ಸಲ್ಮಾನ್ ಖಾನ್ ಸಿನಿಮಾ ರಾಧೆಗೆ ತೀವ್ರ ವಿರೋಧ ಸುಶಾಂತ್ ಅಭಿಮಾನಿಗಳಿಂದ ಬಾಯ್ಕಾಟ್ ರಾಧೆ ಟ್ರೆಂಡ್

ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಬಿಡುಗಡೆಯಾಗಿದೆ. ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಈ ಸಿನಿಮಾ ಟ್ರೆಂಡ್‌ಗಳಲ್ಲಿದೆ. ದಿಶಾ ಪಟಾನಿ, ರಂದೀಪ್ ಹೂಡಾ ಮತ್ತು ಜಾಕಿ ಶ್ರಾಫ್ ಮುಖ್ಯ ಪಾತ್ರಗಳಲ್ಲಿ ನಟಿಸಿದ ಈ ಸಿನಿಮಾ ಮಿಶ್ರ ವಿಮರ್ಶೆಗಳನ್ನು ಪಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈದ್ ಸಂದರ್ಭದಲ್ಲಿ ಸಲ್ಮಾನ್ ಅಭಿಮಾನಿಗಳಿಗೆ ಈ ಚಿತ್ರ ಬಂಪರ್ ಆದರೆ, ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಈಗ ಚಿತ್ರವನ್ನು ಬಹಿಷ್ಕರಿಸುವಂತೆ ಒತ್ತಾಯಿಸುತ್ತಿದ್ದಾರೆ. 'ಬಾಯ್ಕಟ್ ರಾಧೆ' ಟ್ಯಾಗ್ ಟ್ರೆಂಡ್ ಆಗಿದ್ದು ಕೆಲವರು ಸುಶಾಂತ್ ಇಲ್ಲದೆ ಬಾಲಿವುಡ್ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 

ರಜನಿ ಪುತ್ರಿಯಿಂದ ಸಿಎಂ ಪರಿಹಾರ ನಿಧಿಗೆ 1 ಕೋಟಿ ನೆರವು, ನಟ ಅಜಿತ್‌ನಿಂದ 25 ಲಕ್ಷ

ಸುಶಾಂತ್ (34) ಜೂನ್ 14 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟನ ನಿಧನವು ಅವರ ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಆಘಾತವನ್ನುಂಟು ಮಾಡಿತ್ತು. ಅವರ ಅನೇಕ ಅಭಿಮಾನಿಗಳು ಮತ್ತು ಕುಟುಂಬ ಸದಸ್ಯರು ನಟನಿಗೆ ನ್ಯಾಯ ಕೋರಿ ಒಗ್ಗೂಡಿದ್ದರು.

ನಟನ ಸಾವಿನ ಪ್ರಕರಣವನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ), ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಎಂಬ ಮೂರು ನೋಡಲ್ ಏಜೆನ್ಸಿಗಳು ತನಿಖೆ ನಡೆಸುತ್ತಿವೆ.