Asianet Suvarna News

ಮಧ್ಯರಾತ್ರಿ ಒಂಟಿಯಾಗಿ ರಸ್ತೆಗಿಳಿದ ಸನ್ನಿ, ಮಾಜಿ ನೀಲಿ ತಾರೆಯ ನೋಡಿ ಜನ ಹೆಂಗಾಡಿದ್ರು ಗೊತ್ತಾ!

ಸನ್ನಿಲಿಯೋನ್‌ ಅನ್ನೋ ಮಾಜಿ ನೀಲಿ ತಾರೆ ನಿನ್ನೆ ಮೊನ್ನೆ ಮಧ್ಯರಾತ್ರಿ ಬೀದಿಯಲ್ಲಿ ಒಬ್ಬರೇ ಓಡಾಡಿದ್ದಾರೆ. ರಾತ್ರಿ ಈ ಮಾದಕ ಹೆಣ್ಣನ್ನ ಕಂಡ ಜನ ಹೆಂಗಾಡಿದ್ರು..

Sunny Leone went out to road in mid night
Author
Bengaluru, First Published Jul 6, 2021, 4:58 PM IST
  • Facebook
  • Twitter
  • Whatsapp

ಸನ್ನಿ ಲಿಯೋನ್ ! ಕೆಲವೇ ವರ್ಷಗಳ ಕೆಳಗೆ ಜಗತ್ತಿನ ನೀಲಿ ಚಿತ್ರರಂಗವನ್ನಾಳಿದ ಮಾದಕ ಹೆಣ್ಣು ಸನ್ನಿ ಲಿಯೋನ್‌. ಇಂದಿಗೂ ಈಕೆಯ ಹೆಸರು ಕೇಳಿದರೆ ಹರೆಯದ ಹುಡುಗರಿಂದ ಮುದುಕರವರೆಗೂ ಒಂದು ಕ್ಷಣ ವಿಚಲಿತರಾಗುತ್ತಾರೆ.

ಇಂತಿಪ್ಪ ಸನ್ನಿ ಲಿಯೋನ್‌ ಮಧ್ಯರಾತ್ರಿ, ಒಂಟಿಯಾಗಿ ಬೀದಿಗಿಳಿದರೆ ಪರಿಸ್ಥಿತಿ ಹೇಗಿರಬೇಡ... ಈ ಬಗ್ಗೆ ಮಾಜಿ ನೀಲಿ ತಾರೆ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆಕೆ ಯಾಕೆ ಮಧ್ಯರಾತ್ರಿ ಒಂಟಿಯಾಗಿ ಬೀದಿಗಿಳಿಯಬೇಕಾಯ್ತು.

ಅವರನ್ನು ಕಂಡ ಜನರಿಂದ ಯಾವೆಲ್ಲ ರೆಸ್ಪಾನ್ಸ್‌ ಸಿಕ್ಕಿತು, ಕೊನೆಗೂ ಅವರು ಹೇಗೆ ಮನೆ ತಲುಪಿದ್ರು ಅನ್ನೋದನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ವೀಡಿಯೋದಲ್ಲಿ ತನ್ನ ಮಧ್ಯರಾತ್ರಿ ಸಾಹಸದ ಬಗ್ಗೆ ಸನ್ನಿ ಲಿಯೋನ್‌ ಹೇಳ್ಕೊಂಡಿದ್ದು ತುಂಬ ಕುತೂಹಲಕಾರಿಯಾಗಿದೆ. 

 

 
 
 
 
 
 
 
 
 
 
 
 
 
 
 

A post shared by Sunny Leone (@sunnyleone)

2011ರಲ್ಲಿ ಈ ನೀಲಿ ಜಗತ್ತಿನ ತಾರೆ ಇಂಡಿಯಾಗೆ ಕಾಲಿಟ್ಟಾಗ ಸಿಕ್ಕ ಸ್ವಾಗತ ಸಣ್ಣದಲ್ಲ. ಸ್ವತಃ ಅಮಿತಾಬ್‌ ಬಚ್ಚನ್‌ ಅವರೇ ಸನ್ನಿ ಅವರನ್ನು ಸ್ವಾಗತಿಸಿದ್ದು ಹುಬ್ಬೇರೋ ಹಾಗೆ ಮಾಡಿತ್ತು. ಆಮೇಲೊಮ್ಮೆ ಅವರು ಕೇರಳಕ್ಕೆ ಭೇಟಿ ಕೊಟ್ಟಾಗ ಈಕೆಯನ್ನು ಕಣ್ತುಂಬಿಸಿಕೊಳ್ಳಲು ಜನ ಸಾಗರವೇ ಹರಿದು ಬಂದಿತ್ತು. ಸನ್ನಿ ಬೆಂಗಳೂರಿಗೆ ಬಂದಾಗಲೂ ಅವರನ್ನು ಕಾಣಲು ಬಂದ ಜನರ ಸಂಖ್ಯೆ ಕಡಿಮೆ ಏನಲ್ಲ.

ಕಳೆದ ಎಂಟು ಹತ್ತು ವರ್ಷಗಳಿಂದ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಾಟ ನಡೆದಿರೋದು ಸನ್ನಿ ಲಿಯೋನ್‌ ಬಗ್ಗೆಯೇ. ಇಂಡಿಯಾಕ್ಕೆ ಬಂದ ಮೇಲಿಂದ ಸನ್ನಿ ನೀಲಿ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಬಾಲಿವುಡ್‌ ಸಿನಿಮಾಗಳು, ಜಾಹೀರಾತು ಅಂತೆಲ್ಲ ಓಡಾಡ್ತಿದ್ದಾರೆ. ತನ್ನ ಮ್ಯಾನೇಜರ್‌ ವೆಬರ್‌ ಅನ್ನೇ ಮದುವೆಯಾದ ಸನ್ನಿ ಒಂದು ಮಗುವನ್ನು ದತ್ತು ಪಡೆದರೆ, ಇನ್ನಿಬ್ಬರು ಮಕ್ಕಳನ್ನು ಬಾಡಿಗೆ ಗರ್ಭದ ಮೂಲಕ ಪಡೆದಿದ್ದಾರೆ. ಮಕ್ಕಳ ಜೊತೆಗೆ ಓಡಾಟ, ಪತಿಯ ಜೊತೆಗೆ ಸುತ್ತಾಟಗಳು ಆಗಾಗ ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ಅಮೆರಿಕಾಕ್ಕೆ ಹೋಗಿ ಅಲ್ಲಿನ ತನ್ನ ನಿವಾಸದಲ್ಲಿ ಒಂದಿಷ್ಟು ಕಾಲ ಕಳೆದು ಬರೋ ಸನ್ನಿ ಲಿಯೋನ್‌, ಹೆಚ್ಚು ಕಡಿಮೆ ಇಂಡಿಯಾದಲ್ಲೇ ಸೆಟಲ್ ಆದಂತಿದ್ದಾರೆ.

ಅಮೀರ್ ಖಾನ್-ಕಿರಣ್ ವಿಚ್ಛೇದನೆ: ಸೋನಂ ಥ್ಯಾಂಕ್ ಗಾಡ್ ಎಂದಿದ್ದೇಕೆ ? ...
 
ಹಿಂಗಿರೋ ಸನ್ನಿ ಲಿಯೋನ್‌ ಇದೀಗ ರಾತ್ರೋ ರಾತ್ರಿ ಬೀದಿಗಿಳಿದು ಎದೆಗಾರಿಕೆ ಪ್ರದರ್ಶಿಸಿದ್ದಾರೆ. ಅಷ್ಟಕ್ಕೂ ಈಕೆ ಅರ್ಧ ರಾತ್ರೀಲಿ ಕಳ್ಳಿ ಥರ ರೋಡಿಗಿಳಿದದ್ದು ಯಾಕೆ ಅನ್ನೋದು ಹಲವರ ಪ್ರಶ್ನೆ ಅದಕ್ಕೂ ಸನ್ನಿ ಉತ್ತರಿಸಿದ್ದಾರೆ. 'ಹೇ, ನಾನೇನೂ ಕದಿಯೋದಕ್ಕೆ ಮಧ್ಯರಾತ್ರಿ ಆಚೆ ಹೋಗಿದ್ದಲ್ಲ. ಹೆಂಡತಿಯ ಕರ್ತವ್ಯ ಮಾಡಬೇಕಿತ್ತು. ಗಂಡ ವೆಬರ್‌ಗೆ ಹುಷಾರಿರಲಿಲ್ಲ. ಅದಕ್ಕೆ ಅರ್ಧ ರಾತ್ರಿ ರೋಡಿಗಿಳಿದಿದ್ದೆ. ಆತ ಈಗ ಚಿಕನ್‌ ತಿನ್ನಂಗಿಲ್ಲ. ಬರೀ ತರಕಾರಿ ತಿನ್ನಬೇಕು' ಅಂತ ಬರೆದುಕೊಂಡಿದ್ದಾರೆ.

ಡಾಲಿ ಧನಂಜಯ ಲವ್ ಬ್ರೇಕಪ್ ಆದ ಕತೆ ಕೇಳಿ ! ...

ಎಲ್ಲರಿಗೂ ಅಚ್ಚರಿ ಆಗೋ ಹಾಗೆ ಅವರು ಇನ್ನೊಂದು ವಿಚಾರ ಬಿಚ್ಚಿಟ್ಟಿದ್ದಾರೆ. ಅದೇನು ಅಂದರೆ ಅವರು ಹೀಗೆ ಒಂಟಿಯಾಗಿ ರಸ್ತೆಯಲ್ಲಿ ಓಡಾಡುತ್ತಿದ್ದರೂ ಯಾರೊಬ್ಬರೂ ಈಕೆಯನ್ನು ಗುರುತು ಹಿಡಿಯಲಿಲ್ಲವಂತೆ. ಎಲ್ಲಿ ತನ್ನನ್ನ ಜನ ಗುರುತಿಸಿ ಮುತ್ತಿಗೆ ಹಾಕುತ್ತಾರೋ ಅಂತ ದಿಗಿಲಿನಲ್ಲಿದ್ದ ಸನ್ನಿಗೆ ಜನರ್ಯಾರೂ ತನ್ನನ್ನು ಗುರುತಿಸಿದ್ದು ಕಂಡು ಸಖತ್‌ ಮಜಾ ಅನಿಸಿದೆ.

ಜೊತೆಗೆ ಸ್ವತಂತ್ರ್ಯವಾಗಿ ಓಡಾಡೋ ಧೈರ್ಯ ಬಂದಿದೆ. ಸನ್ನಿಯನ್ನು ಹೀಗೆ ಜನ ಗುರುತಿಸದೇ ಇರೋದಕ್ಕೂ ಕಾರಣ ಇದೆ. ಈಕೆ ಕಿವಿ ಮುಚ್ಚುವಂತೆ ಟೋಪಿ ಹಾಕ್ಕೊಂಡು ಮುಖ ಮುಚ್ಚುವಂತೆ ಮಾಸ್ಕ್‌ ಧರಿಸಿ ಹೊರಗೆ ಓಡಾಡಿದ್ದಾರೆ. ರಾತ್ರಿಯಾದ ಕಾರಣ ಕೇವಕ ಕಣ್ಣನ್ನಷ್ಟೇ ಗಮನಿಸಿ ಗುರುತು ಹಿಡಿಯೋದು ಕಷ್ಟ. ಹೀಗಾಗಿ ಜನಕ್ಕೆ ಸನ್ನಿ ಗುರುತಿಸಲಿಕ್ಕಾಗಲಿಲ್ಲ. 

ಭಿನ್ನ ಮತಗಳ ಮದುವೆಯಲ್ಲಿ ಮಕ್ಕಳು ಮುಸ್ಲಿಂಗಳಾಗೋದ್ಯಾಕೆ ? ಕಂಗನಾ ಪ್ರಶ್ನೆ ...

 ಆದರೆ ಹೀಗೆಂದು ಬರೆದುಕೊಂಡಿರುವ ಸನ್ನಿ ಲಿಯೋನ್‌ ಪೋಸ್ಟ್ ಗೆ ಭರ್ಜರಿ ರೆಸ್ಪಾನ್ಸ್ ಬಂದಿದೆ. ಹತ್ತಿರತ್ತಿರ 12 ಲಕ್ಷ ಜನ ನೋಡಿ ಈ ದಿಟ್ಟೆಯ ಸಾಹಸಕ್ಕೆ ಭಲೇ ಅಂದಿದ್ದಾರೆ. ಕಮೆಂಟ್‌ನಲ್ಲಿ ನಾಳೇನೂ ಮಧ್ಯರಾತ್ರಿ ಹೊರಗೆ ಬರ್ತೀರಾ ಅಂತ ಜೋಕ್‌ ಮಾಡಿದ್ದಾರೆ. ಅಂದಹಾಗೇ 46.7 ಮಿಲಿಯನ್‌ ಫಾಲೋವರ್ಸ್ ಇದ್ದಾರೆ.

Follow Us:
Download App:
  • android
  • ios