ಬಾಲಿವುಡ್ ನಟಿ ಸನ್ನಿ ಲಿಯೋನ್‌ಗೆ 40 ವರ್ಷ ಪತ್ನಿಯ ಬಾಲ್ಯದ ಫೋಟೋ ಶೇರ್ ಮಾಡಿದ ಡೇನಿಯಲ್

ಮೇ 13 ರಂದು ಸನ್ನಿ ಲಿಯೋನ್ 40 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರ ಪತಿ ಡೇನಿಯಲ್ ವೆಬರ್ ಇನ್‌ಸ್ಟಾಗ್ರಾಮ್‌ನಲ್ಲಿ ನಟಿಯ ಕೊಲಾಜ್ ಶೇರ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಸನ್ನಿ ಅವರ ಬಾಲ್ಯದ ಫೋಟೋ ಇದೆ.

ಬಾಲ್ಯದ ಚಿತ್ರದಲ್ಲಿ ಚಳಿಗಾಲದ ಬಟ್ಟೆಗಳನ್ನು ಧರಿಸಿ ಹಿಮದಲ್ಲಿ ಪೋಸ್ ನೀಡುತ್ತಿರುವ ಸನ್ನಿಯನ್ನು ಕಾಣಬಹುದು. ಇತ್ತೀಚಿನ ಚಿತ್ರದಲ್ಲಿ, ಸನ್ನಿ ಕಪ್ಪು ಡ್ರೆಸ್‌ನಲ್ಲಿ ಕಂಡುಬಂದಿದ್ದಾರೆ. ಫೋಟೋ ಹಂಚಿಕೊಂಡ ಡೇನಿಯಲ್, ನೀವು ನೀವಾಗಿಯೇ ಇರುವುದಕ್ಕೆ ಧನ್ಯವಾದಗಳು. ಜನ್ಮದಿನದ ಶುಭಾಶಯಗಳು. ನೀವು ಜೀವನದಲ್ಲಿ ಎಲ್ಲದಕ್ಕೂ ಅರ್ಹರು. ನೀವು ಸ್ಫೂರ್ತಿ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದಿದ್ದಾರೆ.

ಅನುಷ್ಕಾ ಶೆಟ್ಟಿ ಲಾಕ್‌ಡೌನ್ ಫೋಟೋ ವೈರಲ್: ಇಣುಕುತ್ತಿದೆ ಬೆಳ್ಳಿ ಕೂದಲು

ಕಾಮೆಂಟ್‌ನಲ್ಲಿ ಅಭಿಮಾನಿಗಳು ಸನ್ನಿ ಮತ್ತು ಡೇನಿಯಲ್ ಅವರಿಗೆ ಶುಭಾಶಯ ತಿಳಿಸಿದ್ದಾರೆ. ನಿಮ್ಮಂತಹ ಗಂಡನನ್ನು ಪಡೆದ ಅವಳು ತುಂಬಾ ಅದೃಷ್ಟಶಾಲಿ ಎಂದು ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

View post on Instagram