ಸೂಪರ್‌ಸ್ಟಾರ್ ಮಗನಾಗಿದ್ರೂ ಬಾಲಿವುಡ್‌ನಲ್ಲಿ ಫೈಲ್ಯೂರ್ ಆದ ಸ್ಟಾರ್ ಕಿಡ್; 40 ವರ್ಷದಲ್ಲಿ ಮಾಡಿದ ನಾಲ್ಕು ಸಿನ್ಮಾನೂ ಫ್ಲಾಪ್!
ಬಾಲಿವುಡ್‌ನಲ್ಲಿ ಅತ್ಯದ್ಭುತ ಸಿನಿಮಾಗಳನ್ನು ಮಾಡಿ ಮಿಂಚಿದ ಹಲವಾರು ನಟ-ನಟಿಯರಿದ್ದಾರೆ. ಬಾಲಿವುಡ್‌ನಲ್ಲಿ ತಮ್ಮದೇ ಆದ ಗುರುತನ್ನು ಸೃಷ್ಟಿಸಿದ ಸೂಪರ್‌ಸ್ಟಾರ್ ನಟರು. ಆದರೆ ಇವರಲ್ಲಿ ಹಲವು ನಟರ ಮಕ್ಕಳಿಗೆ ಬಾಲಿವುಡ್‌ನಲ್ಲಿ ಛಾಪು ಮೂಡಿಸಲು ಸಾಧ್ಯವಾಗಲ್ಲಿಲ್ಲ.ಅಂಥವರಲ್ಲಿ ಈ ಸ್ಟಾರ್ ಕಿಡ್ ಕೂಡಾ ಒಬ್ಬರು.
ರಾಜೇಶ್ ಖನ್ನಾ, ದಿಲೀಪ್ ಕುಮಾರ್, ದೇವ್ ಆನಂದ್, ರಾಜ್ ಕಪೂರ್, ಅಮಿತಾಬ್ ಬಚ್ಚನ್ ಇವರೆಲ್ಲರೂ ವರ್ಷಗಳ ಕಾಲ ಬಾಲಿವುಡ್‌ನಲ್ಲಿ ರಾರಾಜಿಸಿದ ಸೂಪರ್‌ಸ್ಟಾರ್ ನಟರು. ಅತ್ಯದ್ಭುತ ಸಿನಿಮಾಗಳನ್ನು ಮಾಡಿ ಬಾಲಿವುಡ್‌ನಲ್ಲಿ ತಮ್ಮದೇ ಆದ ಗುರುತನ್ನು ಸೃಷ್ಟಿಸಿದವರು. ಆದರೆ, ಅಪ್ಪಂದಿರ ನಟನೆಗೆ ಹೋಲಿಸಿದರೆ ಸೂಪರ್ ಸ್ಟಾರ್‌ಗಳ ಮಕ್ಕಳು ಹೆಚ್ಚು ಫೇಮಸ್ ಆಗಲ್ಲಿಲ್ಲ. ಅಮಿತಾಭ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅಥವಾ ಮಿಥುನ್ ಚಕ್ರವರ್ತಿ ಅವರ ಮಗ ಮಿಮೋಹ್ ಚಕ್ರವರ್ತಿ ಇವರ್ಯಾರೂ ಕೂಡಾ ಬಾಲಿವುಡ್‌ನಲ್ಲಿ ಛಾಪು ಮೂಡಿಸಲು ಸಾಧ್ಯವಾಗಲ್ಲಿಲ್ಲ. ಈ ಸ್ಟಾರ್ ಕಿಡ್ ಕೂಡಾ ಅಂಥಹದ್ದೇ ಒಬ್ಬ ನಟ. ತಂದೆ ಸೂಪರ್‌ಸ್ಟಾರ್ ಆದರೆ ಮಗ ಸೂಪರ್‌ಫ್ಲಾಪ್ ನಟ ಅನಿಸಿಕೊಂಡರು.
ಬಾಲಿವುಡ್‌ನಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಹೊಂದಿರುವ ಕೆಲವೇ ಕೆಲವು ನಟರು ಇದ್ದಾರೆ. ಇಂದಿಗೂ ಜನರು ಅವರ ಶೈಲಿಯನ್ನು ನಕಲಿಸಲು ಪ್ರಯತ್ನಿಸುತ್ತಾರೆ. ಅಂಥಾ ನಟರಲ್ಲಿ ಒಬ್ಬರು ದೇವ್ ಆನಂದ್. 70 ಮತ್ತು 80ರ ದಶಕದಲ್ಲಿ ಬಾಲಿವುಡ್‌ನ್ನು ಆಳಿದ ಸೂಪರ್‌ಸ್ಟಾರ್ ದೇವ್ ಆನಂದ್. ಅವರು ತಮ್ಮ ಮಗನನ್ನೂ ಸೂಪರ್‌ಸ್ಟಾರ್ ಮಾಡಲು ಪ್ರಯತ್ನಿಸಿದನು, ಆದರೆ ಅವರ ಶ್ರಮವೆಲ್ಲಾ ವ್ಯರ್ಥವಾಯಿತು.
80 ವರ್ಷದಿಂದ ಚಿತ್ರರಂಗ ಆಳುತ್ತಿರುವ ಕಪೂರ್ ಕುಟುಂಬದ ಮೊದಲ ಸೂಪರ್‌ಸ್ಟಾರ್ ಇವರೇ, ವಿಲನ್ ರೋಲ್‌ನಿಂದ ಹೀರೋ
ದೇವ್ ಅನಂದ್ ಮಗ ಸುನೀಲ್ ಆನಂದ್ ಮೂವಿಗಳೆಲ್ಲಾ ಫ್ಲಾಪ್
ದೇವ್ ಆನಂದ್, ಬಾಲಿವುಡ್‌ನಲ್ಲಿ ತಮ್ಮದೇ ಆದ ಸ್ಟೈಲ್ ಮತ್ತು ಮ್ಯಾನರಿಸಂ ಮೂಲಕ ಹೆಸರು ಮಾಡಿದ ನಟ. ಒಂದರ ನಂತರ ಒಂದರಂತೆ ಸೂಪರ್ ಹಿಟ್ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದರು. ನಟನೆಯ ನಂತರ,ನಿರ್ಮಾಪಕ ಮತ್ತು ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಮುನ್ನಡೆಸಿದರು. ಅಲ್ಲಿಯೂ ಯಶಸ್ಸನ್ನು ಪಡೆದರು, ಆದರೆ ಅದೇ ರೀತಿಯ ಯಶಸ್ಸನ್ನು ಅವರ ಮಗ ಸುನೀಲ್ ಆನಂದ್ ಪುನರಾವರ್ತಿಸಲು ಸಾಧ್ಯವಾಗಲಿಲ್ಲ.
ಸುನೀಲ್ ಆನಂದ್ ಒಬ್ಬ ಭಾರತೀಯ ನಟ ಮತ್ತು ನಿರ್ದೇಶಕ ಮತ್ತು ನಟರಾದ ದೇವ್ ಆನಂದ್ ಮತ್ತು ಕಲ್ಪನಾ ಕಾರ್ತಿಕ್ ಅವರ ಮಗ. ನವಕೇತನ್ ಫಿಲಂಸ್ ನಡೆಸುತ್ತಿದ್ದಾರೆ. ಸುನೀಲ್ ಆನಂದ್ ಜೂನ್ 30, 1956ರಂದು ಜನಿಸಿದರು. ಶಾಲಾ ಶಿಕ್ಷಣದ ನಂತರ, ಸುನೀಲ್ ಆನಂದ್ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು ಮತ್ತು ನಂತರ ಬಾಲಿವುಡ್‌ಗೆ ಪ್ರವೇಶಿಸಿದರು. ದೇವ್ ಆನಂದ್, ಮಗನನ್ನು ಖ್ಯಾತ ಬಾಲಿವುಡ್ ನಟನಾಗಿ ಮಾಡಬೇಕೆಂದು ಬಯಸಿದ್ದರು. ಆದರೆ ಸಿನಿ ಕೆರಿಯರ್ ಸುನೀಲ್ ಆನಂದ್ ಕೈ ಹಿಡಿಯಲ್ಲಿಲ್ಲ.
ಸಿನೆಮಾ ಸೋತ ಹೃತಿಕ್ ಮಾಜಿ ಪ್ರೇಯಸಿ ಬಾಲಿವುಡ್‌ಗೆ ವಿದಾಯ, 38ವರ್ಷಕ್ಕೆ ಅಜ್ಜಿ, ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ಲು
ಬಾಲಿವುಡ್‌ನಲ್ಲಿ ನಟ, ನಿರ್ದೇಶಕನಾಗಲೂ ಪ್ರಯತ್ನಿಸಿದರೂ ಫೈಲ್ಯೂರ್
ದೇವ್ ಆನಂದ್, ತಮ್ಮ ಮಗ ಸುನೀಲ್‌ಗಾಗಿ 1984 ರಲ್ಲಿ 'ಆನಂದ್ ಔರ್ ಆನಂದ್' ಚಿತ್ರವನ್ನು ಮಾಡಿದರು. ಈ ಚಿತ್ರದಲ್ಲಿ ದೇವ್ ಆನಂದ್ ಅವರು ನಿರ್ದೇಶಕ, ನಿರ್ಮಾಪಕ ಮತ್ತು ನಟನ ಪಾತ್ರವನ್ನು ನಿರ್ವಹಿಸಿದರು. ದೇವ್ ಆನಂದ್ ಅವರ ಉಪಸ್ಥಿತಿಯೊಂದಿಗೆ ಚಿತ್ರವು ಹಿಟ್ ಆಗುತ್ತದೆ ಎಂದು ಭರವಸೆ ಹೊಂದಿದ್ದರು, ಆದರೆ ಚಿತ್ರವು ಸೂಪರ್ ಫ್ಲಾಪ್ ಎಂದು ಸಾಬೀತಾಯಿತು. ದೇವ್ ಆನಂದ್ ಅವರ ಯೋಜನೆ ವಿಫಲವಾಯಿತು. ಸುನೀಲ್ ಆನಂದ್ ಅವರು 'ಕಾರ್ ಥೀಫ್' (1986), 'ಮೇನ್ ತೇರೆ ಲಿಯೇ' (1988), ಮತ್ತು 'ಮಾಸ್ಟರ್' (2001) ಚಿತ್ರಗಳನ್ನು ಸಹ ಮಾಡಿದ್ದಾರೆ ಆದರೆ ಅವೆಲ್ಲವೂ ಫ್ಲಾಪ್ ಆದವು.
ಸುನೀಲ್ ಆನಂದ್ ನಟನೆಯಲ್ಲಿ ಯಶಸ್ವಿಯಾಗದಿದ್ದಾಗ, ಅವರು ನಿರ್ಮಾಣ ಮತ್ತು ನಿರ್ದೇಶನಕ್ಕೆ ಮುಂದಾದರು. ನವಕೇತನ್ ಫಿಲ್ಮ್ಸ್ ಹೆಸರಿನಲ್ಲಿ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಸಹ ಸ್ಥಾಪಿಸಿದರು. ಈಗ ಸುನಿಲ್ ಆನಂದ್ ಅವರ ಪ್ರೊಡಕ್ಷನ್ ಹೌಸ್ ನಿರಂತರವಾಗಿ ಚಲನಚಿತ್ರಗಳ ನಿರ್ಮಾಪಕ ಮತ್ತು ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತದೆ. ಆದರೂ ಸುನೀಲ್ ಆನಂದ್ ಬಾಲಿವುಡ್‌ನಲ್ಲಿ ಹೆಚ್ಚು ಫೇಮಸ್ ಆಗಿಲ್ಲ.