ಫಾಲ್ಕೆ ಪ್ರಶಸ್ತಿಯನ್ನು ನಮ್ರತೆಯಿಂದ ಸ್ವೀಕರಿಸಿದ 'ದಾದಾ'- ವಿಡಿಯೋ

ಬಾಲಿವುಡ್ ಚಿತ್ರರಂಗದ ಮೇರುನಟ, ಹಿಂದಿ ಚಿತ್ರರಂಗದ ದಂತಕಥೆ ಅಮಿತಾಬಚ್ಚನ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜರಾಗಿರುವುದು ಹೆಮ್ಮೆಯ ವಿಚಾರ. ಹಿಂದಿ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ. 

Bollywood Amitabh bacchan receives The 50th Dadasaheb Phalke Awards

ಹಿಂದಿ ಚಿತ್ರರಂಗದ ದಂತಕಥೆ, ಬಿ- ಟೌನ್‌ನ ಬಿಗ್ ಬಿ ಎನಿಸಿಕೊಂಡ ಅಮಿತಾಬಚ್ಚನ್‌ 50 ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.  ಪ್ರಶಸ್ತಿ ಪ್ರದಾನ ಸಮಾರಂಭದ ದಿನ ಅನಾರೋಗ್ಯದ ನಿಮಿತ್ತ ಭಾಗವಹಿಸಿರಲಿಲ್ಲ. 

 

ನಟ ಅಮಿತಾಭ್ ಬಚ್ಚನ್‌ಗೆ ದಾದಾ ಸಾಹೇಬ್ ಫಾಲ್ಕೆ ಗರಿ

ಡಿ 29 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರಿಂದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಜಯಾ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್ ಜೊತೆಗಿದ್ದರು. 

ಪ್ರಶಸ್ತಿ ಸ್ವೀಕರಿಸಿ ಮಾತಾನಾಡಿದ ಬಿಗ್‌ ಬಿ, ಬಹಳ ಸಮಯ ಕಾಲ ಕೆಲಸ ಮಾಡಿ ಇದೀಗ ಮನೆಯಲ್ಲಿ ಕುಳಿತು ರಿಲ್ಯಾಕ್ಸ್ ಮಾಡುತ್ತಿದ್ದೇನೆ ಎಂದು ಈ ಪ್ರಶಸ್ತಿ ಜ್ಞಾಪಿಸುವಂತಿದೆ. ಇನ್ನೂ ನಾನು ಮಾಡುವ ಕೆಲಸಗಳು ಸಾಕಷ್ಟಿದೆ. ಇನ್ನಷ್ಟು ಕೆಲಸ ಮಾಡುವ ಅವಕಾಶಗಳು ಒದಗಿ ಬಂದಿದೆ' ಎಂದು ಹೇಳಿದ್ದಾರೆ.

 

ಹಿಂದಿ ಚಿತ್ರರಂಗಕ್ಕೆ ಅಮಿತಾಬ್ ಕೊಡುಗೆ ಅಪಾರ. 1970 ರ ದಶಕದಿಂದ ಶುರುವಾದ ಸಿನಿ ಜರ್ನಿ ಶುರು ಮಾಡಿದರು. 70-80 ರ ದಶಕದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದರು.  ಜಂಜೀರ್, ದೀವಾರ್, ಶೋಲೆ ಸಿನಿಮಾಗಳು ಇವರನ್ನು ಇಡೀ ಜಗತ್ತಿಗೆ ಪರಿಚಯಿಸಿತು. ಸತತ 5 ದಶಕಗಳ ಕಾಲ ಹಿಂದಿ ಚಿತ್ರರಂಗವನ್ನು ಆಳಿದ   ಅನಭಿಶಕ್ತ ನಟ ಇವರು. ಹೊಸ ಹೊಸ ನಿರ್ದೇಶಕರ ಜೊತೆ ಬ್ಲಾಕ್, ಪಾ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರ ಕೂಲಿ, ಕಭಿ ಖುಷಿ ಕಭಿ ಗಮ್, ಬದ್ಲಾ, ಮುಕದ್ದರ್ ಕ ಸಿಕಂದರ್, ಸಿಲ್‌ಸಿಲಾ, ಅಮರ್ ಅಕ್ಬರ್ ಅಂಥೋನಿ, ಅಗ್ನಿಪಥ್ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.  ಇವರ ಸಿನಿಮಾ ಹಾಡುಗಳು ಕೂಡಾ ಅಷ್ಟೇ ಸೂಪರ್ ಹಿಟ್ ಆಗಿವೆ. 

'ಅವನೇ ಶ್ರೀಮನ್ನಾರಾಯಣ'ನ ಕೈ ಸೇರಿತು 30 ಕೋಟಿ!

ಅನಾರೋಗ್ಯ ನಿಮಿತ್ತ ತಡವಾಗಿ ದಾದಾ ಸಾಹೇಬ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಹೀಗಿತ್ತು ನೋಡಿ. 


 ಕನ್ನಡದ ಚಿತ್ರರಂಗದ ಕ್ರಿಯೆಟಿವ್ ಡೈರೆಕ್ಟರ್ ರಿಷಬ್ ಶೆಟ್ಟಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಚಿತ್ರಕ್ಕೆ ಸ್ವರ್ಣ ಕಮಲ ಪಡೆದಿದ್ದಾರೆ.  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ವಿಚಾರ.

 

 

ಇನ್ನೂ ಒಂದು ಸಂತಸದ ವಿಚಾರವೆಂದರೆ ಕನ್ನಡ ನಿರ್ದೇಶಕ ಲಿಂಗದೇವರು ಈ ಬಾರಿಯ ರಾಷ್ಟ್ರೀಯ ಚಲನಚಿತ್ರ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು. ಅವರೂ ಕೂಡಾ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.  

Latest Videos
Follow Us:
Download App:
  • android
  • ios