ವಿಶೇಷ ದಿನದಂದು ಮಗುವಿನ ಫೋಟೋ ಶೇರ್ ಮಾಡಿದ ಅವಿವಾ ಬಿದ್ದಪ್ಪ, ಅಭಿಷೇಕ್ ಅಂಬರೀಶ್!
ನಟ ಅಭಿಷೇಕ್ ಅಂಬರೀಶ್ ಅವರು ಪತ್ನಿ ಅವಿವಾ ಬಿದ್ದಪ್ಪರಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಅವಿವಾ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು, “ಒಳ್ಳೆಯದಾಗಲಿ, ಉತ್ತಮವಾದುದು ಸಿಗಲಿ” ಎಂದು ಹಾರೈಸಿದ್ದಾರೆ. ತಾಯಿಯಾದ ಮೇಲೆ ಇದು ಅವರಿಗೆ ಮೊದಲ ಜನ್ಮದಿನ. ಮಗುವಿನ ಜೊತೆಗೆ ಅವಿವಾ ಜನ್ಮದಿನ ಆಚರಿಸಿಕೊಂಡಿದ್ದಾರೆ.

ಅವಿವಾ ಬಿದ್ದಪ್ಪ ಅವರು ಕಳೆದ 2024 ನವೆಂಬರ್ ತಿಂಗಳಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆರಂಭದಲ್ಲಿ ಆಸ್ಪತ್ರೆಯಲ್ಲಿ ಸುಮಲತಾ ಅಂಬರೀಶ್ ಅವರ ಜೊತೆಗೆ ಮಗು ಇರುವ ಫೋಟೋ ವೈರಲ್ ಆಗಿತ್ತು. ಅದಾದ ನಂತರ ಈ ಜೋಡಿ ಮಗುವಿನ ಫೋಟೋ ರಿವೀಲ್ ಮಾಡಿಲ್ಲ.
ಅವಿವಾ ಬಿದ್ದಪ್ಪ ಅವರ ಸೀಮಂತವನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು. ಚಿತ್ರರಂಗದ ಆತ್ಮೀಯರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಸುಮಲತಾ ಅಂಬರೀಶ್ ಅವರು ಮಗ ಅಭಿಷೇಕ್, ಅವಿವಾ ಬಿದ್ದಪ್ಪ ಅವರ ಮದುವೆಯನ್ನು ಬಹಳ ಅದ್ದೂರಿಯಾಗಿ ಮಾಡಿದ್ದರು. ಮದುವೆ, ಅರಿಷಿಣ, ಸಂಗೀತ, ಮೆಹೆಂದಿ, ಆರತಕ್ಷತೆ ಎಂದು ಗ್ರ್ಯಾಂಡ್ ಆಗಿ ಆಚರಿಸಿದ್ದರು. ಇನ್ನು ಬೇರೆ ಬೇರೆ ಭಾಷೆಯ ಚಿತ್ರರಂಗದವರು ಕೂಡ ಈ ಮದುವೆಯಲ್ಲಿ ಭಾಗಿ ಆಗಿದ್ದರು.
ಅವಿವಾ ಬಿದ್ದಪ್ಪ ಹಾಗೂ ಅಭಿಷೇಕ್ ಅಂಬರೀಶ್ ಅವರು ಇನ್ನೂ ಮಗುವಿನ ಫೋಟೋವನ್ನು ರಿವೀಲ್ ಮಾಡಿಲ್ಲ. ಈಗ ಮಗುವಿನ ಜೊತೆಗಿನ ಫೋಟೋ ಶೇರ್ ಮಾಡಿದ್ರೂ ಕೂಡ ಮುಖ ರಿವೀಲ್ ಮಾಡಿಲ್ಲ.
ಅವಿವಾ ಬಿದ್ದಪ್ಪ ಅವರು ಪತಿ ಅಭಿಷೇಕ್‌ಗೆ ಮುತ್ತಿಟ್ಟ ಫೋಟೋ ಇದು. ಈ ಜೋಡಿ ಆರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿತ್ತು.
ಅವಿವಾ ಬಿದ್ದಪ್ಪ ಅವರು ಪ್ರಸಾದ್ ಬಿದ್ದಪ್ಪ ಮಗ. ಫ್ಯಾಷನ್ ಡಿಸೈನರ್ ಆಗಿ ಅವಿವಾ ಕುಟುಂಬ ಗುರುತಿಸಿಕೊಂಡಿದೆ. ಅವಿವಾ ಕೂಡ ಫ್ಯಾಷನ್ ಡಿಸೈನರ್.