ಕನ್ನಡಿಗರ ಅಭಿಮಾನಕ್ಕೆ ಮಾರು ಹೋದ ನಟಿ ಕನ್ನಡದಲ್ಲಿ ಬರ್ತ್‌ಡೇ ವಿಶ್ ನೋಡಿ ಸನ್ನಿ ಲಿಯೋನ್ ಖುಷ್ ಇನ್ಸ್‌ಸ್ಟಾಗ್ರಾಂನಲ್ಲಿ ಪೋಸ್ಟರ್ ಶೇರ್ ಮಾಡಿದ ಬಾಲಿವುಡ್ ಚೆಲುವೆ

ಸನ್ನಿ ಲಿಯೋನ್‌ಗೆ ಅಪಾರ ಅಭಿಮಾನಿ ಬಳಗವಿದೆ. ಎಲ್ಲ ಕಡೆ ಸನ್ನಿ ಲಿಯೋನ್ ಅಭಿಮಾನಿಗಳಿದ್ದಾರೆ. ಸನ್ನಿ ಲಿಯೋನ್ ಹೆಸರಲ್ಲಿ ಸಂಘಗಳು, ಸೋಷಿಯಲ್ ಮೀಡಿಯಾ ಪೇಜ್‌ಗಳು ಆಕ್ಟಿವ್ ಆಗಿವೆ.

ಇತ್ತೀಚೆಗಷ್ಟೇ ನಟಿ ತಮ್ಮ 40ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಈ ಸಂದರ್ಭ ನಟಿ ಒಂದು ಸ್ಪೆಷಲ್ ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿದ್ದಾರೆ. ಅದೂ ಕರ್ನಾಟಕದ್ದು. ಕರ್ನಾಟಕದಲ್ಲಿರೋ ಸನ್ನಿ ಅಭಿಮಾನಿಗಳದ್ದು.

ಸನ್ನಿಗೆ 40 ವರ್ಷ: ಪತ್ನಿಯ ಚಂದದ ಬಾಲ್ಯದ ಫೋಟೋ ಶೇರ್ ಮಾಡಿದ ಡೇನಿಯಲ್

ಹೌದು. ಕರ್ನಾಟಕದಲ್ಲಿರೋ ಸನ್ನಿ ಲಿಯೋನ್ ಅಭಿಮಾನಿಗಳು ನಟಿಯ ಬರ್ತ್‌ಡೇ ದಿನ ನಟಿ ಸೀರೆಯುಟ್ಟಿರೋ ಚಂದದ ಉದ್ದನೆಯ ಪೋಸ್ಟರ್ ಹಾಕಿ ಅನಾಥ ಮಕ್ಕಳ ತಾಯಿ, ಅಭಿಮಾನಿಗಳ ದೇವತೆ ಅಂತ ಅಭಿಮಾನ ವ್ಯಕ್ತಪಡಿಸಿದ್ದಾರೆ.

ರೆಡ್ ಬ್ಲೌಸ್ ಧರಿಸಿ ಲೆಮನ್ ಕಲರ್ ಸೀರೆ ಉಟ್ಟ ಸನ್ನಿ ಲಿಯೋನ್ ಫೋಟೋವನ್ನು ಪೋಸ್ಟರ್‌ಗೆ ಬಳಸಲಾಗಿದೆ. ಇದರಲ್ಲಿ ನಟಿ ಸೊಂಟಕ್ಕೆ ಕೈ ಇಟ್ಟು ಪೋಸ್ ಕೊಟ್ಟಿದ್ದಾರೆ. ನಟಿಯ ಫುಲ್ ಫೋಟೋ ಪೋಸ್ಟರ್ ಉದ್ದನೆ ಇದ್ದು ಅದನ್ನು ಸಾರ್ವಜನಿಕ ಪ್ರದೇಶದಲ್ಲಿ ಜೋಡಿಸಲಾಗಿದೆ.