ಶಾರುಖ್​ ಖಾನ್​ ಚಿತ್ರದ ರೆಕಾರ್ಡ್​ ಬ್ರೇಕ್​ ಮಾಡಿದ ಸನ್ನಿ ಡಿಯೋಲ್​ 'ಗದರ್'​!

ಸನ್ನಿ ಡಿಯೋಲ್​ ಅಭಿನಯದ ಗದರ್​ ಏಕ್​ ಪ್ರೇಮ್​ ಕಥಾ ಶಾರುಖ್​ ಖಾನ್​ DDLJ  ದಾಖಲೆ ಮುರಿದಿದೆ. ಏನಿದು ವಿಷಯ| 
 

Gadar movie  prove box office bomb and break record of Shahrukhs DDLJ suc

ಸನ್ನಿ ಡಿಯೋಲ್ (Sunny Deol) ಮತ್ತು ಅಮೀಶಾ ಪಟೇಲ್ ಅಭಿನಯದ 'ಗದರ್: ಏಕ್ ಪ್ರೇಮ್ ಕಥಾ' (Gadar: Ek Prem Katha) ಚಿತ್ರ 2001ರ ಜೂನ್ 15ರಂದು ಬಿಡುಗಡೆಯಾಗಿತ್ತು. ಈ ಚಿತ್ರ ಜೂನ್ 9 ರಂದು ಅಂದರೆ ಕಳೆದ ಶುಕ್ರವಾರದಂದು  ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಭಾರಿ ಸದ್ದು ಮಾಡುತ್ತಿದೆ. 2001ರಲ್ಲಿ ಚಿತ್ರ ಬಿಡುಗಡೆಯಾದ ಬರೋಬ್ಬರಿ 21 ವರ್ಷಗಳ ನಂತರ ಈ ಚಿತ್ರ ಮತ್ತೊಮ್ಮೆ ತೆರೆಗೆ ಅಪ್ಪಳಿಸಿದೆ. ಹೊಸ ವಿಷಯ ಏನಪ್ಪಾ ಎಂದರೆ, ಗದರ್​ ಚಿತ್ರ ಭರ್ಜರಿ ಯಶಸ್ಸು ಕಂಡಿದ್ದು, ಖುದ್ದು ನಿರ್ದೇಶಕರೇ ಅಚ್ಚರಿಗೆ ಒಳಗಾಗಿದ್ದಾರೆ. ಈ ಚಿತ್ರ ಮತ್ತೊಮ್ಮೆ ಬಿಡುಗಡೆಯಾದರೆ ಇಷ್ಟೊಂದು ಹಂಗಾಮ ಸೃಷ್ಟಿಸಬಹುದು ಎಂದು ಖುದ್ದು ನಿರ್ದೇಶಕ ಅನಿಲ್ ಶರ್ಮಾ ಯೋಚಿಸಿರಲಿಲ್ಲ.  ಚಿತ್ರ ಬಿಡುಗಡೆಯಾದ ತಕ್ಷಣ ಗಲ್ಲಾಪೆಟ್ಟಿಗೆಯಲ್ಲಿ ಬಿರುಸು ಕಂಡಿದೆ. ಮೊದಲ ದಿನವೇ ಚಿತ್ರ ದಾಖಲೆ ಬರೆದಿದೆ. ಜನಕ್ಕೆ ಈ ಸಿನಿಮಾ ಇಷ್ಟವಾಗಿದ್ದು ದೇಶದೆಲ್ಲೆಡೆ ಚರ್ಚೆ ಶುರುವಾಗಿದೆ.  ಗಳಿಕೆಯಲ್ಲಿ ಚಿತ್ರ ದಾಖಲೆ ನಿರ್ಮಿಸಿದೆ.

ಹೌದು. 19 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 2001ರಲ್ಲಿ ಬಿಡುಗಡೆಯಾದಾಗ ವಿಶ್ವದಾದ್ಯಂತ 133 ಕೋಟಿ ಗಳಿಸಿತ್ತು. ಇದೀಗ ಕಳೆದ ಜೂನ್ 9 ರಂದು ಅಂದರೆ ಶುಕ್ರವಾರದಂದು ಗದರ್ ಚಿತ್ರ ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು,  ದೇಶದಾದ್ಯಂತ ಚಿತ್ರದ 700 ಪ್ರದರ್ಶನಗಳನ್ನು ನಡೆಸಲಾಗಿದೆ.  ಅಂದರೆ ನಿರ್ಮಾಪಕರು ಕೇವಲ 700 ಬಾರಿ ಚಿತ್ರವನ್ನು ತೋರಿಸಿ 30 ಲಕ್ಷ ರೂ. ಗಳಿಸಿದ್ದಾರೆ. ಈ ಮೂಲಕ  ಸನ್ನಿ ಡಿಯೋಲ್ ಅಭಿನಯದ 'ಗದರ್ ಏಕ್ ಪ್ರೇಮ್ ಕಥಾ' ಶಾರುಖ್ ಖಾನ್ ಅವರ ಸೂಪರ್‌ಹಿಟ್ ಚಿತ್ರ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' (DDLJ) ಅನ್ನು ಸೋಲಿಸಿದೆ.

ಶಾರುಖ್​ ಬಂಗ್ಲೆ ಎದುರು 300 ಫ್ಯಾನ್ಸ್ ಗಿನ್ನೆಸ್​ ವಿಶ್ವ ದಾಖಲೆ! ಏನಿದು?

ಇದು ನಿಜ.  ಶಾರುಖ್ ಖಾನ್ (Shahrukh Khan) ಅವರ 1995 ರ ಸೂಪರ್​ಹಿಟ್​ ಚಲನಚಿತ್ರ  'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಕಳೆದ ವರ್ಷ ಮರು ಬಿಡುಗಡೆ ಮಾಡಲಾಗಿತ್ತು.  ಕಳೆದ ವರ್ಷ ಶಾರುಖ್ ಖಾನ್ ಅವರ ಹುಟ್ಟುಹಬ್ಬದಂದು ಈ ಉಡುಗೊರೆಯನ್ನು ನೀಡಲಾಗಿತ್ತು. ಈ ಚಿತ್ರವು ಮರು ಬಿಡುಗಡೆಯಾದಾಗ 27 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತ್ತು. ಅದರಂತೆ ಸನ್ನಿ ಡಿಯೋಲ್ ಅಭಿನಯದ ಗದರ್ ಚಿತ್ರ 30 ಲಕ್ಷಕ್ಕೂ ಹೆಚ್ಚು ಕಲೆಕ್ಷನ್ ಮಾಡಿದೆ. ಇನ್ನೂ ಹೆಚ್ಚು ಗಳಿಕೆ ಮಾಡುವ ಸಾಧ್ಯತೆ ಇದೆ. 

ಇದೀಗ ಆಗಸ್ಟ್ 11 ರಂದು ಬಿಡುಗಡೆಯಾಗಲಿರುವ ಗದರ್ 2 ಚಿತ್ರ ಕೂಡ ಬಾಕ್ಸ್ ಆಫೀಸ್​ನಲ್ಲಿ ಬಿರುಗಾಳಿ ಎಬ್ಬಿಸಲಿದೆ ಎಂಬ ನಂಬಿಕೆ ಇದೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿದೆ. 21 ವರ್ಷಗಳ ನಂತರವೂ ಚಿತ್ರಕ್ಕೆ ಸಿಕ್ಕಿರುವ ಪ್ರೀತಿ ನೋಡಲೇಬೇಕು. ಈಗ ಅಭಿಮಾನಿಗಳು ಕೂಡ ಗದರ್ -2 ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಸನ್ನಿ ಡಿಯೋಲ್ ಕೂಡ ತಮ್ಮ ಚಿತ್ರದ ಪ್ರಚಾರ ಆರಂಭಿಸಿದ್ದಾರೆ. ಆದರೆ ಬಿಡುಗಡೆಗೆ ಮುನ್ನವೇ ಈ ಚಿತ್ರ ವಿವಾದವನ್ನೂ ಸೃಷ್ಟಿಸಿತ್ತು. ಅದೇನೆಂದರೆ, ‘ಗದರ್ 2’ ಸಿನಿಮಾದ ಚಿತ್ರೀಕರಣದ (Shooting) ವೇಳೆ ಒಂದು ವಿಡಿಯೋ ಲೀಕ್​ ಆಗಿತ್ತು. ಗುರುದ್ವಾರದಲ್ಲಿ ಚಿತ್ರೀಕರಿಸಲಾದ ಈ ವಿಡಿಯೋದಲ್ಲಿ ಸನ್ನಿ ಡಿಯೋಲ್​ ಮತ್ತು ಅಮೀಷಾ ಪಟೇಲ್​ (Ameesha Patel) ಅವರು ರೊಮ್ಯಾಂಟಿಕ್​​ ಆಗಿ ಕಾಣಿಸಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ ಡೋಲು ಬಾರಿಸುತ್ತಿರುವ ಶಬ್ದವಿದೆ. ಈ ವಿಡಿಯೋ ನೋಡುತ್ತಿದ್ದಂತೆಯೇ ಸಿಖ್​ ಸಮುದಾಯದವರಿಗೆ ಕೋಪ ಬಂದಿದೆ. 

ಗದರ್ 2 ಸಿನಮಾಕ್ಕಾಗಿ ಲಕ್ನೋ ಕಾಲೇಜಿಗೆ ಪಾಕಿಸ್ತಾನದ ಲುಕ್‌

‘ಗದರ್ 2’ ಚಿತ್ರತಂಡದ ಈ ನಡೆಯನ್ನು ಖಂಡಿಸಲಾಗಿದೆ. ‘ಶಿರೋಮಣಿ ಗುರುದ್ವಾರ ಪರಬಂಧಕ್​ ಸಮಿತಿ’ ಟ್ವಿಟರ್​ ಖಾತೆಯಲ್ಲಿ ಒಂದು ಎಚ್ಚರಿಕೆ ಸಂದೇಶವನ್ನು ಹಂಚಿಕೊಳ್ಳಲಾಗಿತ್ತು. ಈ ಘಟನೆ ಕುರಿತು ತನಿಖೆ ಆಗಬೇಕು ಮತ್ತು ಚಿತ್ರತಂಡದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಕೇಳಿಬರುತ್ತಿದೆ.  ಈ ಘಟನೆ ಕುರಿತಂತೆ ‘ಗದರ್​ 2’ ಸಿನಿಮಾ ತಂಡದಿಂದ ಇನ್ನಷ್ಟೇ ಸ್ಪಷ್ಟನೆ ಬರಬೇಕಿದೆ.

Latest Videos
Follow Us:
Download App:
  • android
  • ios