ಬಾಲಿವುಡ್​ ನಟ ಸುಶಾಂತ್​ ಸಿಂಗ್ ರಜಪೂತ್​​ ಆತ್ಮಹತ್ಯೆ| ಮುಂಬೈ ನಿವಾಸದಲ್ಲಿ ನೇಣಿಗೆ ಶರಣಾದ ಸುಶಾಂತ್ ಸಿಂಗ್| ‘ಧೋನಿ ಅನ್​ ಟೋಲ್ಡ್​​’ ಚಿತ್ರದ ಮೂಲಕ ಖ್ಯಾತರಾಗಿದ್ದ ಸಿಂಗ್​|  ಸುಶಾಂತ್ ಅವರ ಕೊನೆಯ ಸೋಶಿಯಲ್ ಮೀಡಿಯಾ ಪೋಸ್ಟ್

ಮುಂಬೈ (ಜೂ. 14) ಆತ್ಮಹತ್ಯೆಗೆ ಶರಣಾಗಿರುವ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ಸೋಶಿಯಲ್ ಮೀಡಿಯಾದಲ್ಲಿ ಕೊನೆಯದಾಗಿ ಬರೆದಿದ್ದ ಪೋಸ್ಟ್ ನಮ್ಮ ಕಣ್ಣುಗಳನ್ನು ತೇವ ಮಾಡುತ್ತದೆ. ಜೂನ್ 3ರಂದು ಇನ್ಸ್ಟಾಗ್ರಾಮ್ ನಲ್ಲಿ ದಿವಂಗತ ತಾಯಿ ನೆನೆದು ಬರೆದುಕೊಂಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಶಾಂತ್ ತಾವು ಮತ್ತು ತಮ್ಮ ತಾಯಿಯ ಫೋಟೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದರು. ಹಿಂದಿನ ಘಟನೆಗಳೆಲ್ಲ ಕಣ್ಣೀರಿನ ಹನಿಗಳಿಂದ ಆವಿಯಾಗಿದೆ. ಅಂತ್ಯವಿಲ್ಲದ ಕನಸುಗಳ ನಗೆಯಲ್ಲಿ ಕಾಣುತ್ತಿವೆ. ಇಬ್ಬರ (ತಾಯಿ ಮತ್ತು ತಾನು) ನಡುವೆ ಚೌಕಾಶಿ ಮಾಡುವುದೇನು? ಎಂಬುದನ್ನು ಬರೆದುಕೊಂಡಿದ್ದರು. ಒಂದರ್ಥದಲ್ಲಿ ಜೀವನ ಕ್ಷಣಿಕ ಎಂಬ ಮಾತುಗಳನ್ನೇ ಆಡಿದ್ದರು.

ಧೋನಿ ಅನ್ ಟೋಲ್ಡ್ ಸ್ಟೋರಿ ಹೇಳಿ ಯಾರಿಗೂ ಹೇಳದೆ ಹೋದ ಸುಶಾಂತ್

ಸುಶಾಂತ್ ಇಂಥ ತೀರ್ಮಾನ ತೆಗೆದುಕೊಂಡಿದ್ದಕ್ಕೆ ಇಡೀ ಬಾಲಿವುಡ್ ಕಂಬನಿ ಮಿಡಿಯುತ್ತಿದೆ. ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಮೂಲಕ ಮನೆ ಮಾತಾಗಿದ್ದ ನಟ ಇನ್ನು ನೆನಪು ಮಾತ್ರ. 

ಮುಂಬೈನ ಬಾಂದ್ರಾದ ತಮ್ಮ ನಿವಾಸದಲ್ಲಿ ನಟ ಸುಶಾಂತ್ ಸಿಂಗ್ ಭಾನುವಾರ ಬೆಳಗ್ಗೆ ನೇಣಿಗೆ ಶರಣಾದ ಸ್ಥಿತಿಯಲ್ಲಿ ಸುಶಾಂತ್ ಪತ್ತೆಯಾಗಿದ್ದರು. ನಾಲ್ಕು ದಿನಗಳ ಹಿಂದಷ್ಟೇ ಅವರ ಮಾಜಿ ಮ್ಯಾನೇಜರ್ ಸಾಲಿಯಾನ್ ಸೂಸೈಡ್ ಮಾಡಿಕೊಂಡಿದ್ದರು. 

View post on Instagram