Asianet Suvarna News Asianet Suvarna News

ಸನ್ನಿ ಲಿಯೋನ್‌ಗೆ ಫನ್ನಿ ಗೇಮ್ ಎಂದು ಮ್ಯಾನೇಜರ್ ಮೋಸ, ರಂಪಾಟ ವಿಡಿಯೋ ಹಂಚಿಕೊಂಡ ನಟಿ!

ಬಾಲಿವುಡ್ ನಟಿ ಸನ್ನಿ ಲಿಯೋನ್ ಮ್ಯಾನೇಜರ್ ಮಾತು ನಂಬಿ ಮೋಸ ಹೋಗಿದ್ದಾರೆ. ಫನ್ನಿ ಗೇಮ್ ಎಂದು ಹೇಳಿದ ಮ್ಯಾನೇಜರ್ ಮಾಡಿದ್ದು ನಟಿಯ ಆಕ್ರೋಶಕ್ಕೆ ಕಾರಣವಾಗಿದೆ. ಖುದ್ದು ಸನ್ನಿ ಲಿಯೋನ್ ಈ ವಿಡಿಯೋ ಹಂಚಿಕೊಂಡಿದ್ದಾರೆ.
 

Sunny Leone completely wet during manager prank games actress share funny video ckm
Author
First Published Aug 18, 2024, 7:15 PM IST | Last Updated Aug 18, 2024, 7:14 PM IST

ಮುಂಬೈ(ಆ.18) ಬಾಲಿವುಡ್ ನಟಿ ಸನ್ನಿ ಲಿಯೋನ್ ಹಲವು ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಇದರ ಜೊತೆಗೆ ಖಾಸಗಿ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸನ್ನಿ ಲಿಯೋನ್ ತುಂಬಾ ಸಕ್ರಿಯರಾಗಿದ್ದರೆ.ಶೂಟಿಂಗ್ ಸೀನ್, ಕ್ಯಾಮೆರಾ ಹಿಂಭಾಗದಲ್ಲಿ ನಡೆದ ಘಟನೆಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ತಮ್ಮ ಮ್ಯಾನೇಜರ್ ಮಾಡಿದ ಮೋಸದ ಕುರಿತ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಫನ್ನಿ ಗೇಮ್ ಎಂದು ಮ್ಯಾನೇಜರ್ ಮಾತು ನಂಬಿ ಆಟಕ್ಕೆ ಕುಳಿತ ಸನ್ನಿ ಲಿಯೋನ್ ಪ್ಯಾಂಟ್ ನೀರಿನಲ್ಲಿ ಒದ್ದೆಯಾಗಿದೆ. ನಿಜಕ್ಕೂ ಇದೂ ಫನ್ನಿ, ಆದರೆ ಸನ್ನಿ ಮಾತ್ರ ಗರಂ ಆಗಿದ್ದಾರೆ.

ಸನ್ನಿ ಲಿಯೋನ್ ಮ್ಯಾನೇಜರ್ ರಜನಿ ಶೂಟಿಂಗ್‌ಗೂ ಮುನ್ನ ಇದ್ದ ಬಿಡುವಿನ ವೇಳೆಯಲ್ಲಿ ತಮಾಷೆಯಾಗಿ ಗೇಮ್ ಆಡಿದ್ದಾರೆ. ಮೇಕ್ ಅಪ್ ಆರ್ಟಿಸ್ಟ್ ಸೇರಿದಂತೆ ಹಲವರು ಈ ವೇಳೆ ಅಲ್ಲಿದ್ದರು. ಇದೇ ವೇಳ ಎಂಟ್ರಿಕೊಟ್ಟ ಮ್ಯಾನೇಜರ್ ರಜನಿ, ನೇರವಾಗಿ ಸನ್ನಿ ಲಿಯೋನ್ ಬಳಿ ಬಂದು, ಒಂದು ವಿಶೇಷ ಗೇಮ್ ಇದೆ, ತುಂಬಾ ಆಸಕ್ತಿಕರವಾಗಿದೆ ಎಂದಿದ್ದಾರೆ. ಮೊಬೈಲ್‌ನಲ್ಲಿ ಈ ಗೇಮ್ ಭಾರಿ ವೈರಲ್ ಆಗುತ್ತಿದೆ ಎಂದು ಪುಂಗಿ ಊದಿದ್ದಾರೆ. 

ಟ್ರಾನ್ಸ್‌ಫಾರ್ಮೇಶನ್ ಅಂದ್ರೆ ಇದೇನಾ? ಕಲಾವಿದೆ ಎನಿಸಿಕೊಳ್ಳುವತ್ತ ಹಾಟ್ ನಟಿ ಸನ್ನಿ ಲಿಯೋನ್ ಜರ್ನಿ!

ನೆಲದ ಮೇಲೆ ಕುಳಿತುಕೊಳ್ಳಬೇಕು, ಬಳಿಕ ನೆಲದ ಮೇಲಿ ಚೆಲ್ಲಿದ ನೀರನ್ನು ಒರೆಸುತ್ತೇನೆ. ಈ ವೇಳೆ ಸನ್ನಿ ಲಿಯೋನ್ ಒರೆಸದಂತೆ ತಡೆಯಬೇಕು. ಸ್ಪೂನ್ ಮೂಲಕ ಕುಕ್ಕಬೇಕು. ತಪ್ಪಿಸಿಕೊಂಡು ನೆಲ ಒರೆಸುವುದೇ ಈ ಗೇಮ್‌ನ ವಿಶೇಷತೆ ಎಂದಿದ್ದಾರೆ. ಸರಿ ಮೊಬೈಲ್ ವೈರಲ್ ವಿಡಿಯೋ ತೋರಿಸಿ ಎಂದಾಗ, ಮೊದಲು ಗೇಮ್ ಆಡಿ ಬಳಿ ತೋರಿಸುತ್ತೇನೆ ಎಂದಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Sunny Leone (@sunnyleone)

 

ಮ್ಯಾನೇಜರ್ ಮಾತು ನಂಬಿ ನೆಲದ ಮೇಲೆ ಕುಳಿತ ಸನ್ನಿ ಲಿಯೋನ್ ಗೇಮ್ ಆಡಲು ರೆಡಿಯಾಗಿದ್ದಾರೆ. ಸನ್ನಿ ಕೈಯೆಗೆ ಫೋರ್ಕ್ ಸ್ಪೂನ್ ನೀಡಿದ್ದಾರೆ. ಬಳಿಕ ನೆಲದ ಮೇಲೆ ನೀರು ಚೆಲ್ಲಿದ್ದಾರೆ. ಗೇಮ್ ಆರಂಭ ಅನ್ನುವಷ್ಟರಲ್ಲೇ ಮ್ಯಾನೇಜರ್ ಕೈಯಲ್ಲಿದ್ದ ಬಟ್ಟೆಯನ್ನು ಸನ್ನಿ ಮುಖಕ್ಕೆ ಎಸೆದು ಕಾಲನ್ನು ಎಳೆದಿದ್ದಾರೆ. ಚೆಲ್ಲಿದ ನೀರಿನ ಮೇಲೆ ಸನ್ನಿ ಲಿಯೋನ್ ಪ್ಯಾಂಟ್, ಬಟ್ಟೆ ಒದ್ದೆಯಾಗಿದೆ.

ಆಕ್ರೋಶಗೊಂಡ ಸನ್ನಿ ಲಿಯೋನ್ ದಿಂಬಿನಲ್ಲಿ ತಿರುಗೇಟು ನೀಡಿದ್ದಾರೆ. ಈ ಫನ್ನಿ ವಿಡಿಯೋವನ್ನು ಸನ್ನಿ ಲಿಯೋನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಂಗಿ ಬಳಿ ಈ ರೀತಿ ಅಣ್ಣನಿಗೆ ಮಾತ್ರ ಆಟವಾಡಲು ಧೈರ್ಯವಿರುತ್ತದೆ ಎಂದು ಬರೆದುಕೊಂಡಿದ್ದಾರೆ.

ಕಾರ್‌ನಿಂದ ಇಳಿಯಲು ತಿಣುಕಾಡಿದ ಸನ್ನಿ ಲಿಯೋನ್… ಇದು ಪ್ರತಿ ಮಹಿಳೆಯ ನಿಜವಾದ ಹೋರಾಟವಂತೆ!
 

Latest Videos
Follow Us:
Download App:
  • android
  • ios