ಪಣಜಿ (ಮಾ.08): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿ ನಡೆಸಲಾಗಿದ್ದು ಡ್ರಗ್ಸ್ ತನಿಖೆಗೆ ಸಂಬಂಧಿಸಿ ಡ್ರಗ್ಸ್ ಪೆಡ್ಲರನ್ನು ಗೋವಾದಲ್ಲಿ ಬಂಧಿಸಲಾಗಿದೆ.

ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನಟನ ಸಾವಿಗೆ ಸಂಬಂಧಿಸಿಮಹಾರಾಜ್ ಶಾ ಸೇರಿ ಮೂವರನ್ನು ಬಂಧಿಸಲಾಗಿದೆ.

ಡ್ರಗ್ಸ್‌ ಡೀಲ್ಸ್‌ಗೆ ಫಂಡ್ ಮಾಡ್ತಿದ್ದ ಬಾಲಿವುಡ್ ಸುಂದರಿ: ರಿಯಾಗೆ 20 ವರ್ಷ ಜೈಲು..?

ಉತ್ತರ ಗೋವಾದಲ್ಲಿ ವಾಸಿಸುತ್ತಿದ್ದ ಇಬ್ಬರು ವಿದೇಶಿಯರೂ ಇದರಲ್ಲಿ ಸೇರಿದ್ದಾರೆ. ಪಣಜಿಯ ಮಿರಾಮರ್ನಿಂದ ಮಹಾರಾಜ್ ಶಾ, ಮತ್ತು ಇಬ್ಬರು ವಿದೇಶಿಯರನ್ನು ಬಂಧಿಸಲಾಗಿದೆ. ಇವರಿಂದ ದೊಡ್ಡ ಪ್ರಮಾಣದ ಡ್ರಗ್ಸ್ ಸಂಗ್ರಹವನ್ನು ಸೀಝ್ ಮಾಡಲಾಗಿದೆ ಎಂದು ಎನ್ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

2020 ಜೂನ್ನಲ್ಲಿ ಬಾಂದ್ರಾದ ಫ್ಲಾಟ್ನಲ್ಲಿ ಆತ್ಮಹತ್ಯೆಮಾಡಿಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಸಾವಿನ ಸಂಬಂಧ ಡ್ರಗ್ಸ್ ತನಿಖೆ ಮುಂದುವರಿದಿದೆ.