Sumalatha Ambareesh And Darshan News: ಇನ್‌ಸ್ಟಾಗ್ರಾಮ್‌ನಲ್ಲಿ ನಟ ದರ್ಶನ್‌ ಅವರು ಸುಮಲತಾ ಅಂಬರೀಶ್‌ ಕುಟುಂಬದ ಸದಸ್ಯರನ್ನು ಅನ್‌ಫಾಲೋ ಮಾಡಿದ್ದರು. ಇದಾದ ಬಳಿಕ ಸುಮಲತಾ ಅವರ ಪೋಸ್ಟ್‌ವೊಂದು ಭಾರೀ ವೈರಲ್‌ ಆಗಿತ್ತು. ಈಗ ಈ ವಿಚಾರವಾಗಿ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ. 

ನಟ ದರ್ಶನ್‌ ಅವರು ಏಕಾಏಕಿ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಲತಾ ಅಂಬರೀಶ್‌, ಅಭಿಷೇಕ್‌, ಅವಿವಾ ಬಿದ್ದಪ್ಪ, ವಿನೀಶ್‌ ಅವರನ್ನು ಅನ್‌ಫಾಲೋ ಮಾಡಿದ್ದರು. ಇದನ್ನು ನೋಡಿ ಸುಮಲತಾ ಹಾಗೂ ದರ್ಶನ್‌ ಕುಟುಂಬದ ನಡುವೆ ಮನಸ್ತಾಪ ಬಂದಿದೆ ಎಂಬ ಮಾತು ಕೇಳಿ ಬಂದಿತ್ತು. ಈಗ ಈ ವಿಚಾರವಾಗಿ ಸುಮಲತಾ ಅವರು ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ.

ಸುಮಲತಾ ಪರೋಕ್ಷ ಪ್ರತಿಕ್ರಿಯೆ ಏನು? 
ನಟ ದರ್ಶನ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸುಮಲತಾ ಅಂಬರೀಶ್‌ ಕುಟುಂಬದ ಸದಸ್ಯರನ್ನು ಅನ್‌ಫಾಲೋ ಮಾಡಿದ್ದರು. ಇದು ಸುಮಲತಾ ಗಮನಕ್ಕೆ ಬಂದಿತ್ತೋ ಏನೋ ಇದಾದ ಬಳಿಕ ಅವರು ಇನ್‌ಸ್ಟಾಗ್ರಾಮ್‌ನಲ್ಲಿ “ಯಾರು ಸತ್ಯವನ್ನು ತಿರುಚುತ್ತಾರೆ, ಪಶ್ಚಾತಾಪ ಇಲ್ಲದೆಯೇ ಬೇರೆಯವರಿಗೆ ನೋವು ಮಾಡ್ತಾರೆ, ತಪ್ಪನ್ನು ಬೇರೆಯವರ ಮೇಲೆ ಹಾಕ್ತಾರೆ. ಆದಾಗ್ಯೂ ಅವರು ತಮ್ಮನ್ನು ತಾವು ಹೀರೋ ಎಂದುಕೊಳ್ಳುತ್ತಾರೋ ಅವರು ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿ ಪಡೆದುಕೊಳ್ತಾರೆ” ಎಂದು ಸುಮಲತಾ ಅಂಬರೀಶ್‌ ಅವರು ಬರೆದುಕೊಂಡಿದ್ದರು. ಈಗ ಮತ್ತೆ ಅವರು ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

10 ವರ್ಷಕ್ಕೂ ಅಧಿಕ Age Gap ಇರುವ ದಕ್ಷಿಣ ಭಾರತದ ಸೆಲೆಬ್ರಿಟಿ ಜೋಡಿಗಳಿವು!

ಸುಮಲತಾ ಅಂಬರೀಶ್‌ ಏನಂದ್ರು?
ನನ್ನ ಹಿಂದಿನ ಒಂದು ಪೋಸ್ಟ್‌ ಕುರಿತು ಅನಗತ್ಯವಾದ ವಿವಾದ ಸೃಷ್ಟಿಯಾಗಿರುವುದರಿಂದ ಈ ಸ್ಪಷ್ಟನೆ ನೀಡಲು ನಾನು ಇಚ್ಛಿಸುತ್ತೇನೆ. ನನ್ನ ಪೋಸ್ಟ್‌ ಯಾರನ್ನಾದರೂ ಗುರಿಯಾಗಿಸಿ ಮಾಡಲಾದದ್ದಲ್ಲ; ಅದು ಸರಳವಾಗಿ ಹಂಚಿಕೊಂಡ ವಿಷಯ ಮಾತ್ರ.

ಯಾರು ನನ್ನನ್ನು ಫಾಲೋ ಮಾಡುತ್ತಾರೆ ಅಥವಾ ಅನ್‌ಫಾಲೋ ಮಾಡುತ್ತಾರೆ ಎಂಬುದನ್ನು ಗಮನಿಸುವ ಅಭ್ಯಾಸ ಹೊಂದಿಲ್ಲ. ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ಸುದ್ದಿಗಳು ಬಂದ ಬಳಿಕವೇ ನನಗೂ ಈ ಬೆಳವಣಿಗೆ ತಿಳಿಯಿತು. ನಿಜಕ್ಕೂ, ದರ್ಶನ್ ಅವರು ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ - ಅವರ ಮಗನನ್ನೂ ಕೂಡ. ಇದು ಅವರ ವೈಯಕ್ತಿಕ ಆಯ್ಕೆ, ಮತ್ತು ಅದನ್ನು ಎಲ್ಲರೂ ಗೌರವಿಸಬೇಕು. ಇದನ್ನು ಬೇರೆ ರೀತಿಯಲ್ಲಿ ಅರ್ಥೈಸುವುದು ಅಗತ್ಯವಿಲ್ಲ.

ವಿಶೇಷ ದಿನದಂದು ಮಗುವಿನ ಫೋಟೋ ಶೇರ್‌ ಮಾಡಿದ ಅವಿವಾ ಬಿದ್ದಪ್ಪ, ಅಭಿಷೇಕ್‌ ಅಂಬರೀಶ್!

ತಾಯಿ-ಮಗನ ಸಂಬಂಧದಲ್ಲಿ ಅನಗತ್ಯವಾದ ವಿವಾದಗಳನ್ನು ಸೃಷ್ಟಿಸಬೇಡಿ ಎಂದು ಎಲ್ಲರಲ್ಲಿ ಮನವಿ ಮಾಡುತ್ತೇನೆ. ನನ್ನ ಪೋಸ್ಟ್‌ ಯಾರನ್ನೂ ಉದ್ದೇಶಿಸಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ನಾನು ನನ್ನ ಕುಟುಂಬ ಹಾಗೂ ಆಪ್ತರ ವಿಚಾರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಎಳೆದು ತರುವ ಅಭ್ಯಾಸವನ್ನು ಎಂದಿಗೂ ಹೊಂದಿಲ್ಲ.

ಸಿನಿಮಾ ಕೆಲಸದಲ್ಲಿ ದರ್ಶನ್‌ ಬ್ಯುಸಿ! 
ನಟ ದರ್ಶನ್‌ ಅವರು ಸದ್ಯ ʼಡೆವಿಲ್ʼ‌ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮೈಸೂರಿನ ಚಾಮುಂಡಿ ದೇವಿಯ ಆಶೀರ್ವಾದ ಪಡೆದು ಅವರು ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ. 

ದರ್ಶನ್‌ ಸ್ನೇಹಿತಾ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅವರು ಫೇಕ್‌ ಅಕೌಂಟ್‌ ಕ್ರಿಯೇಟ್‌ ಮಾಡಿ ಅಶ್ಲೀಲ ಕಾಮೆಂಟ್‌ ಮಾಡಿದ್ದರಂತೆ. ಅದಾದ ನಂತರದಲ್ಲಿ ರೇಣುಕಾಸ್ವಾಮಿ ಕೊಲೆ ಆಯಿತು. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್‌ ಅವರು ಕೆಲ ತಿಂಗಳುಗಳ ಕಾಲ ಜೈನಲ್ಲಿದ್ದರು. ಈಗ ಅವರು ಜಾಮೀನಿನ ಮೇಲೆ ಹೊರಗಡೆ ಬಂದಿದ್ದರು. ಈಗ ಅವರು ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.