ನಟಿ ಅಂಕಿತಾ ಲೋಂಖಂಡೆ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಸ್ವಲ್ಪ ಆಕ್ಟೀವ್ ಆಗುತ್ತಿದ್ದಾರೆ. ಸುಶಾಂತ್ ಸಾವಿನ ನಂತರ ಮಾಧ್ಯಮಗಳಿಂದ ದೂರ ಉಳಿದಿದ್ದ ನಟಿ ಈಗ ಬ್ಯಾಕ್‌ ಟು ನಾರ್ಮಲ್‌ ಲೈಫ್‌.  ಅದರಲ್ಲೂ ಅಂಕಿತಾ ಸೆಲ್ಫಿ ಶೇರ್ ಮಾಡಿಕೊಂಡ ನಂತರ ನೆಟ್ಟಿಗರು ಕಾಲು ಎಳೆಯಲು ಪ್ರಾರಂಭಿಸಿದ್ದಾರೆ. 

ಸುಶಾಂತ್ ಸಿಂಗ್ ಮಾಜಿ ಗರ್ಲ್‌ಫ್ರೆಂಡ್ ವಿರುದ್ಧ ರಿಯಾ ದೂರು..? 

ಅಂಕಿತಾ ಪೋಸ್ಟ್‌:
ಕಾರಿನಲ್ಲಿ ಪ್ರಯಾಣಿಸುತ್ತಿರುವ ಅಂಕಿತಾ ವೈಟ್ ಔಟ್‌ಫಿಟ್‌ಗೆ ಬ್ಲಾಕ್‌ ಚೋಕರ್ ಹಾಗೂ ಬ್ಲಾಕ್ ಕೂಲಿಂಗ್ ಗ್ಲಾಸ್ ಧರಿಸಿದ್ದಾರೆ. ಬೂಮರಾಂಗ್ ಮಾಡಿ ಶೇರ್ ಮಾಡಿಕೊಂಡಿರುವ ಈ ವಿಡಿಯೋ ಹ್ಯಾಪಿ ವಿಡಿಯೋ ಎಂದಿದ್ದಾರೆ. ಅಲ್ಲದೆ ಇದರ ಜೊತೆಗೆ ತುಂಬಾ ಸಂತೋಷದಿಂದ ನಗುತ್ತಿರುವ ಬ್ಲಾಕ್ ಆಂಡ್ ವೈಟ್ ಫೋಟೋ ಶೇರ್ ಮಾಡಿಕೊಂಡು ' ನಾನು ನಾವಾಗಿದ್ದರೆ ಎಲ್ಲವೂ ಸುಂದರವಾಗಿರುತ್ತದೆ' ಎಂದು ಬರೆದುಕೊಂಡಿದ್ದಾರೆ. 

 

ಅದಾದ ನಂತರ ಮುಖ ಹತ್ತಿರಕ್ಕೆ ಫೋಟೋ ಕ್ಲಿಕಿಸಿ 'ನಾನು ಪರ್ಫೆಕ್ಟ್‌ ಆಗಿಲ್ಲ ಆದರೆ ನಾನು ನಾನಾಗಿರುವೆ' ಎಂದು ಬರೆದಿದ್ದಾರೆ. ಅಂಕಿತಾಳ ಪ್ರತಿಯೊಂದು ಫೋಟೋಗೂ 'Justice for Sushant' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಆದರೆ ಅಂಕಿತಾ ಯಾವ ಕಾಮೆಂಟ್‌ಗೂ ಪ್ರತಿಕ್ರಿಯೆ ನೀಡಿಲ್ಲ. 

ಅಂಕಿತಾ ಫ್ಲಾಟ್ ಇಎಂಐ ಸುಶಾಂತ್‌ರಿಂದ ಭರ್ತಿ; ಗೆಳತಿ ಬೆಂಬಲಕ್ಕೆ ಬಂದ ಬಾಯ್‌ಫ್ರೆಂಡ್ 

ಸುಶಾಂತ್ ವಿಚಾರವಾಗಿ ಅಂಕಿತಾಳನ್ನು ಟಾರ್ಗೆಟ್ ಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಬಾಯ್‌ ಫ್ರೆಂಡ್‌ ವಿಕ್ಕಿ ಜೊತೆ ಹಾಡೊಂದಕ್ಕೆ ಡ್ಯಾನ್ಸ್ ಮಾಡಿದ್ದರು. ಅದನ್ನು ನೆಟ್ಟಿಗರು ತಪ್ಪಾಗಿ ತಿಳಿದುಕೊಂಡು ಕಾಲೆಳೆಯಲು ಪ್ರಾರಂಭಿಸಿದ್ದರು. 'ನಿಜಕ್ಕೂ ಅಂಕಿತಾ ಇಷ್ಟೊಂದು ಖುಷಿಯಾಗಿದ್ದಾರಾ. ಯಾವ ನೋವು ಕಾಡುತ್ತಿಲ್ಲವೇ'? ಹಾಗೂ  'ನೀವು ಇಷ್ಟು ಬೇಗ ಬದಲಾಗುತ್ತೀರ ಎಂದುಕೊಂಡಿರಲಿಲ್ಲ' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.