Asianet Suvarna News Asianet Suvarna News

ಸುಶಾಂತ್ ಸಿಂಗ್ ಪ್ರೀತಿಯ ನಾಯಿ ನಿಧನ; 'ಗೆಳಯನ ಜೊತೆ ಸ್ವರ್ಗ ಸೇರಿದೆ' ಎಂದು ಸಹೋದರಿಯ ಭಾವುಕ ಪೋಸ್ಟ್

ಸುಶಾಂತ್ ಸಿಂಗ್ ಪ್ರೀತಿಯ ನಾಯಿ ಫಡ್ಜ್ ನಿಧನ ಹೊಂದಿದೆ. ಈ ಬಗ್ಗೆ ಸುಶಾಂತ್ ಸಹೋದರಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 

Sushant Singh Rajput pet dog Fudge dies and actor sister Priyanka says she is heartbroken sgk
Author
First Published Jan 17, 2023, 12:59 PM IST

ಬಾಲಿವುಡ್ ಖ್ಯಾತ ನಟ, ಲಾಕ್‌ಡೌನ್‌ನಲ್ಲಿ ಕಣ್ಮರೆಯಾದ ಸುಶಾಂತ್ ಸಿಂಗ್ ರಜಪೂತ್ ಇಲ್ಲ ಎಂದು ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸುಶಾಂತ್ ನಿಧನದ ಹಿಂದಿನ ಕಾರಣ ಇನ್ನೂ ಬಹಿರಂಗವಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ನಡುವೆ ಮತ್ತೊಂದು ಬೇಸರದ ಸುದ್ದಿ ಬಹಿರಂಗವಾಗಿದೆ. ಸುಶಾಂತ್ ಸಿಂಗ್ ಪ್ರೀತಿಯ ನಾಯಿ ಫಡ್ಜ್ ನಿಧನಹೊಂದಿದೆ. ಈ ಬಗ್ಗೆ ಸುಶಾಂತ್ ಸಹೋದರಿ ಪ್ರಿಯಾಂಕಾ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಫಡ್ಜ್ ನಿಧನ ಹೊಂದಿದೆ ಎನ್ನುವ ಸುದ್ದಿ ಬಹಿರಂಗವಾಗುತ್ತಿದ್ದಂತೆ ಅಭಿಮಾನಿಗಳು ಸುಶಾಂತ್ ಮುದ್ದಿನ ನಾಯಿ ಜೊತೆ ಇರುವ ಫೋಟೋಗಳನ್ನು ಶೇರ್ ಮಾಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. 

ಫಡ್ಜ್ ಜೊತೆ ಇರುವ ಸುಶಾಂತ್ ಸಿಂಗ್ ಫೋಟೋಗಳನ್ನು ಶೇರ್ ಮಾಡಿ ಪ್ರಿಯಾಂಕಾ ಸಿಂಗ್ ಸ್ನೇಹಿತನ ಜೊತೆ ನೀನು ಕೂಡ ಸ್ವರ್ಗ ಸೇರಿದೆ ಎಂದು ಹೇಳಿದ್ದಾರೆ. ಇಷ್ಟು ಕಾಲ ಫಡ್ಜ್. ನೀನು ಕೂಡ ನಿನ್ನ ಸ್ನೇಹಿತನ ಸ್ವರ್ಗದ ಟೆರಿಟರಿ ಸೇರಿಕೊಂಡೆ. ಶೀಘ್ರದಲ್ಲೇ ಅನುಸರಿಸಲಾಗುವುದು. ನಮ್ಮ ಛಿದ್ರವಾಗಿದೆ' ಎಂದು ಹೇಳಿದ್ದಾರೆ.

ಪ್ರಿಯಾಂಕಾ ಸಿಂಗ್ ಫೋಟೋಗಳಿಗೆ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ. ಸುಶಾಂತ್ ಮತ್ತು ಫಡ್ಜ್ ಸಂಬಂಧದ ಬಗ್ಗೆ ಪೋಸ್ಟ್ ಮಾಡಿ ಬೇಸರ ಹೊರಹಾಕುತ್ತಿದ್ದಾರೆ. ಫಡ್ಜ್ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ. ಸುಶಾಂತ್ ನಿಜವಾದ ಸ್ನೇಹಿತ ಸಂತೋಷವಾಗಿ ಇರಲು ಅವನ ಸ್ನೇಹಿತನ ಬಳಿ ಹೋದ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ಈ ಸ್ನೇಹ ಬಾಂಧವ್ಯ ಸ್ವರ್ಗದಲ್ಲೂ ಮುಂದುವರೆಯುತ್ತದೆ ಎಂದು ಭಾವಿಸಿದ್ದೇನೆ' ಎಂದು ಹೇಳಿದ್ದಾರೆ. 

ನಟ ಸುಶಾಂತ್​ ಸಿಂಗ್​ 'ಆತ್ಮ'ಕ್ಕೆ ಹೆದರಿ ಫ್ಲ್ಯಾಟ್​ ಖಾಲಿ! ಎರಡೂವರೆ ವರ್ಷದ ಬಳಿಕ ಸಿಕ್ಕ ಟೆನೆಂಟ್!

2018 ರಲ್ಲಿ ಸುಶಾಂತ್ ತನ್ನ ಟ್ವೀಟರ್ ಖಾತೆಯಲ್ಲಿ  ಫಡ್ಜ್ ಜೊತೆ ಆಟವಾಗುತ್ತಿದ್ದ ವಿಡಿಯೋವನ್ನು ಶೇರ್ ಮಾಡಿದ್ದರು. ನೀನು ನನ್ನನ್ನು ನೆನಪಿಸಿಕೊಂಡರೆ ಸಾಕು, ಉಳಿದವರೆಲ್ಲರೂ ಮರೆತರೂ ನಾನು ಹೆದರಲ್ಲ' ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಈಗ ಮತ್ತೆ ವೈರಲ್ ಆಗಿದೆ. 

ಸುಶಾಂತ್ ಸಿಂಗ್ ನಿಧನದ ಬಳಿಕ ಫಡ್ಜ್ ಅನ್ನು ಅವರ ತಂದೆ ಪಾಟ್ನಾಗೆ ಕರೆದುಕೊಂಡು ಹೋಗಿದ್ದರು. ಸುಶಾಂತ್ ಸೋದರ ಸೊಸೆ ಮಲ್ಲಿಕಾ ಸಿಂಗ್ ಫೋಟೋಗಳನ್ನು ಶೇರ್ ಮಾಡುತ್ತಿದ್ದರು. ಬಾಗಿಲು ತೆರೆದಾಗಲೆಲ್ಲಾ ಆಸಾದಾಯಕವಾಗಿ ನೋಡುತ್ತಾನೆ' ಎಂದು ಕ್ಯಾಪ್ಷನ್ ಹಾಕಿ ಪೋಟೋ ಹಂಚಿಕೊಂಡಿದ್ದರು. ಇದೀಗ ಸುಶಾಂತ್ ಇರುವ ಜಾಗಕ್ಕೆ ಅವರ ಪ್ರೀತಿಯ ನಾಯಿ ಕೂಡ ಹೋಗಿದೆ.

Sushant singh Death Case; ಶವಪರೀಕ್ಷೆ ಸಿಬ್ಬಂದಿ ಹೇಳಿಕೆ ನಂತರ ರಿಯಾ ಹಂಚಿಕೊಂಡ ಪೋಸ್ಟ್ ವೈರಲ್

ನಟ ಸುಶಾಂತ್ ಸಿಂಗ್ 2020ರಲ್ಲಿ ಮುಂಬೈನ ಬಾಂದ್ರಾ ಪ್ರದೇಶದಲ್ಲಿನ ಅವರ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಸುಶಾಂತ್ ಸಾವು ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಬಳಿಕ ಸುಶಾಂತ್ ಕುಟುಂಬ ಗರ್ಲ್ ಫ್ರೆಂಡ್ ರಿಯಾ ಚಕ್ರವರ್ತಿ ಮತ್ತು ಇತರ ಆರು ಮಂದಿಯ ವಿರುದ್ಧ ದೂರು ದಾಖಲಿಸಿದ್ದರು.  ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ರಿಯಾ ಚಕ್ರವರ್ತಿ ವಿರುದ್ಧ ಪ್ರಕಣ ದಾಖಲಾಗಿದೆ. ಸುಶಾಂತ್ ಪ್ರಕರಣ ಸಿಬಿಐ ಅಂಗಳದಲ್ಲಿದೆ. ಎರಡು ವರ್ಷಗಳ ತನಿಖೆಯ ನಂತರವೂ ಸುಶಾಂತ್ ಸಾವಿನ ಹಿಂದಿನ ಕಾರಣ ಬಹಿರಂಗವಾಗಿಲ್ಲ. 

 

Follow Us:
Download App:
  • android
  • ios