Asianet Suvarna News Asianet Suvarna News

ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಮನೆ 2 ವರ್ಷದಿಂದ ಖಾಲಿ; ತಲೆ ಕೆಡಿಸಿಕೊಂಡ ಓನರ್

ಎರಡುವರೆ ವರ್ಷದಿಂದ ಸುಶಾಂತ್ ಸಿಂಗ್ ವಾಸಿಸುತ್ತಿದ್ದ ಮನೆ ಖಾಲಿ. ಯಾರು ಬಾಡಿಗೆಗೆ ಬರುತ್ತಿಲ್ಲ ಎಂದು ಮಾಲೀಕರು ಫುಲ್ ಟೆನ್ಶನ್....
 

Sushant Singh mumbai flat fails to find new tenant since 2 years vcs
Author
First Published Dec 12, 2022, 10:11 AM IST

ಮುಂಬೈ: ನಟ ದಿ.ಸುಶಾಂತ್‌ ಸಿಂಗ್‌ ರಜಪೂತ್‌ (Sushant Singh Rajput) ಆತ್ಮಹತ್ಯೆ ಮಾಡಿಕೊಂಡು ಎರಡೂವರೆ ವರ್ಷ ಕಳೆದರೂ ಅವರು ಬಾಡಿಗೆಗೆ ಇದ್ದ ಮನೆಗೆ ಯಾರೂ ಬಾಡಿಗೆಗೆ ಬರುತ್ತಿಲ್ಲ ಎಂದು ಮನೆಯ ಮಾಲೀಕ ರಫೀಕ್‌ ಹೇಳಿದ್ದಾರೆ. ಮಾಸಿಕ 5 ಲಕ್ಷ ರು. ಬಾಡಿಗೆ ದುಬಾರಿ ಎನ್ನುವ ಕಾರಣಕ್ಕೆ ಮತ್ತು ಸುಶಾಂತ್‌ ಆತ್ಮಹತ್ಯೆ ಮಾಡಿಕೊಂಡ ಮನೆ ಎನ್ನುವ ಕಾರಣಕ್ಕೆ ಜನರು ಮನೆಗೆ ಬಾಡಿಗೆ ಬರುತ್ತಿಲ್ಲ ಎಂದು ರಫೀಕ್‌ ಹೇಳಿದ್ದಾರೆ. ಮನೆಯನ್ನು ಬಾಲಿವುಡ್‌ಗೆ ಸಂಬಂಧಿಸಿದವರಿಗೆ ನೀಡುವುದಿಲ್ಲ ಎಂದು ಈ ಹಿಂದೆಯೇ ರಫೀಕ್‌ ಹೇಳಿದ್ದರು. ನಟ ಸುಶಾಂತ ತಮ್ಮ ಪ್ರೇಯಸಿ ರಿಯಾ ಚಕ್ರವರ್ತಿಯೊಂದಿಗೆ ಬಾಂದ್ರಾದಲ್ಲಿರುವ ಬಂಗಲೆಯಲ್ಲಿ ವಾಸವಿದ್ದರು.

ಹೌದು! ಈ ಮನೆ ಮಾಲೀಕರು ಎನ್‌ಆರ್‌ಐ (NRI) ಆಗಿದ್ದು ಬಾಲಿವುಡ್‌ಗೆ ಸಂಬಂಧ ಪಟ್ಟ ಯಾವ ವ್ಯಕ್ತಿಗೂ ಮನೆ ಕೊಡುವುದಿಲ್ಲ ತಡವಾದ್ದರೂ ಪರ್ವಾಗಿಲ್ಲ ಆದರೆ ಸಾಮಾನ್ಯರು ಬರಲಿ ಎಂದು ಕಾಯುತ್ತಿದ್ದಾರೆ. ಆದರೆ ಎರಡುವರೆ ವರ್ಷ ಕಳೆದರೂ ಮನೆ ನೋಡಲು ಯಾವ ಬ್ರೊಕರ್ (Broker) ಬರಲಿಲ್ಲ, ಜಾಹೀರಾತು (Advertisement) ನೋಡಲು ತಯಾರಿಲ್ಲದ ಕಾರಣ ಈಗ ತಲೆ ಬಿಸಿ ಮಾಡಿಕೊಂಡಡಿದ್ದಾರೆ. 

ಮಾಲೀಕರ ಮಾತು:

'ಜನರು ಈ ಫ್ಲಾಟ್‌ಗೆ ಬರಲು ಹೆದರಿಕೊಳ್ಳುತ್ತಿದ್ದಾರೆ. ಜನರು ಬಂದು ಸುಶಾಂತ್‌ ಸಿಂಗ್ ವಾಸಿಸುತ್ತಿದ್ದ ಮನೆ ಇಲ್ಲಿ ಸತ್ತಿದ್ದು ಎಂದು ತಿಳಿಯುತ್ತಿದ್ದಂತೆ ಬೇಡ ಎಂದು ಹೋಗುತ್ತಾರೆ. ಸುಶಾಂತ್ ಸಾವಿನ ಪ್ರಕರಣ ಹಳೆಯದಾದ ಕಾರಣ ಬರಲು ಯೋಚನೆ ಮಾಡುತ್ತಾರೆ. ಅಲ್ಲದೆ ಈ ಪ್ರಕರಣಕ್ಕೆ ಸರಿಯಾದ ಅಂತಿಮ ಸಿಕ್ಕಿಲ್ಲ ಹೀಗಾಗಿ ಎಲ್ಲರೂ ಬೇಡ ಎನ್ನುತ್ತಿದ್ದಾರೆ. ರೆಂಟ್‌ಗೆ ನೀಡಲು ಕಟ್ಟಡ ಮಾಲೀಕರು ಒಪ್ಪುವುದಿಲ್ಲ ಹಾಗೆ ಮಾಡಿದ್ದರೆ ಒಬ್ಬರಾದ್ದರೂ ಬರುತ್ತಾರೆ. ಮಾರ್ಕೆಟ್‌ ಬೆಲೆಗೆ ಜನರನ್ನು ಹುಡುಕುತ್ತಿರುವ ಕಾರಣ ಯಾರೂ ಸಿಗುತ್ತಿಲ್ಲ ಕಡಿಮೆ ಮಾಡಿದರೆ ಜನರನ್ನು ಆಕರ್ಷಿಸಬಹುದು' ಎಂದು ರಫೀಕ್ (Rafique) ಬಾಲಿವುಡ್ ಹಂಗಾಮಾಗೆ ಹೇಳಿದ್ದಾರೆ.

ಮತ್ತೆ ಪ್ರೀತಿ ಕಂಡುಕೊಂಡ ಸುಶಾಂತ್‌ ಗರ್ಲ್‌ಫ್ರೆಂಡ್‌ ರಿಯಾ ಚಕ್ರವರ್ತಿ; ಯಾರಿದು ಬಂಟಿ ಸಜ್ದೇಹ್?

'ಮನೆ ನೋಡಲು ಬರುವ ಮುನ್ನವೆ ಜನರಿಗೆ ಇದು ಸುಶಾಂತ್ ಸಿಂಗ್ ವಾಸಿಸುತ್ತಿದ್ದ ಮನೆ ಎಂದು ಹೇಳಲಾಗುತ್ತಿದೆ. ಕೆಲವರಿಗೆ ಹಳೆಯ ವಿಚಾರ ಮುಖ್ಯವಾಗುವುದಿಲ್ಲ ಸುಮ್ಮನೆ ಬಂದು ನೋಡುತ್ತಾರೆ. ಆದರೆ ಅವರು ಕುಟುಂಬಸ್ತರು ಮತ್ತು ಸ್ನೇಹಿತರು ಮುಂದುವರೆಯಬೇಡಿ ಎಂದು ಹೇಳಿ ಅರ್ಧಕ್ಕೆ ನಿಲ್ಲಿಸುತ್ತಾರೆ. ಬಣ್ಣದ ಲೋಕಕ್ಕೆ ಸಂಬಂಧ ಪಟ್ಟವರಿಗೆ ಈ ಮನೆಯನ್ನು ಕೊಡಬಾರದು ಎಂದು ಓನರ್ ತೀರ್ಮಾನ ಮಾಡಿದ್ದಾರೆ. ಹೀಗಾಗಿ ಕಾರ್ಪೋರೆಟ್‌ ಜನರೇ (Corporate workers) ಈ ಮನೆಯನ್ನು ಒಪ್ಪಿಕೊಳ್ಳಬೇಕು' ಎಂದಿದ್ದಾರೆ ರಫೀಕ್. 

ಡಿಸೆಂಬರ್ 19ರಂದು ಸುಶಾಂತ್ ವಾಸಿಸುತ್ತಿದ್ದ ಮನೆ ಮಾಸಿಕ 4.5 ಲಕ್ಷ ರೂ. ಇತ್ತು ಈಗ ಅದನ್ನು 5 ಲಕ್ಷ ರೂ. ಮಾಡಲಾಗಿದೆ. ಕೊರೋನಾ ಲಾಕ್‌ಡೌನ್‌ (Covid19) ಸಮಯದಲ್ಲಿ ಸುಶಾಂತ್ ಮತ್ತು ರಿಯಾ ಚಕ್ರವರ್ತಿ (Rhea Chakraborty) ಈ ಮನೆಯಲ್ಲಿ ವಾಸಿಸುತ್ತಿದ್ದರು. ಸುಶಾಂತ್ ಸಾವಿನ ಪ್ರಕರಣ ಬಾಲಿವುಡ್‌ನ ಇನ್ನಿತ್ತರ ಸ್ಟಾರ್‌ಗಳ ಮುಖವಾಡ ಬಯಲು ಮಾಡಿತ್ತು. 

 

Follow Us:
Download App:
  • android
  • ios