ಬಾಲಿವುಡ್ ಮಾದಕ ನಟಿ ಸನ್ನಿ ಲಿಯೋನ್‌ಗೆ ಸಂಕಷ್ಟ ಎದುರಾಗಿದೆ. ಸನ್ನಿ ಲಿಯೋನ್ ಚಿಕಾ ಲೋಗಾಗೆ ಕೋರ್ಟ್ ತಡೆ ನೀಡಿದೆ. ಏನಿದು ಸನ್ನಿ ಲಿಯೋನ್ ಚಿಕಾ ಲೋಕಾ ಇದಕ್ಕೆ ಕೋರ್ಟ್ ಸ್ಟೇ ನೀಡಿದ್ದು ಯಾಕೆ?
ಲಖನೌ(ಫೆ.01) ಬಾಲಿವುಡ್ ನಟಿ ಸನ್ನಿ ಲಿಯೋನ್ ತಮ್ಮ ಮಾದಕ ಬ್ಯೂಟಿ ಮೂಲಕ ಹಲವರ ನಿದ್ದೆಗೆಡಿಸಿದ್ದಾರೆ. ಆದರೆ ಏಕಾಏಕಿ ಇದೀಗ ಸನ್ನಿ ಲಿಯೋನ್‌ಗೆ ನಿದ್ದೆ ಬಾರದಂತಾಗಿದೆ. ಇದಕ್ಕೆ ಕಾರಣ ಚಿಕಾ ಲೋಕಾ. ಹೌದು, ಉತ್ತರ ಪ್ರದೇಶದ ಲಖೌನ ಹೃದಯ ಭಾಗದಲ್ಲಿ ಸನ್ನಿ ಲಿಯೋನ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಕಟ್ಟಡ ನಿರ್ಮಾಣವಾಗುತ್ತಿದೆ. ಶೀಘ್ರದಲ್ಲೇ ಈ ಬಾರ್ ರೆಸ್ಟೋಂಟ್ ಆರಂಭಕ್ಕೆ ಸನ್ನಿ ಲಿಯೋನ್ ತಯಾರಿ ಮಾಡಿಕೊಂಡಿದ್ದಾರೆ. ಆದರೆ ಸನ್ನಿ ಲಿಯೋನ್ ಪ್ರಯತ್ನಕ್ಕೆ ಕೋರ್ಟ್ ತಡೆ ನೀಡಿದೆ. ಸ್ಥಳೀಯ ನಿವಾಸಿ ಪ್ರೇಮ್ ಸಿನ್ಹ ದೂರಿನ ಆಧಾರದಲ್ಲಿ ಕೋರ್ಟ್ ಬಾಂಡ್ ಆ್ಯಂಡ್ ರೆಸ್ಟೋರೆಂಟ್ ನಿರ್ಮಾಣಕ್ಕೆ ಸ್ಟೇ ನೀಡಿದೆ.
ಬಾಲಿವುಡ್ ನಟಿ ಸನ್ನಿ ಲಿಯೋನ್‌ರ ರೆಸ್ಟೋರೆಂಟ್ ಮತ್ತು ಬಾರ್ 'ಚಿಕಾ ಲೋಕಾ' ಈಗ ವಿವಾದದಲ್ಲಿ ಸಿಲುಕಿದೆ. ಲಕ್ನೋದ ಎಕ್ಸ್‌ಪೀರಿಯನ್ ಕ್ಯಾಪಿಟಲ್ ನಿವಾಸಿ ಪ್ರೇಮಾ ಸಿನ್ಹಾ ಅವರ ದೂರಿನ ಮೇರೆಗೆ ಗ್ರಾಹಕ ನ್ಯಾಯಾಲಯ ಸನ್ನಿ ಲಿಯೋನ್‌ಗೆ ಲೀಗಲ್ ನೋಟಿಸ್ ಕಳುಹಿಸಿದೆ. ಸನ್ನಿ ಲಿಯೋನ್ ಅವರ ಬಾರ್ ಆ್ಯಂಡ್ ರೆಸ್ಟೋರೆಂಟ್ ಲಖನೌ ಹೈಕೋರ್ಟ್ ಹಾಗೂ ಇಂದಿರಾ ಗಾಂಧಿ ಪ್ರತಿಷ್ಠಾನ ಪಕ್ಕದಲ್ಲೇ ನಿರ್ಮಾಣವಾಗುತ್ತಿದೆ. ಇಲ್ಲಿ ಬಾರ್ ನಿರ್ಮಾಣವಾಗುತ್ತಿರುವುದು ಹೈಕೋರ್ಟ್ ಹಾಗೂ ಇಂದಿರಾ ಗಾಂಧಿ ಪ್ರತಿಷ್ಠಾನದ ಭದ್ರತೆಗೆ ಸವಾಲಾಗಲಿದೆ. ಜೊತೆಗೆ ಖಾಸಗಿ ತನಕ್ಕೆ ಧಕ್ಕೆಯಾಗಲಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಸನ್ನಿ ಲಿಯೋನ್‌ಗೆ ಫನ್ನಿ ಗೇಮ್ ಎಂದು ಮ್ಯಾನೇಜರ್ ಮೋಸ, ರಂಪಾಟ ವಿಡಿಯೋ ಹಂಚಿಕೊಂಡ ನಟಿ!
ಈ ದೂರಿನಲ್ಲಿ ಉಲ್ಲೇಖಿಸಿರುವ ಮತ್ತೊಂದು ಪ್ರಮುಖ ಅಂಶ ಎಂದರೆ ಈ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಕ್ಕಳ ಆಟದ ಮೈದಾನದವನ್ನು ಆಕ್ರಮಿಸಿಕೊಂಡಿದೆ. ಹಿರಿಯ ನಾಗರೀಕರಿಗೆ ಮೀಸಲಾದ ಪ್ರದೇಶವನ್ನು ಸನ್ನಿ ಲಿಯೋನ್ ಆಕ್ರಮಿಸಿಕೊಂಡು ಬಾರ್ ಆ್ಯಂಡ್ ರೆಸ್ಟೋರೆಂಟ್ ಆರಂಭಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಒಂದು ಬಾರ್ ಆ್ಯಂಡ್ ರೆಸ್ಟೋರೆಂಟ್ ಹಲವು ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ಪ್ರೇಮ್ ಸಿನ್ಹ ಹೇಳಿದ್ದಾರೆ.
ಲಕ್ನೋ ಅಭಿವೃದ್ಧಿ ಪ್ರಾಧಿಕಾರದ ನಿರ್ಲಕ್ಷ್ಯದ ಬಗ್ಗೆ ಗ್ರಾಹಕ ನ್ಯಾಯಾಲಯ ಪ್ರಶ್ನೆ
ರೆಸ್ಟೋರೆಂಟ್ ಮತ್ತು ಬಾರ್ ಅನ್ನು ಇಂದಿರಾ ಗಾಂಧಿ ಪ್ರತಿಷ್ಠಾನ ಮತ್ತು ಹೈಕೋರ್ಟ್ ಬಳಿ ನಿರ್ಮಿಸಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದು ಈ ಪ್ರದೇಶದ ಸುರಕ್ಷತೆ ಮತ್ತು ನಾಗರಿಕರ ಅನುಕೂಲಕ್ಕೆ ಅಪಾಯವನ್ನುಂಟುಮಾಡುತ್ತದೆ. ವಿಚಾರಣೆಯ ಸಮಯದಲ್ಲಿ ನ್ಯಾಯಮೂರ್ತಿ ಅಶೋಕ್ ಕುಮಾರ್ ಲಕ್ನೋ ಅಭಿವೃದ್ಧಿ ಪ್ರಾಧಿಕಾರದ ನಿರ್ಲಕ್ಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ಅಧಿಕಾರಿಗಳಿಗೆ ಪರಿಸ್ಥಿತಿಯನ್ನು ಪರಿಶೀಲಿಸುವಂತೆ ಸೂಚಿಸಿದರು.
ಮುಂದಿನ ವಿಚಾರಣೆ ಫೆಬ್ರವರಿ 19
ಗ್ರಾಹಕ ನ್ಯಾಯಾಲಯ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 19 ಕ್ಕೆ ನಿಗದಿಪಡಿಸಿದೆ, ಅಲ್ಲಿ ಈ ಯೋಜನೆಯ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ಮಧ್ಯೆ, ಸ್ಥಳೀಯ ನಾಗರಿಕರು ಮತ್ತು ಪ್ರದೇಶದ ಪ್ರತಿನಿಧಿಗಳಲ್ಲಿ ಅಸಮಾಧಾನದ ವಾತಾವರಣವಿದೆ. ಈ ರೆಸ್ಟೋರೆಂಟ್ ತೆರೆದರೆ ಪ್ರದೇಶದಲ್ಲಿ ಸಂಚಾರ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಜನರು ಹೇಳುತ್ತಿದ್ದಾರೆ.
ಸ್ಥಳೀಯ ನಾಗರಿಕರ ಸುರಕ್ಷತೆ ಮತ್ತು ಶಾಂತಿಯ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ
ರೆಸ್ಟೋರೆಂಟ್ ಮತ್ತು ಬಾರ್ ನಿರ್ಮಾಣದಿಂದ ಪ್ರದೇಶದಲ್ಲಿ ವಾಸಿಸುವ ನಾಗರಿಕರಿಗೆ ಸುರಕ್ಷತೆಯ ಬಗ್ಗೆ ಕಳವಳವಿದೆ, ಜೊತೆಗೆ ಪ್ರದೇಶದ ಶಾಂತಿಯೂ ಭಂಗವಾಗಬಹುದು. ಈ ಸಂಪೂರ್ಣ ಪ್ರಕರಣವು ಇಂತಹ ಸಂಸ್ಥೆಗಳನ್ನು ಸ್ಥಳೀಯ ಸೌಲಭ್ಯಗಳು ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಬೇಕೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇದೀಗ ಕೋರ್ಟ್ ಆದೇಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಇತ್ತ ಸನ್ನಿ ಲಿಯೋನ್ ಕೂಡ ಸಮಸ್ಯೆ ಎದುರಿಸುವಂತಾಗಿದೆ.
ಕರ್ನಾಟಕದಲ್ಲಿ ಉಳಿದುಕೊಂಡ ಸನ್ನಿ ಲಿಯೋನ್, ಈ ಗ್ರಾಮದಲ್ಲಿ ನಟಿಯ ಶೂಟಿಂಗ್!
