Bollywood Actress: ಅನುಷ್ಕಾ ಶರ್ಮಾ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾಗ ಹಲವು ತೆಗೆದುಕೊಂಡ ಕೆಲವು ನಿರ್ಧಾರಗಳು ಇಂದಿಗೂ ಕೊಹ್ಲಿ ಮಡದಿಯನ್ನು ಕಾಡುತ್ತಿವೆಯಂತೆ. ಆ ತಪ್ಪು ನಿರ್ಧಾರಗಳು ಏನು ಎಂಬುದರ ಮಾಹಿತಿ ಇಲ್ಲಿದೆ.
ಮುಂಬೈ: ರಬ್ ನೇ ಬನಾದಿ ಜೋಡಿ ಸಿನಿಮಾ ಮೂಲಕ ಬಾಲಿವುಡ್‌ಗೆ ಬಂದ ಅನುಷ್ಕಾ ಶರ್ಮಾ, ಇಂದು ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದಾರೆ. ಮೊದಲ ಚಿತ್ರದಲ್ಲಿಯೇ ತನ್ನನ್ನು ಸಾಬೀತು ಮಾಡಿಕೊಂಡ ನಟಿ ಅನುಷ್ಕಾ ಶರ್ಮಾ, ಮದುವೆ ಬಳಿಕಜ ನಿಧಾನವಾಗಿ ಚಿತ್ರರಂಗದಿಂದ ದೂರವಾಗುತ್ತಾ ಬಂದರು. ಎರಡು ಮಕ್ಕಳ ತಾಯಿಯಾಗಿರುವ ಅನುಷ್ಕಾ ಶರ್ಮಾ ಖಾಸಗಿ ಬದುಕಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಕುಟುಂಬದೊಂದಿಗೆ ಕ್ವಾಲಿಟಿ ಸಮಯ ಕಳೆಯುತ್ತಿರುವ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾಗ ಅನುಷ್ಕಾ ಶರ್ಮಾ ತೆಗೆದುಕೊಂಡ ಕೆಲ ನಿರ್ಧಾರಗಳು ಇಂದಿಗೂ ಅವರನ್ನು ಕಾಡುತ್ತಿವೆ.
ಬಹುಬೇಡಿಕೆ ನಟಿಯಾಗಿದ್ದ ವೇಳೆ ಹಲವು ಆಫರ್‌ಗಳು ಅನುಷ್ಕಾ ಅವರನ್ನು ಹುಡುಕಿಕೊಂಡು ಬಂದಿದ್ದವು. ಆದ್ರೆ ಎಲ್ಲಾ ಸಿನಿಮಾದಲ್ಲಿ ನಟಿಸಲು ಒಬ್ಬರಿಂದಲೇ ಸಾಧ್ಯವಾಗದ ಕಾರಣದಿಂದ ಅನುಷ್ಕಾ ಶರ್ಮಾ ಒಳ್ಳೆಯ ಅವಕಾಶಗಳನ್ನು ಮಿಸ್ ಮಾಡಿಕೊಂಡಿದ್ದಾರೆ. ಹೀಗೆ ಅನುಷ್ಮಾ ಶರ್ಮಾ ತಿರಸ್ಕರಿಸಿದ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಅನುಷ್ಕಾ ಶರ್ಮಾ ರಿಜೆಕ್ಟ್ ಮಾಡಿದ ಸೂಪರ್ ಹಿಟ್ ಸಿನಿಮಾಗಳ ಪಟ್ಟಿ ಇಲ್ಲಿದೆ.
ತ್ರಿ ಈಡಿಯಟ್ಸ್ Three Idiots
ಆಮಿರ್ ಖಾನ್, ಶರ್ಮನ್ ಜೋಶಿ ಮತ್ತು ಮಾಧವನ್ ನಟನೆಯ 'ತ್ರಿ ಈಡಿಯಟ್ಸ್' ಸಿನಿಮಾ 2009ರಲ್ಲಿ ಬಿಡುಗಡೆಯಾಗಿತ್ತು. ಕರೀನಾ ಕಪೂರ್ ಖಾನ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಕರೀನಾ ಪಾತ್ರಕ್ಕಾಗಿ ಅನುಷ್ಕಾ ಶರ್ಮಾ ಆಡಿಷನ್ ಸಹ ನೀಡಿದ್ದರು. ಆದ್ರೆ ಕಾರಣಾಂತರಗಳಿಂದ ಅನುಷ್ಕಾ ಸಿನಿಮಾದಿಂದ ಹೊರ ಬಂದರು. ಈ ಚಿತ್ರ ಬಾಕ್ಸ್ ಆಫಿಸ್‌ನಲ್ಲಿ 274 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಕಿ ಆಂಡ್ ಕಾ Ki And Ka
ಕರೀನಾ ಕಪೂರ್ ಮತ್ತು ಅರ್ಜುನ್ ಕಪೂರ್ ನಟನೆಯ ಕಿ ಆಂಡ್ ಕಾ ರೊಮ್ಯಾಂಟಿಕ್ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ತನಗಿಂತ 5 ವರ್ಷ ಕಿರಿಯ ನಟನೊಂದಿಗೆ ಕರೀನಾ ಜಬರ್‌ದಸ್ತ್ ಆಗಿ ರೊಮ್ಯಾನ್ಸ್ ಮಾಡಿದ್ದರು. ಈ ಚಿತ್ರದ ಮೊದಲ ಆಯ್ಕೆ ಅನುಷ್ಕಾ ಶರ್ಮಾ ಆಗಿದ್ದರು. ಆದ್ರೆ ಈ ಸಿನಿಮಾವನ್ನು ಅನುಷ್ಕಾ ರಿಜೆಕ್ಟ್ ಮಾಡಿದ್ದರು.
ಆಗಾಡೂ Agaadu
ಟಾಲಿವುಡ್‌ನ ಮಹೇಶ್ ಭಟ್ ಮತ್ತು ತಮನ್ನಾ ಭಾಟಿಯಾ ನಟನೆಯ ಈ ಆಗಾಡೂ ಸಿನಿಮಾ ತಂಡ ಅನುಷ್ಕಾ ಶರ್ಮಾ ಅವರನ್ನು ಸಂಪರ್ಕಿಸಿತ್ತು. ಆದ್ರೆ ಕಥೆ ಇಷ್ಟವಾಗದ ಕಾರಣ ಅನುಷ್ಕಾ ಶರ್ಮಾ ಈ ಸಿನಿಮಾದಲ್ಲಿ ನಟಿಸಲ್ಲ ಎಂದು ಹೇಳಿದ್ದರಂತೆ.
2 ಸ್ಟೇಟಸ್ 2 States
2014ರಲ್ಲಿ ಬಿಡುಗಡೆಯಾದ ಆಲಿಯಾ ಭಟ್ ಮತ್ತು ಅರ್ಜುನ್ ಕಪೂರ್ ನಟನೆಯ 'ಟು ಸ್ಟೇಟಸ್' ಸಿನಿಮಾ ಮ್ಯೂಸಿಕಲ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಬಬ್ಲಿಯಾಗಿ ಕಾಣಿಸಿಕೊಂಡಿದ್ದ ಆಲಿಯಾ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಆಲಿಯಾಗೂ ಮುನ್ನ 2 ಸ್ಟೇಟಸ್ ಚಿತ್ರತಂಡ ಅನುಷ್ಕಾ ಶರ್ಮಾ ಅವರನ್ನು ಸಂಪರ್ಕಿಸಿತ್ತು.
ಇದನ್ನೂ ಓದಿ: ನೋಡುಗರ ಮನಸ್ಸನ್ನು ಬೆಚ್ಚಿಬೀಳಿಸುವ 7.2 ರೇಟಿಂಗ್ ಮಲಯಾಳಂ ಸಿನಿಮಾ 8 ತಿಂಗಳ ನಂತರ ಹಿಂದಿಯಲ್ಲಿ ರಿಲೀಸ್
ಬಾರ್ ಬಾರ್ ದೇಖೋ Bar Bar Dekho
2016ರ ಬಾರ್ ಬಾರ್ ದೇಖೋ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾಗೆ ನಾಯಕಿಯಾಗು ಅನುಷ್ಕಾ ಶರ್ಮಾ ಅವರನ್ನು ತರಬೇಕೆಂದು ಚಿತ್ರತಂಡ ಪ್ಲಾನ್ ಮಾಡಿಕೊಂಡಿತ್ತು. ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಚಿತ್ರಕ್ಕೆ ಕತ್ರಿನಾ ಕೈಫ್ ಅವರ ಎಂಟ್ರಿಯಾಗಿತ್ತು.
ತಮಾಶಾ Tamasha
ತಮಾಶಾ ಸಿನಿಮಾ 2015ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ರಣ್‌ಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಜೊತೆಯಾಗಿ ನಟಿಸಿದ್ದರು. ಪಾತ್ರ ಇಷ್ಟವಾಗದ ಕಾರಣ ಅನುಷ್ಕಾ ಶರ್ಮಾ ಸಿನಿಮಾದಿಂದ ಹಿಂದೆ ಬಂದಿದ್ದರು. ಈ ಚಿತ್ರ ಬಾಕ್ಸ್ ಆಫಿಸ್‌ನಲ್ಲಿ 67.30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಇದನ್ನೂ ಓದಿ: 50 ವರ್ಷಗಳಲ್ಲಿಯೇ ಇದುವರೆಗೂ ಯಾರು ಮಾಡದ ಹಾರರ್ ಸಿನಿಮಾ; ಹಲವು ದೇಶಗಳಲ್ಲಿ ಬ್ಯಾನ್ ಆದ ಚಿತ್ರ!
