Asianet Suvarna News Asianet Suvarna News

ಉತ್ತರ ಪ್ರದೇಶದಲ್ಲಿ ಸನ್ನಿ ಲಿಯೋನ್​ ಕಣ್ಣು ಕುಕ್ಕಿಸುವ ರೆಸ್ಟೋರೆಂಟ್! ನಟಿಯ ಕೈರುಚಿ ನೋಡಬೇಕೆಂದ್ರೆ ಇಲ್ಲಿ ಬನ್ನಿ...

ಉತ್ತರ ಪ್ರದೇಶದ ನೋಯ್ಡಾದಲ್ಲಿ ಬಾಲಿವುಡ್​ ನಟಿ ಸನ್ನಿ ಲಿಯೋನ್​  ಐಷಾರಾಮಿ  ರೆಸ್ಟೋರೆಂಟ್ ತೆರೆದಿದ್ದಾರೆ.  ಖುದ್ದು ಮಾಡಿ ಬಡಿಸ್ತಾರೆ ಅಡುಗೆ. ಡಿಟೇಲ್ಸ್​ ಇಲ್ಲಿದೆ.. 
 

Sunny Leone opens restaurant in Noida Uttar Pradesh says to conquer the World suc
Author
First Published Jan 27, 2024, 4:11 PM IST

ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿ, ಐಟಂ ಸಾಂಗ್‌ಗಳಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ಮಾಜಿ ನೀಲಿ ತಾರೆ, ನಟಿ ಸನ್ನಿ ಲಿಯೋನ್, ಈಚೆಗಷ್ಟೇ, ವಾರಣಾಸಿಗೆ ತೆರಳಿದ್ದರು.  ಪ್ರಸಿದ್ಧ ಗಂಗಾ ಆರತಿಯಲ್ಲಿ ಭಾಗಿಯಾಗಿದ್ದರು.  ಸದ್ಯ ಸನ್ನಿ ಲಿಯೋನ್ ತಮ್ಮ ಮುಂದಿನ ಮ್ಯೂಸಿಕ್ ವಿಡಿಯೋ 'ಥರ್ಡ್ ಪಾರ್ಟಿ' ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಇದರ ನಡುವೆಯೇ ನಟಿ ಹಿಂದೂಗಳ ಪವಿತ್ರ ತಾಣ ವಾರಣಾಸಿಗೆ ಭೇಟಿ ನೀಡುತ್ತಿದ್ದಾರೆ.   ಕಾಶಿ ಪ್ರವಾಸದ ಬಗ್ಗೆ ಸನ್ನಿ ತುಂಬಾ ಉತ್ಸುಕರಾಗಿದ್ದರು. ಗಂಗಾದಲ್ಲಿ ದೋಣಿ ವಿಹಾರದ ಜೊತೆಗೆ ಚಹಾ ಕುಡಿದೆ, ಬನಾರಸಿ ಪಾನ್ ತಿಂದೆ ಎಂದು ನಟಿ ಹೇಳಿದ್ದರು. 

ಇದೀಗ ನಟಿ ಐಷಾರಾಮಿ ಹೋಟೆಲ್​ ತೆರೆಯುವ ಮೂಲಕ ಸದ್ದು ಮಾಡುತ್ತಿದ್ದಾರೆ. ಅಷ್ಟಕ್ಕೂ ನಟಿ ರೆಸ್ಟೋರೆಂಟ್​ ತೆರೆದಿರುವುದು ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 129 ರಲ್ಲಿ. ಉತ್ತರ ಪ್ರದೇಶದ ಅಯೋಧ್ಯೆಗೆ ಭಾರಿ ಡಿಮಾಂಡ್​ ಬರುತ್ತಲೇ ನಟಿ ಸನ್ನಿ ಲಿಯೋನ್​ ಉತ್ತರ ಪ್ರದೇಶದಲ್ಲಿಯೇ  ರೆಸ್ಟೋರೆಂಟ್​ ಓಪನ್​ ಮಾಡಿದ್ದಾರೆ. ಅಯೋಧ್ಯೆಯಿಂದ ಇದು ಸುಮಾರು 700 ಕಿಲೋ ಮೀಟರ್​ ದೂರವಿದೆ. ಇದರ ವಿಡಿಯೋಗಳನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ.  ಚಿಕಲೋಕ ನೋಯ್ಡಾ ಎಂದು ರೆಸ್ಟೋರೆಂಟ್​ಗೆ ನಾಮಕರಣ ಮಾಡಿರುವ ನಟಿ ಶೇರ್​ ಮಾಡಿರುವ ಫೋಟೋಗಳಲ್ಲಿ ಭರ್ಜರಿ ಅಡುಗೆಗಳನ್ನು ಕಾಣಬಹುದು. ತಮ್ಮ ವೈಯಕ್ತಿಯ ಖಾತೆ ಮಾತ್ರವಲ್ಲದೇ ರೆಸ್ಟೋರೆಂಟ್ ಹೆಸರಿನಲ್ಲಿಯೇ Instagram ಖಾತೆಯನ್ನೂ ನಟಿ ಓಪನ್​ ಮಾಡಿದ್ದಾರೆ. ಇದರಲ್ಲಿ ಭರ್ಜರಿ ಓಪನಿಂಗ್​ ಸೆರಮನಿಯೂ ನಡೆದಿದ್ದು, ಇದರಲ್ಲಿ ಹಲವಾರು ತಾರೆಯರು ಭಾಗಿಯಾಗಿದ್ದರು. ಈ ರೆಸ್ಟೋರೆಂಟ್​ನಲ್ಲಿ ಐಷಾರಾಮಿ ವಸ್ತುಗಳಿಗೇನೂ ಕೊರತೆ ಇಲ್ಲ. ಅಬ್ಬಬ್ಬಾ ಎನ್ನುವಷ್ಟರ ಮಟ್ಟಿಗೆ ಈ ರೆಸ್ಟೋರೆಂಟ್​ ಇದೆ. ಭಾರತೀಯ, ಏಷ್ಯನ್, ಯುರೋಪಿಯನ್ ಮತ್ತು ಇಟಾಲಿಯನ್ ಪಾಕಪದ್ಧತಿಯನ್ನು ಸವಿಯಬಹುದು.

ಬ್ರಾಲೆಸ್​ ಕರೀನಾ ಕಪೂರ್​ ಖಾನ್​ಗೆ ಇದು ಮದುಮಗಳ ಡ್ರೆಸ್​ ಅಂತೆ! ನಿಮ್ಮಲ್ಲಿ ಹೀಗೇನಾ ಕೇಳ್ತಿದ್ದಾರೆ ನೆಟ್ಟಿಗರು...
 
ಕುತೂಹಲದ ವಿಷಯವೆಂದರೆ, ಇಲ್ಲಿ ಖುದ್ದು ನಟಿ ತಾವೇ ಅಡುಗೆ ತಯಾರಿಸುವುದೂ ಇದೆ. ಸನ್ನಿ ಲಿಯೋನ್ ತುಂಬಾ ಖುಷಿಯಿಂದ ಸ್ವತಃ ಪಿಜ್ಜಾ ತಯಾರಿಸಿ ಗ್ರಾಹಕರಿಗೆ ನೀಡಿರುವ ವಿಡಿಯೋ ವೈರಲ್​ ಆಗಿದೆ.  ಈ ರೆಸ್ಟೊರೆಂಟ್ ಮೂಲಕ ಜಗತ್ತನ್ನೇ ಗೆಲ್ಲುವುದು ನನ್ನ ಗುರಿ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ. ಗ್ರಾಹಕರಿಗೆ ಖುದ್ದು ಕೈರುಚಿ ತೋರಿಸುವುದೂ ತಮ್ಮ ಉದ್ದೇಶ ಎಂದಿದ್ದಾರೆ. 
 
ಸದ್ಯ ನಟಿ ಮ್ಯೂಸಿಕ್ ವಿಡಿಯೋ 'ಥರ್ಡ್ ಪಾರ್ಟಿ'ಯಲ್ಲಿ ಬಿಜಿಯಾಗಿದ್ದಾರೆ. ಇದರ  ಬಗ್ಗೆ  ಮಾತನಾಡಿದ ಸನ್ನಿ ಅವರು, ಅಭಿಷೇಕ್ ಸಿಂಗ್ ಚಿತ್ರವನ್ನು ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಹಾಡುಗಳನ್ನು ಚಿತ್ರೀಕರಿಸಿದ್ದಾರೆ. ಅವರೇ ಬರೆದು, ಸಂಗೀತ ಸಂಯೋಜನೆ ಮಾಡಿ ರಂಜನೀಯ ಹಾಡುಗಳನ್ನು ಹಾಡಿದ್ದಾರೆ ಎಂದರು. ತಮ್ಮ ಪ್ರವಾಸದ ವಿಡಿಯೋ ಅನ್ನು  ಸನ್ನಿ ಲಿಯೋನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗಂಗಾ ಆರತಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಜೊತೆಗೆ "ವಾರಣಾಸಿಯಲ್ಲಿ ಗಂಗಾ ಆರತಿಯನ್ನು ನೋಡುವುದು ಅತ್ಯಂತ ಅದ್ಭುತ ಅನುಭವ. ಅಭಿಷೇಕ್ ಸಿಂಗ್ ಮತ್ತು ಟಿ ಸೀರಿಸ್‌ಗೆ ಧನ್ಯವಾದಗಳು" ಎಂದು ಶೀರ್ಷಿಕೆ ನೀಡಿದ್ದಾರೆ. ಇನ್ನು 'ಥರ್ಡ್ ಪಾರ್ಟಿ' ಬಗ್ಗೆ ಹೇಳುವುದಾದರೆ, ಇದು ಕಳೆದ ನವೆಂಬರ್​ 15ರಂದು ಬಿಡುಗಡೆಯಾಗಿದೆ. ಇದರಲ್ಲಿ  ಮಾಜಿ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ಮತ್ತು ಸನ್ನಿ ಲಿಯೋನ್ ಇಬ್ಬರೂ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಸಿಂಗ್ ಹೊಸ ಹಾಡನ್ನು ಹಾಡಿದ್ದಾರೆ. ಹಾಡನ್ನು ಸಂಯೋಜನೆ ಮಾಡಿದ್ದಾರೆ ಮತ್ತು ಅವರೇ ಬರೆದಿದ್ದಾರೆ.  ನಟಿಯೇ  ಹೇಳಿರುವಂತೆ, ಅಭಿಷೇಕ್ ಸಿಂಗ್ ಚಿತ್ರವನ್ನು ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಹಾಡುಗಳನ್ನು ಚಿತ್ರೀಕರಿಸಿದ್ದಾರೆ. 

ಇನ್​ಸ್ಟಾಗ್ರಾಮ್​ನಲ್ಲಿ ಅಭಿಷೇಕ್​ ಬಚ್ಚನ್​ ನೋವಿನ ನುಡಿ: ಐಶ್ವರ್ಯ ಜೊತೆಗಿನ ಡಿವೋರ್ಸ್​ ನಿಜನಾ?

Follow Us:
Download App:
  • android
  • ios