Asianet Suvarna News Asianet Suvarna News

87ನೇ ವಯಸ್ಸಲ್ಲಿ ಲಿಪ್​ಲಾಕ್​ನಿಂದ ಹಲ್​ಚಲ್​ ಸೃಷ್ಟಿಸಿದ ಧರ್ಮೇಂದ್ರ ಚಿಕಿತ್ಸೆಗೆ ಅಮೆರಿಕಕ್ಕೆ: ಆಗಿದ್ದೇನು?

 ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಹಾಗೂ ಗದರ್​-2 ಚಿತ್ರದ ಯಶಸ್ಸಿನಲ್ಲಿರುವ ಧರ್ಮೇಂದ್ರ ಮತ್ತು ಸನ್ನಿ ಡಿಯೋಲ್​ ಅವರು ಈಗ ಅಮೆರಿಕಕ್ಕೆ ಚಿಕಿತ್ಸೆಗೆಂದು ಹೋಗಿದ್ದಾರೆ. ಆಗಿದ್ದೇನು?
 

Sunny Deol takes father Dharmendra to US for special treatment suc
Author
First Published Sep 11, 2023, 10:02 PM IST

 ಇತ್ತೀಚೆಗೆ ತೆರೆ ಕಂಡ ನಿರ್ಮಾಪಕ ಕರಣ್ ಜೋಹರ್ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯೊಂದಿಗೆ (Rocky aur Rani ki Prem Kahani)  ಚಿತ್ರದಲ್ಲಿ  ಪ್ರಮುಖ ಜೋಡಿಗಳಾದ ರಣವೀರ್ ಮತ್ತು ಆಲಿಯಾ ನಡುವಿನ ಕೆಮೆಸ್ಟ್ರಿ ಹೊರತಾಗಿ, ಪ್ರೇಕ್ಷಕರನ್ನು ಆಶ್ಚರ್ಯದಿಂದ ಸೆಳೆದದ್ದು ಹಿರಿಯ ನಟರಾದ ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ ನಡುವಿನ ಲಿಪ್-ಲಾಕ್ ಸರಣಿ. ಒಂದು ನಿರ್ದಿಷ್ಟ ದೃಶ್ಯದಲ್ಲಿ, ಇಬ್ಬರು ಸ್ಟಾರ್-ಕ್ರಾಸ್ಡ್ ಪ್ರೇಮಿಗಳು ವರ್ಷಗಳ ಪ್ರತ್ಯೇಕತೆಯ ನಂತರ ಭೇಟಿಯಾಗುತ್ತಾರೆ. ದೃಶ್ಯದಲ್ಲಿ, ಧರ್ಮೇಂದ್ರ ಜನಪ್ರಿಯ ರೆಟ್ರೊ ಹಾಡು ಅಭಿ ನ ಜಾವೋ ಛೋಡ್ ಕರ್   ಹಾಡುತ್ತಿದ್ದಂತೆ ನಟಿ ಶಬನಾ ಜೊತೆ ಭಾವೋದ್ರಿಕ್ತರಾಗಿ ಚುಂಬನದಲ್ಲಿ ತೊಡಗಿಕೊಂಡಿರುವ ದೃಶ್ಯವಿದೆ. ಇದೀಗ ಸಕತ್​ ಸದ್ದು ಮಾಡುತ್ತಿದೆ. ಅದೇ ಇನ್ನೊಂದೆಡೆ, ಧರ್ಮೇಂದ್ರ ಪುತ್ರ ಸನ್ನಿ ಡಿಯೋಲ್​ ಅವರ ಗದರ್​-ಏಕ್​ ಪ್ರೇಮ್​ ಕಥಾ-2 ಬ್ಲಾಕ್​ ಬಸ್ಟರ್​ ಎಂದು ಸಾಬೀತಾಗಿದ್ದು, ಹಲವಾರು ದಾಖಲೆಗಳನ್ನು ಉಡೀಸ್​ ಮಾಡಿದೆ.

ಈ ಖುಷಿಯ ವಿಚಾರದ ನಡುವೆಯೇ, ಇದೀಗ ಶಾಕಿಂಗ್​ ಸುದ್ದಿಯೊಂದು ಹೊರಬಂದಿದೆ. ಅದೇನೆಂದರೆ, ನಟ ಧರ್ಮೇಂದ್ರ ಅವರಿಗೆ ಅನಾರೋಗ್ಯ ಉಂಟಾಗಿದ್ದು, ಸನ್ನಿ ಡಿಯೋಲ್​ (Sunny Deol) ಅವರು  ತಂದೆಯನ್ನು  ಚಿಕಿತ್ಸೆಗಾಗಿ ಅಮೆರಿಕಕ್ಕೆ ಕರೆದುಕೊಂಡು ಹೋಗಿದ್ದಾರೆ  ಎಂದು ವರದಿಯಾಗಿದೆ. ಸುದ್ದಿ ಪೋರ್ಟಲ್‌ನಲ್ಲಿನ ವರದಿಗಳ ಪ್ರಕಾರ, ತಂದೆ-ಮಗ ಇಬ್ಬರೂ  15-20 ದಿನಗಳವರೆಗೆ ಅಮೆರಿಕದಲ್ಲಿ ನೆಲೆಸಲಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಧರ್ಮೇಂದ್ರ ಅವರಿಗೆ  87 ವರ್ಷ ವಯಸ್ಸಾಗಿದ್ದು, ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.  ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ತನ್ನ ತಂದೆಯನ್ನು ಅಮೆರಿಕಕ್ಕೆ ಕರೆದೊಯ್ಯಲು ಸನ್ನಿ ಡಿಯೋಲ್​ ನಿರ್ಧರಿಸಿದ್ದು ಅವರನ್ನು ಕರೆದುಕೊಂಡು ಹೋಗಿದ್ದಾರೆ.

RRPK: 72 ವರ್ಷದ ಶಬನಾ ಜೊತೆ ಲಿಪ್​ಲಾಕ್​ ಅನುಭವ ಹಂಚಿಕೊಂಡ ಧರ್ಮೇಂದ್ರ, ರೊಮ್ಯಾನ್ಸ್‌ಗೆಲ್ಲಿಯ ವಯಸ್ಸು?

ಯಾವುದೇ ರೀತಿಯಲ್ಲಿ ಆತಂಕ ಪಡುವ ಅಗತ್ಯವಿಲ್ಲ. ವಯೋಸಹಜ ಸಮಸ್ಯೆಯಷ್ಟೇ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸಿದ್ದಾರೆ. ಆದರೆ, ಆತಂಕ ಪಡುವ ಅಗತ್ಯವಿಲ್ಲ ಎಂದು ವರದಿ ಹೇಳಿದೆ. 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'ಯಲ್ಲಿ ಕೂಡ ಧರ್ಮೇಂದ್ರ ಜೊತೆ ಸನ್ನಿ ಡಿಯೋಲ್​ ನಟಿಸಿದ್ದರು. ಶಬನಾ ಅಜ್ಮಿಯ ಜೊತೆಗಿನ ಲಿಪ್​ಲಾಕ್​ (Liplock) ಕುರಿತು ಮಾತನಾಡಿದ್ದ ಧರ್ಮೇಂದ್ರ,  'ವಯಸ್ಸು ಕೇವಲ ಒಂದು ಸಂಖ್ಯೆ ಮತ್ತು ವಯಸ್ಸಿನ ಹೊರತಾಗಿಯೂ ಇಬ್ಬರು ವ್ಯಕ್ತಿಗಳು ಚುಂಬಿಸುವ ಮೂಲಕ ಪರಸ್ಪರ ಪ್ರೀತಿಯನ್ನು ತೋರಿಸುತ್ತಾರೆ. ತುಂಬಾ ಕಲಾತ್ಮಕವಾಗಿ ಚಿತ್ರೀಕರಿಸಿದ್ದರಿಂದ ಶಬಾನಾ ಮತ್ತು ನಾನು ಅದನ್ನು ಮಾಡುವಾಗ ಯಾವುದೇ ರೀತಿಯ ಎಡವಟ್ಟನ್ನು ಅನುಭವಿಸಲಿಲ್ಲ' ಎಂದಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಧರ್ಮೇಂದ್ರ, 'ನಾನು ಇನ್ನೂ ಉತ್ತಮವಾಗಿ ಮಾಡಬಹುದಿತ್ತು ಎಂದು ನನಗೆ ಯಾವಾಗಲೂ ಅನಿಸುತ್ತದೆ. ಆದರೆ ಕರಣ್ ಅದ್ಭುತ ಚಿತ್ರ ಮಾಡಿದ್ದಾರೆ ಮತ್ತು ಅವರೊಬ್ಬ ಒಳ್ಳೆಯ ನಿರ್ದೇಶಕ. ಇದು ಅವರೊಂದಿಗಿನ ನನ್ನ ಮೊದಲ ಸಹಯೋಗವಾಗಿದೆ ಮತ್ತು ನಾನು ಅದನ್ನು ಸಂಪೂರ್ಣವಾಗಿ ಆನಂದಿಸಿದೆ ಎಂದಿದ್ದಾರೆ. ಎಲ್ಲಾ ನಟರು ನಿಜವಾಗಿಯೂ ಚೆನ್ನಾಗಿ ನಟಿಸಿದ್ದಾರೆ. ರಣವೀರ್ ಅದ್ಭುತ ಮತ್ತು ಆಲಿಯಾ   ಸಹಜ ನಟನೆ ಎಲ್ಲರಿಗೂ ಖುಷಿಕೊಟ್ಟಿದೆ. ಚಿತ್ರದಲ್ಲಿ ಶಬಾನಾ ಅವರ ನಟನೆ ಅದ್ಭುತವಾಗಿದೆ ಎಂದಿರುವ ನಟ,  ಜನರು ಥಿಯೇಟರ್‌ಗಳಿಗೆ ಹೋಗಿ ಚಿತ್ರವನ್ನು ವೀಕ್ಷಿಸಿ ತಮ್ಮ ಪ್ರೀತಿಯನ್ನು ಧಾರೆಯೆರೆಯಬೇಕು ಎಂದಿದ್ದಾರೆ.  

ಅದೇ ಇನ್ನೊಂದೆಡೆ ಗದರ್​-2 (Gadar-2) ಭಾರತದಲ್ಲಿ 510 ಕೋಟಿ ರೂಪಾಯಿ ಗಳಿಸಿದೆ.  ಧರ್ಮೇಂದ್ರ ಕೂಡ ತಮ್ಮ ಮಗನ ಚಿತ್ರದ ಭಾರೀ ಯಶಸ್ಸನ್ನು  ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಆಚರಿಸಿದ್ದರು.  'ಸ್ನೇಹಿತರೇ, ನಿಮ್ಮ ಪ್ರೀತಿಯ ಪ್ರತಿಕ್ರಿಯೆಗಾಗಿ ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಮತ್ತು  ಶುಭ ಹಾರೈಕೆಗಳಿಂದ ಚಿತ್ರ  ಬ್ಲಾಕ್‌ಬಸ್ಟರ್ ಎಂದು ಸಾಬೀತಾಗಿದೆ ಎಂದು ಧರ್ಮೇಂದ್ರ ತಿಳಿಸಿದ್ದರು. 

ರಣವೀರ್​ ಸಿಂಗ್​- ಆಲಿಯಾ ಈ ಪರಿ ರೊಮ್ಯಾನ್ಸ್​! ಸಿನಿಮಾದಲ್ಲೂ ಕತ್ತರಿ ಹಾಕಿದ್ದ ವಿಡಿಯೋ ವೈರಲ್​

Follow Us:
Download App:
  • android
  • ios