ಮುಂಬೈ (ಜೂ. 14):  ನಟ ಸುಶಾಂತ್ ಸಿಂಗ್ ಅವರ ಸಾವು ಆತ್ಮಹತ್ಯೆ ಅಲ್ಲ. ಇದೊಂದು ಕೊಲೆ ಎಂದು ಸುಶಾಂತ್ ಚಿಕ್ಕಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸುಶಾಂತ್ ಚಿಕ್ಕಪ್ಪ ಆರ್.ಸಿ. ಸಿಂಗ್, ಸುಶಾಂತ್ ಸಾವಿನ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.  ಸುಶಾಂತ್ ಎಂದಿಗೂ ಧೈರ್ಯಗುಂದದ ಮನುಷ್ಯ. ಅವನು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯಲ್ಲಿ ಇದ್ದವನಲ್ಲ. ಆತನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ನಾಲ್ಕು ದಿನದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ದಿಶಾ ಸಾಲಿಯಾನ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಸಿಂಗ್ ಆರೋಪಿಸಿದ್ದಾರೆ.ಒಬ್ಬ ರಾಷ್ಟ್ರವಾದಿ ಯುವಕನ ಹತ್ಯೆ ಮಹಾರಾಷ್ಟ್ರದಲ್ಲಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್ ಶಾ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಂಗ್ ಒತ್ತಾಯ ಮಾಡಿದ್ದಾರೆ.

ಚಿಕ್ಕಪ್ಪ ಮಾಡಿರುವ ಆರೋಪಕ್ಕೆ ಸರಿಯಾಗಿ, ಕಳೆದ ಫೆಬ್ರವರಿ 20 ರಂದು ಕೆಆರ್‌ಕೆ ಬಾಕ್ಸ್ ಎಂಬ ಟ್ವೀಟ್ ಅಕೌಂಟ್‌ನಿಂದ ಕೆಲವರು ಸುಶಾಂತ್ ಅವರನ್ನು ಬಾಲಿವುಡ್‌ನಿಂದ ನಿಷೇಧಿಸಲು ನಿರ್ಧಿರಿಸಿದ್ದಾರೆಂದು ಟ್ವೀಟ್ ಮಾಡಿದ್ದನ್ನು ಇದೀಗ ಒಬ್ಬರು ಸೋಷಿಯಲ್ ಮೀಡಿಯಾದದಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಪ್ರತಿಭಾನ್ವಿತ ನಟನೊಬ್ಬನನ್ನು ಬಾಲಿವುಡ್‌ನಿಂದಲೇ ದೂರ ಮಾಡಲು ಕೆಲವು ದಿಗ್ಗಜರು ಸಂಚು ರೂಪಿಸಿದ್ದರೇ ಎಂಬ ಅನುಮಾನ ಮೂಡಿಸುತ್ತದೆ. 

ಸುಶಾಂತ್ ಕೊನೆಯ ಸೋಶಿಯಲ್ ಮೀಡಿಯಾ ಪೋಸ್ಟ್ ಹೇಳಿದ್ದ ಸಾವಿನ ಸತ್ಯ

ಮುಂಬೈನ ಬಾಂದ್ರಾದ ತಮ್ಮ ನಿವಾಸದಲ್ಲಿ ನಟ ಸುಶಾಂತ್ ಸಿಂಗ್ ಭಾನುವಾರ ಬೆಳಗ್ಗೆ ನೇಣಿಗೆ ಶರಣಾದ ಸ್ಥಿತಿಯಲ್ಲಿ ಸುಶಾಂತ್ ಪತ್ತೆಯಾಗಿದ್ದರು. ನಾಲ್ಕು ದಿನಗಳ ಹಿಂದಷ್ಟೇ ಅವರ ಮಾಜಿ ಮ್ಯಾನೇಜರ್ ಸಾಲಿಯಾನ್ ಸೂಸೈಡ್ ಮಾಡಿಕೊಂಡಿದ್ದರು. 

ಆತ್ಮಹತ್ಯೆಗೆ ಶರಣಾಗಿರುವ ಪ್ರತಿಭಾನ್ವಿತ ನಟ  ಸುಶಾಂತ್ ಸಿಂಗ್ ರಜಪೂತ್ ಸೋಶಿಯಲ್ ಮೀಡಿಯಾದಲ್ಲಿ ಕೊನೆಯದಾಗಿ ಬರೆದಿದ್ದ ಪೋಸ್ಟ್ ನಮ್ಮ ಕಣ್ಣುಗಳನ್ನು ತೇವ ಮಾಡುತ್ತದೆ.  ಜೂನ್ 3ರಂದು ಇನ್ಸ್ಟಾಗ್ರಾಮ್ ನಲ್ಲಿ  ದಿವಂಗತ ತಾಯಿ ನೆನೆದು ಬರೆದುಕೊಂಡಿದ್ದರು.

ಸುಶಾಂತ್ ಇಂಥ ತೀರ್ಮಾನ ತೆಗೆದುಕೊಂಡಿದ್ದಕ್ಕೆ ಇಡೀ ಬಾಲಿವುಡ್ ಕಂಬನಿ ಮಿಡಿಯುತ್ತಿದೆ. ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಮೂಲಕ ಮನೆ ಮಾತಾಗಿದ್ದ ನಟ ಇನ್ನು ನೆನಪು ಮಾತ್ರ. 

ಸುಶಾಂತ್ ಬಗ್ಗೆ ಮಾಜಿ ಪ್ರೆಯಸಿ ಆಡಿದ ಮಾತುಗಳಿವು