Asianet Suvarna News Asianet Suvarna News

ಸುಶಾಂತ್ ಸಿಂಗ್ ಸಾವಿನ ತನಿಖೆ ಮುಗಿಸಿದ CBI: ಶೀಘ್ರವೇ ವರದಿ

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ | ಸಿಬಿಐ ತನಿಖೆ ಪೂರ್ಣ | ಶೀಘ್ರವೇ ವರದಿ ಸಲ್ಲಿಸಲಿರೋ ಸಿಬಿಐ

 

Sushant Singh Rajput case: CBI completes its probe may submit closure report soon dpl
Author
Bangalore, First Published Oct 15, 2020, 1:09 PM IST
  • Facebook
  • Twitter
  • Whatsapp

SBI ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಿದೆ. ಶೀಘ್ರವೇ ಸಿಬಿಐ ತನಿಖೆಯ ವರದಿಯನ್ನು ಸಲ್ಲಿಸಲಿದ್ದು, ರಿಯಾ ಚಕ್ರವರ್ತಿ ವಿರುದ್ಧ ಇರುವ ಆರೋಪಗಳ ಬಗ್ಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೋರ್ಟ್ ಆದೇಶ ಬರಬೇಕಿದೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ಸಿಬಿಐ ಪೂರ್ತಿಗೊಳಿಸಿದೆ. ಜೂನ್ 14ರಂದು ನಟ ತಮ್ಮ ಬಾಂದ್ರಾ ಮನೆಯಲ್ಲಿ ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ನಟ ​ಸು​ಶಾಂತ್‌ದು ಕೊಲೆ: ಏಮ್ಸ್‌ ವೈದ್ಯನ ಆಡಿಯೋದಿಂದ ಕೇಸ್‌ಗೆ ಬಿಗ್ ಟ್ವಿಸ್ಟ್!

ಮುಂದಿನ ಕೆಲವೇ ದಿನಗಳಲ್ಲಿ ಪಟ್ನಾದಲ್ಲಿರುವ ಸಿಬಿಐ ಕೋರ್ಟ್‌ಗೆ ತನಿಖಾ ತಂಡ ತನಿಖೆಯ ವರದಿ ಒಪ್ಪಿಸಲಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ರಿಯಾ ಚಕ್ರವರ್ತಿ ವಿರುದ್ಧ ಯಾವುದೇ ಕ್ರಮ ನಡೆಯಲಿದೆಯಾ ಎಂಬುದನ್ನು ಕೋರ್ಟ್ ತಿಳಿಸಲಿದೆ.

ಡ್ರಗ್ಸ್ ವಿಚಾರವಾಗಿ 28 ದಿನ ಜೈಲಿನಲ್ಲಿದ್ದ ರಿಯಾ ಚಕ್ರವರ್ತಿ ಸದ್ಯ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಈ ನಡುವೆ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ನೆರೆಮನೆಯವರ ವಿರುದ್ಧ ದೂರು ಕೂಡಾ ನೀಡಿದ್ದಾರೆ.

ಸುಶಾಂತ್ ದೇಹದಲ್ಲಿ ವಿಷ ಪತ್ತೆಯಾಗಿಲ್ಲ: ಏಮ್ಸ್ ಸ್ಪಷ್ಟನೆ

ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಚಕ್ರವರ್ತಿ ಜೈಲಿನಲ್ಲಿದ್ದಾನೆ. ಸುಶಾಂತ್ ಹಣ ದುರುಪರೋಗ, ಡ್ರಗ್ಸ್ ಸಪ್ಲೈ ಆರೋಪವನ್ನು ರಿಯಾ ಮತ್ತು ಸಹೋದರ ಶೋವಿಕ್ ಎದುರಿಸುತ್ತಿದ್ದಾರೆ.

Follow Us:
Download App:
  • android
  • ios