ಜೊತೆ ಮೋಜು ಮಸ್ತಿಯಲ್ಲಿ ತೊಡಗಿದ್ದು, ಅದರ ಫೋಟೋಗಳನ್ನು ಕೆಲ ತಿಂಗಳ ಹಿಂದೆ ಖುಲ್ಲಂ ಖುಲ್ಲಾ ಆಗಿ ಶೇರ್ ಮಾಡಿಕೊಂಡಿದ್ದರು. ಮದುವೆಯ ಬಗ್ಗೆ ಏನೂ ಹೇಳದ ಈ ಜೋಡಿ ಮಾತ್ರ ಟೂರ್​ ಎಂಜಾಯ್​ ಮಾಡುತ್ತಿದ್ದು, ಅವರ ಫೋಟೋ ವೈರಲ್​ ಆಗುತ್ತಿವೆ.

ಇದನ್ನು ನೋಡಿ ಸುಸ್ಸಾನೇ ಖಾನ್​ ಸುಮ್ಮನೇ ಇರ್ತಾರೆಯೇ? ಮಾಜಿ ಪತಿ ಹೃತಿಕ್​ ರೋಷನ್​ಗೆ ಸರಿಯಾದ ತಿರುಗೇಟು ನೀಡುತ್ತಲೇ ಇದ್ದಾರೆ. ಹೃತಿಕ್ ರೋಷನ್ ಗೆಳತಿ ಸಬಾ ಆಜಾದ್ (Saba Azad) ಜೊತೆಗಿನ ಫೋಟೋಗಳನ್ನು ಶೇರ್​ ಮಾಡಿಕೊಂಡ ಎರಡು ದಿನಗಳಲ್ಲಿಯೂ ಸೂಸೇನ್​ ಖಾನ್​  ತಮ್ಮ ಸ್ನೇಹಿತ  ಅರ್ಸ್ಲಾನ್ ಗೋನಿಯೊಂದಿಗೆ ಇರುವ ವಿಡಿಯೋ ಒಂದನ್ನು ಶೇರ್​ ಮಾಡಿದ್ದರು. ರೊಮ್ಯಾಂಟಿಕ್​ ರೀಲ್ಸ್​ ಇದಾಗಿದ್ದು, ಇದನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು.  ಸೂಸೇನ್​ ಮತ್ತು  ಆರ್ಸ್ಲಾನ್ ಅವರ ರಜೆಯ ಕ್ಷಣಗಳನ್ನು ಇದರಲ್ಲಿ ನೋಡಬಹುದು. ನೈಟ್‌ಕ್ಲಬ್‌ನಲ್ಲಿ ಪಾರ್ಟಿಗೆ ಅಟೆಂಡ್​ ಆಗಿರೋ ಜೋಡಿ,  ತಡರಾತ್ರಿಯ ವೇಳೆ ರೊಮ್ಯಾಂಟಿಕ್​ ಮೂಡ್​ನಲ್ಲಿರುವುದನ್ನು ನೋಡಬಹುದಾಗಿತ್ತು.

ಮಾಜಿ ಗಂಡ ಅಂದ್ರೆ ನಿನ್ನಂಗಿರ್ಬೇಕಪ್ಪ ಅಂತ ಹೃತಿಕ್​ ರೋಷನ್ ಕಾಲೆಳೀತಿರೋ ನೆಟ್ಟಿಗರು​: ಅಷ್ಟಕ್ಕೂ ಆಗಿದ್ದೇನು?

ಮಾಜಿ ಪತಿ-ಪತ್ನಿ ಹೀಗೆ ತಮ್ಮ ಹೊಸ ಸ್ನೇಹಿತರ ಜೊತೆ ಜಾಲಿ ಮೂಡ್​​ನಲ್ಲಿ ಇರುವಾಗಲೇ ಸುಸ್ಸಾನೇ ಖಾನ್​ಗೆ ಈಗೊಂದು ಶಾಕಿಂಗ್​ ಎದುರಾಗಿದೆ. ಹೊಸ ವರ್ಷ ಆಚರಿಸುವ ಸಲುವಾಗಿ ಸುಸ್ಸಾನೇ ಅವರು ತಮ್ಮ ಬಾಯ್​ಫ್ರೆಂಡ್​ ಜೊತೆ ಫಾರಿನ್​ಗೆ ಹೋಗುವ ಪ್ಲ್ಯಾನ್​ ಮಾಡಿದ್ದರು. ಬಾಯ್​ಫ್ರೆಂಡ್​ ಜೊತೆ ಖುಷಿಯಿಂದ ಏನೋ ಏರ್​ಪೋರ್ಟ್​ ತಲುಪಿದ್ದಾರೆ. ಆದರೆ ಅಲ್ಲಿ ಎಡವಟ್ಟು ಆಗಿಹೋಗಿದೆ. ಏರ್​ಪೋರ್ಟ್​ನಲ್ಲಿ ಬ್ಯಾಗ್​ ನೋಡಿದಾಗ ಪಾಸ್​ಪೋರ್ಟೇ ಇರಲಿಲ್ಲ. ಆದ್ದರಿಂದ ಅವರನ್ನು ಒಳಗಡೆ ಬಿಡಲಿಲ್ಲ. ಇದು ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಮತ್ತೆ ಹೊಸದಾಗಿ ಫ್ಲೈಟ್​ ಬುಕ್​ ಮಾಡಿ ಈ ಜೋಡಿ ಹೋಗಬೇಕಿದೆ. ಇದನ್ನು ನೋಡಿ ಫ್ಯಾನ್ಸ್​ ಅಯ್ಯೋ ಅಂತಿದ್ದಾರೆ. ಹೀಗೆಲ್ಲಾ ಆಗಬಾರದಿತ್ತು ಅಂತಿದ್ದಾರೆ. 

ಇನ್ನು ಕೆಲವರು ತಾವು ಫಾರಿನ್​ ಟೂರ್​ಗೆ ಹೋಗುತ್ತಿರುವುದಾಗಿ ಪ್ರಚಾರ ಗಿಟ್ಟಿಸಿಕೊಳ್ಳಲು,ಮಾಜಿ ಪತಿಯ ಹೊಟ್ಟೆ ಉರಿಸಲು ಹೀಗೆ ಬೇಕಂತಲೇ ಪಾಸ್​ಪೋರ್ಟ್​ ಬಿಟ್ಟುಬಂದಂತೆ ನಾಟಕ ಮಾಡುತ್ತಿರುವುದಾಗಿಯೂ ಹೇಳುತ್ತಿದ್ದಾರೆ. ಅದೇನೆ ಇದ್ದರೂ ಸದ್ಯ ಇವರ ಟೂರ್​ ಕ್ಯಾನ್ಸಲ್​ ಆಗಿದೆ. ಕುತೂಹಲದ ಸಂಗತಿ ಎಂದರೆ, ಮೊನ್ನೆಯಷ್ಟೇ  ಹೃತಿಕ್​ ರೋಷನ್​, ಮಾಜಿ ಪತ್ನಿಯ ಲವರ್​ ಅನ್ನು ಬ್ರದರ್​ ಎಂದು ಕರೆದಿದ್ದು, ಹುಟ್ಟುಹಬ್ಬಕ್ಕೆ ವಿಷ್​ ಮಾಡಿದ್ದರು.  ಇದನ್ನು ನೋಡಿ, ನೆಟ್ಟಿಗರು  ಮಾಜಿ ಪತಿ ಅಂದ್ರೆ ನಿನ್ನಂಗಿರಬೇಕು ನೋಡಪ್ಪಾ ಅಂತಿದ್ದರು. ಅಂದಹಾಗೆ ಹೃತಿಕ್​ ಮತ್ತು ಸುಸ್ಸಾನೇ ಡಿವೋರ್ಸ್​ ಪಡೆದು 9 ವರ್ಷಗಳು ಕಳೆದಿವೆ. ಸೂಸೇನ್​ ಖಾನ್​ಗೆ ಈಗ 48 ವರ್ಷ ವಯಸ್ಸು. ಈಕೆಯ ಬಾಯ್​ಫ್ರೆಂಡ್​ಗೆ 37 ವರ್ಷ ವಯಸ್ಸಾದರೆ, ಹೃತಿಕ್​ ರೋಷನ್​ ಅವರಿಗೆ 49 ವರ್ಷ ವಯಸ್ಸು. 

2023ರಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಟಾಪ್​ 10 ಬಾಲಿವುಡ್​ ಸಿನಿಮಾಗಳ ಲಿಸ್ಟ್​ ಇಲ್ಲಿದೆ...

 

Follow Us:
Download App:
  • android
  • ios