51ನೇ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪ್ರಕಟವಾಗಿದೆ, ಸೂಪರ್ ಸ್ಟಾರ್ ರಜನಿಕಾಂತ್‌ಗೆ ಈ ಬಾರಿ ಪ್ರಶಸ್ತಿ ಒಲಿದಿದೆ. ಈ ವಿಚಾರದ ಬಗ್ಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಟ್ಟೀಟ್ ಮಾಡಿದ್ದಾರೆ. 

ಫಾಲ್ಕೆ ಪ್ರಶಸ್ತಿಯನ್ನು ನಮ್ರತೆಯಿಂದ ಸ್ವೀಕರಿಸಿದ 'ದಾದಾ'- ವಿಡಿಯೋ

'ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ನಟ ರಜನಿಕಾಂತ್‌ ಜಿ ಅವರಿಗೆ 2020ರ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ಘೋಷಿಸುವುದಕ್ಕೆ ಸಂತೋಷವಾಗುತ್ತಿದೆ. ನಟ, ನಿರ್ದೇಶಕ, ನಿರ್ಮಾಪಕನಾಗಿ ಅವರ ಕೊಡುಗೆ ಅಪ್ರತಿಮವಾಗಿದೆ,' ಎಂದು ಜಾವಡೇಕರ್ ಟ್ಟೀಟ್ ಮಾಡಿದ್ದಾರೆ. 

 

ತಲೈವಾ ರಜನಿಕಾಂತ್ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲ್ಪಟ್ಟ 12ನೇ ದಕ್ಷಿಣ ಭಾರತದ ಸೂಪರ್ ಸ್ಟಾರ್ ಆಗಲಿದ್ದಾರೆ. 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಅಮಿತಾಬ್ ಬಚ್ಚನ್ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ನೀಡಲಾಗಿತ್ತು. ಗಾಯಕಿ ಆಶಾ ಭೋಸ್ಲೆ, ನಿರ್ಮಾಪಕ ಸುಭಾಷ್‌ ಘೈ, ನಟ ಮಹೋನ್‌ ಲಾಲ್‌, ಗಾಯಕ ಶಂಕರ್ ಮಹಾದೇವನ್‌ ಮತ್ತು ನಟ ಬಿಸ್ವಾಜೀತ್ ಚಟರ್ಜಿ ಈ ವರ್ಷದ ತೀರ್ಪುಗಾರರಾಗಿದ್ದರು.

ಚಿತ್ರಗಳ: ಹೊಸ ಅವಾತಾರದಲ್ಲಿ 'ದಾದಾ ಸಾಹೇಬ್ ಫಾಲ್ಕೆ' ಅವಾರ್ಡ್ ಸ್ವೀಕರಿಸಿದ ಕಿಚ್ಚ..! 

ದಾದಾ ಸಾಹೇಬ್‌ ಫಾಲ್ಕೆ ಇಂಟರ್‌ನ್ಯಾಷನಲ್‌ ಫಿಲ್ಮ್ ಫೆಸ್ಟಿವಲ್ ಅವಾರ್ಡ್‌ 2020ರ ಮೋಸ್ಟ್‌ ಪ್ರಾಮಿಸಿಂಗ್ ಆ್ಯಕ್ಟರ್‌ ಪ್ರಶಸ್ತಿಯನ್ನು ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಸ್ವೀಕರಿಸಿದ್ದರು.

'ತಲೆಮಾರುಗಳಿಂದ ಜನಪ್ರಿಯವಾಗಿರುವ,  ವೈವಿಧ್ಯಮಯ ಪಾತ್ರಗಳು ಮತ್ತು ಪ್ರೀತಿಯ ವ್ಯಕ್ತಿತ್ವ ಉಳ್ಳ ರಜನಿಕಾಂತ್‌ ಜೀ ನಿಮಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿರುವುದು ಸಂತೋಷದ ಸಂಗತಿ,' ಎಂದು ನರೇಂದ್ರ ಮೋದಿ ಟ್ಟೀಟ್ ಮಾಡಿದ್ದಾರೆ.