ಬಾಲಿವುಡ್ ನಟ ಹಾಗೂ ಗುರುದಾಸ್‌ಪುರ ಬಿಜೆಪಿ ಸಂಸದ ಸನ್ನಿ ಡಿಯೋಲ್‌ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎಂದು ಹಿಮಾಚಲಪ್ರದೇಶ ಆರೋಗ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ಹಿಮಾಚಲ ಪ್ರದೇಶದ ಮನಾಲಿಯ ಕುಲ್ಲು ಪ್ರದೇಶದಲ್ಲಿರುವ ಸಂಸದನಿಗೆ ಕೊರೋನಾ ದೃಢಪಟ್ಟಿದ್ದನ್ನು ಆರೋಗ್ಯ ಕಾರ್ಯದರ್ಶಿ ಅಮಿತಾಭ್ ಆವಸ್ತಿ ತಿಳಿಸಿದ್ದಾರೆ.

ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ನೀಡಿದ ಮಾಹಿತಿಯ ಪ್ರಕಾರ, ಸಂಸದ ಮತ್ತು ಅವರ ಸ್ನೇಹಿತರು ಮುಂಬೈಗೆ ತೆರಳುವ ತಯಾರಿಯಲ್ಲಿದ್ದರು. ಆಗ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎಂದು ಆರೋಗ್ಯ ಕಾರ್ಯದರ್ಶಿ ಪಿಟಿಐಗೆ ತಿಳಿಸಿದ್ದಾರೆ. ಕೋವಿಡ್ ಪರೀಕ್ಷಾ ಫಲಿತಾಂಶವು ಮಂಗಳವಾರ ಸಕಾರಾತ್ಮಕವಾಗಿ ಹೊರಬಂದಿದೆ.

ಎಲ್ಲರನ್ನೂ ಹಿಂದಿಕ್ಕಿ ಅಗ್ರಸ್ಥಾನ ಪಡೆದ ರಿಯಾ.. ಬಾಕಿಯವರಿಗೆ ನೋ ಚಾನ್ಸ್!

64 ವರ್ಷದ ಬಾಲಿವುಡ್ ನಟ ಮುಂಬೈಯಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಮನಾಲಿ ಬಳಿಯ ತೋಟದ ಮನೆಯೊಂದರಲ್ಲಿ ಚೇತರಿಸಿಕೊಳ್ಳುತ್ತಿದ್ದರು. ಮುಂಬೈಗೆ ಹಿಂತಿರುಗುವ ಮೊದಲು ಸನ್ನಿ ಡಿಯೋಲ್ ಮನಾಲಿಯಲ್ಲಿ ಸ್ವತಃ ಕೋವಿಡ್ ಟೆಸ್ಟ್ ಮಾಡಿಸಿಕೊಂಡರು.

ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ಮನಾಲಿಯಲ್ಲಿ ಹೋಂ ಕ್ವಾರೆಂಟೈನ್‌ನಲ್ಲಿದ್ದರು. ಅಧಿಕಾರಿಗಳು ನೀಡಿದ ಎಲ್ಲಾ ಸೂಚನೆಗಳನ್ನು ಅವರು ಅನುಸರಿಸುತ್ತಿದ್ದಾರೆ ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ.