Sushant singh Death Case; ಶವಪರೀಕ್ಷೆ ಸಿಬ್ಬಂದಿ ಹೇಳಿಕೆ ನಂತರ ರಿಯಾ ಹಂಚಿಕೊಂಡ ಪೋಸ್ಟ್ ವೈರಲ್
ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಶವಪರೀಕ್ಷೆ ಸಿಬ್ಬಂದಿ ಹೇಳಿಕೆ ಬಳಿಕ ರಿಯಾ ಚಕ್ರವರ್ತಿ ಶೇರ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ.

ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ನಿಧನ ಹೊಂದಿ ಎರಡುವರೆ ವರ್ಷ ಕಳೆಯಿತು. ಆದರೂ ಸುಶಾಂತ್ ಸಾವಿನ ಹಿಂದಿ ರಹಸ್ಯ ಬಹಿರಂಗವಾಗಿಲ್ಲ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಾ ಭಾರಿ ಚರ್ಚೆಗೆ ಕಾರಣವಾಗಿದ್ದ ಸುಶಾಂತ್ ಸಿಂಗ್ ಪ್ರಕರಣ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಮುಂಬೈನ ಕೂಪರ್ ಆಸ್ಪತ್ರೆಯ ಶವಪರೀಕ್ಷೆ ನಿಬ್ಬಂದಿ ಹೇಳಿಕೆ. ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಶವಪರೀಕ್ಷೆ ಸಿಬ್ಬಂದಿಯ ಶಾಕಿಂಗ್ ಹೇಳಿಕೆ ಬಳಿಕ ಈ ಪ್ರಕರಣ ಮತ್ತೆ ಚರ್ಚೆಯಾಗುತ್ತಿದೆ. ಸುಶಾಂತ್ ದೇಹದ ಮೇಲೆ ಅನೇಕ ಗಾಯದ ಗುರುತುಗಳಿತ್ತು ಎಂದು ಸಿಬ್ಬಂದಿ ಇತ್ತೀಚಿಗಷ್ಟೆ ಹೇಳಿಕೆ ನೀಡಿದ್ದರು.
ಈ ಹೇಳಿಕೆ ವೈರಲ್ ಆದ ಬಳಿಕ ರಿಯಾ ಚಕ್ರವರ್ತಿ ಮೊದಲ ಬಾರಿಗೆ ಪೋಸ್ಟ್ ಶೇರ್ ಮಾಡಿದ್ದಾರೆ. ಸುಸಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಆತ್ಮಹತ್ಯೆ ಪ್ರಚೋದನೆ ಆರೋಪ ಎದುರಿಸುತ್ತಿದ್ದಾರೆ. ಇದೀಗ ಸಾಮಾಜಿಕ ಶೇರ್ ಮಾಡಿರುವ ಪೋಸ್ಟ್ ಅಚ್ಚರಿ ಮೂಡಿಸಿದೆ. 'ನೀವು ಬೆಂಕಿಯಲ್ಲಿ ನಡೆದಿದ್ದೀರಿ. ದೊಡ್ಡ ಪ್ರವಾಹದಿಂದ ಬದುಕುಳಿದಿದ್ದೀರಿ. ರಾಕ್ಷಸರ ವಿರುದ್ಧ ಹೋರಾಡಿ ಗೆದ್ದಿದ್ದೀರಿ. ನಿಮ್ಮ ಸ್ವಂತ ಶಕ್ತಿಯನ್ನು ಅನುಮಾನಿಸಿದಾಗ ಇದನ್ನು ನನಪಿಡಿ' ಎಂದು ಹೇಳಿದ್ದಾರೆ.
ಸುಶಾಂತ್ ಸಿಂಗ್ ಸಾವಿನ ಬಳಿಕ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಅನೇಕರು ಮುಗಿಬಿದ್ದಿದ್ದರು. ಸುಶಾಂತ್ ಸಿಂಗ್ ಮತ್ತು ರಿಯಾ ಚಕ್ರವರ್ತಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು. ಆದರೆ ಸುಶಾಂತ್ ಸಾವಿನ ಸಮಯದಲ್ಲಿ ಇಬ್ಬರೂ ಕಿತ್ತಾಡಿಕೊಂಡಿದ್ದರು ಎನ್ನಲಾಗಿತ್ತು. ಈ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಜೈಲು ವಾಸವನ್ನು ಅನುಭವಿಸಿದರು. ಸುಶಾಂತ್ ಸಾವಿನ ಪ್ರಕರಣ ಜಾರಿ ನಿರ್ದೇಶನಾಲಯ , ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ಕೇಂದ್ರ ತನಿಖಾ ದಳ ತನಿಖೆ ನಡೆಸುತ್ತಿದೆ. ಇನ್ನೂ ಅಂತಿಮ ವರದಿ ಬಹಿರಂಗವಾಗಿಲ್ಲ.
ಶವಪರೀಕ್ಷೆ ಸಿಬ್ಬಂದಿಯ ಹೇಳಿಕೆ
ಸುಶಾಂತ್ ಸಿಂಗ್ ರಜಪೂತ್ ಅವರ ಮರಣೋತ್ತರ ಪರೀಕ್ಷೆ ನಡೆಸಿದ ರೂಪ ಕುಮಾರ್ ಶಾ ಎರಡೂವರೆ ವರ್ಷಗಳ ಬಳಿಕ ಮಾತನಾಡಿದ್ದಾರೆ. 'ಸುಶಾಂತ್ ಸಿಂಗ್ ರಜಪೂತ್ ನಿಧನರಾದಾಗ ಕೂಪರ್ ಆಸ್ಪತ್ರೆಯಲ್ಲಿ ನಾವು ಐದು ದೇಹಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ವಿ. ಐದು ದೇಹಗಳಲ್ಲಿ ಒಂದು ವಿಐಪಿ ಶವವಾಗಿತ್ತು. ಮರಣೋತ್ತರ ಪರೀಕ್ಷೆ ಹೋದಾಗ ನಮಗೆ ಸುಶಾಂತ್ ಸಿಂಗ್ ಶವ ಎಂದು ಗೊತ್ತಾಯಿತು. ದೇಹದ ಮೇಲೆ ಹಲವು ಗುರುತುಗಳಿದ್ದವು. ಕುತ್ತಿಗೆ ಮೇಲೆ ಎರಡರಿಂದ ಮೂರು ಗುರುತುಗಳಿವೆ. ಪೋಸ್ಟ್ ಮಾರ್ಟಮ್ ಅನ್ನು ರೆಕಾರ್ಡ್ ಮಾಡಬೇಕಿತ್ತು. ಆದರೆ ಉನ್ನತ ಅಧಿಕಾರಿಗಳು ದೇಹದ ಚಿತ್ರಗಳನ್ನು ಮಾತ್ರ ಕ್ಲಿಕ್ ಮಾಡುವಂತೆ ಹೇಳಿದರು. ಅದರಂತೆ ಮಾಡಿದೆವು' ಎಂದರು.
Sushant Singh case; ನಿಮ್ಮ ಮೇಲೆ ನಂಬಿಕೆ ಇದೆ; ಶವಪರೀಕ್ಷೆ ಸಿಬ್ಬಂದಿ ಹೇಳಿಕೆ ನಂತರ ಸುಶಾಂತ್ ಸಹೋದರಿ ಮಾತು
'ನಾನು ಸುಶಾಂತ್‌ನ ಶವವನ್ನು ಮೊದಲ ಬಾರಿಗೆ ನೋಡಿದಾಗ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಅನಿಸಿತ್ತು. ಅದನ್ನು ನಾನು ಹಿರಿಯ ಅಧಿಕಾರಿಗಳಿಗೆ ಹೇಳಿದ್ದೆ. ಆದರೆ ನಾನು ನಿಯಮದ ಪ್ರಕಾರ ಕೆಲಸ ಮಾಡಬೇಕು. ಹಿರಿಯರ ಅಧಿಕಾರಿ ನನಗೆ ಫೋಟೋ ಕ್ಲಿಕ್ ಮಾಡಲು ಹೇಳಿದರು. ಆದಷ್ಟು ಬೇಗ ಶವ ಪರೀಕ್ಷೆ ಮಾಡಿ ಪೊಲೀಸರಿಗೆ ನೀಡಿ ಎಂದರು. ಹಾಗಾಗಿ ನಾವು ರಾತ್ರಿಯೇ ಮರಣೋತ್ತರ ಪರೀಕ್ಷೆ ನಡೆಸಿದ್ದೇವೆ' ಎಂದು ಹೇಳಿದರು.
ಸುಶಾಂತ್ ಸಿಂಗ್ ಸಹೋದರಿಯ ಪ್ರತಿಕ್ರಿಯೆ
ಸುಶಾಂತ್ ಸಿಂಗ್ ಸಹೋದರಿ ಶ್ವೇತಾ ಸಿಂಗ್ ಪ್ರತಿಕ್ರಿಯೆ ನೀಡಿದ್ದು, 'ಈ ಸಾಕ್ಷಿಯಲ್ಲಿ ಸ್ವಲ್ಪ ಸತ್ಯವಿದೆ, ಸಿಬಿಐ ಇದನ್ನು ನಿಜವಾಗಿಯೂ ಶ್ರದ್ಧೆಯಿಂದ ಪರಿಶೀಲಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ನೀವು ನ್ಯಾಯಯುತ ತನಿಖೆ ನಡೆಸಿ ಸತ್ಯವನ್ನು ನಮಗೆ ತಿಳಿಸುತ್ತೀರಿ ಎಂದು ನಾವು ಯಾವಾಗಲೂ ನಂಬಿದ್ದೇವೆ' ಎಂದು ಹೇಳಿದ್ದಾರೆ.