ತಾನು ಮತ್ತು ತನ್ನ ಕುಟುಂಬ ಸದಸ್ಯರು ತಮಿಳುನಾಡು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡಿದ್ದೇವೆ ಎಂದು ತಲೈವಾ ಪುತ್ರಿ ಸೌಂದರ್ಯ ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.

ತನ್ನ ಟ್ವೀಟ್‌ನಲ್ಲಿ ತನ್ನ ಮಾವನ ಕೊಡುಗೆ ಅವರ ಫಾರ್ಮಾ ಕಂಪನಿಯಾದ ಅಪೆಕ್ಸ್ ಲ್ಯಾಬೊರೇಟರೀಸ್‌ನಿಂದ ಬಂದಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಸೌಂದರ್ಯ, ಅವರ ಪತಿ ವಿಶಾಗನ್, ಅತ್ತೆ ವನಂಗಮುಡಿ ಮತ್ತು ಅವರ ಅತ್ತಿಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಇಂದು ಮೇ 14 ರಂದು ಭೇಟಿ ಮಾಡಿದ್ದಾರೆ.

ಸೂರ್ಯ, ಕಾರ್ತಿಯಿಂದ ಸಿಎಂ ನಿಧಿಗೆ 1 ಕೋಟಿ ರೂ. ನೆರವು

ಇದನ್ನು ಪ್ರಕಟಿಸಿದ ಸೌಂದರ್ಯ, ನನ್ನ ಮಾವ ಶ್ರೀ ಎಸ್.ಎಸ್.ವನಂಗಮುಡಿ, ಪತಿ ವಿಶಾಗನ್, ಅವರ ಸಹೋದರಿ ಮತ್ತು ನಾನು ಇಂದು ಬೆಳಗ್ಗೆ ಗೌರವಾನ್ವಿತ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಸಿಎಂ ನಿಧಿಗೆ 1 ಕೋಟಿ ಕೊಡುಗೆಯನ್ನು ಹಸ್ತಾಂತರಿಸಿದ್ದೇವೆ ಎಂದಿದ್ದಾರೆ.

ತಲ ಅಜಿತ್ ಅವರೂ 25 ಲಕ್ಷ ರೂಪಾಯಿ ನೆರವು ನೀಡಿದ್ದಾರೆ. ಇತ್ತೀಚೆಗಷ್ಟೇ ಕಾಲಿವುಡ್ ನಟರಾದ ಸೂರ್ಯ, ಕಾರ್ತಿ 2 ಕೋಟಿ ರೂಪಾಯಿ ನೆರವು ನೀಡಿದ್ದರು. ಈ ಹಿಂದೆ ತಮಿಳುನಾಡು ಸಿಎಂ ಕೊರೋನಾ ಹೋರಾಟಕ್ಕೆ ಜನ ನೆರವಾಗಬೇಕೆಂದು ಕೇಳಿಕೊಂಡಿದ್ದರು.