ಜೈಲಿನಿಂದ ಹೊರಬಂದು ಮಾಧ್ಯಮಗಳ ವಿರುದ್ಧ ಹಾಗೂ ನೆರೆಮನೆಯ ವ್ಯಕ್ತಿ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ನಿರ್ಧಾರ ಮಾಡಿದ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಇದೀಗ ಸುಶಾಂತ್ ಸಿಂಗ್ ಮಾಜಿ ಗರ್ಲ್‌ಫ್ರೆಂಡ್ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ತನ್ನ ಬಗ್ಗೆ ಅಪಪ್ರಚಾರ ಮಾಡಿದ ಎಲ್ಲರ ವಿರುದ್ಧವೂ ರಿಯಾ ಚಕ್ರವರ್ತಿ ಕ್ರಮ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಎನ್‌ಸಿಬಿಯಿಂದ ಬಂಧನಕ್ಕೊಳಗಾಗಿದ್ದರು ನಟಿ ರಿಯಾ.

ಡೀಪ್ ನೆಕ್ ಬ್ಲೌಸ್: ಕಣ್ಸನ್ನೆ ಚೆಲುವೆಗೆ ಕ್ಲಾಸ್ ತಗೊಂಡ ನೆಟ್ಟಿಗರು

ಸುಶಾಂತ್ ಸಿಂಗ್ ಸಾವಿನ ಸಂದರ್ಭ ಸುಶಾಂತ್ ಮಾಜಿ ಗೆಳತಿ ಅಂಕಿತಾ ಲೋಖಂಡೆ ಬಹಳಷ್ಟು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಮಾಡಿದ್ದರು. ಈ ಮೂಲಕ ಸುಶಾಂತ್ ಸಾವಿಗೆ ನ್ಯಾಯ ಒದಗಿಸುವಂತೆ ಕೇಳಿಕೊಂಡಿದ್ದರು.

ಸುಶಾಂತ್ ಫ್ಯಾಮಿಲಿ ಕೂಡಾ ಅಂಕಿತಾ ಬೆಂಬಲಕ್ಕೆ ನಿಂತಿತ್ತು. ಅಂಕಿತಾ ಸುಶಾಂತ್ ಸಾವಿನ ನಂತರ ಹಲವು ಇಂಟರ್‌ವ್ಯೂಗಳನ್ನು ಕೊಟ್ಟಿದ್ದರು. ರಿಯಾಗೆ ಅ.7ರಂದು ಜಾಮೀನು ಸಿಕ್ಕಿತ್ತು. ರಿಯಾ ಸಹೋದರ ಶೋವಿಕ್ ಈಗಲೂ ಜೈಲಿನಲ್ಲಿದ್ದಾನೆ.