ಗುರುವಾರ ಎಂಟು ವರ್ಷ ತುಂಬಿದ ತನ್ನ ಸಹೋದರ ಅಬ್ರಾಮ್‌ಗೆ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರೀಯಲ್ಲಿ ಇಬ್ಬರ ವೀಡಿಯೊವನ್ನು ಹಂಚಿಕೊಂಡ ಸುಹಾನಾ ತಮ್ಮನಿಗೆ ವಿಶ್ ಮಾಡಿದ್ದಾರೆ.

ವೀಡಿಯೊದಲ್ಲಿ, ಸುಹಾನಾ ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ಪೂಲ್‌ನಲ್ಲಿ ಕುಳಿತಿರುವುದು ಕಂಡುಬರುತ್ತದೆ. ಅವಳು ತನ್ನ ಕ್ಯಾಮೆರಾವನ್ನು ಹೊಂದಿಸುತ್ತಿದ್ದಂತೆ, ಅಬ್ರಾಮ್ ಫೋಟೋಗೆ ಪೋಸ್ ನೀಡಲು ಓಡಿ ಬರುತ್ತಾನೆ ಮತ್ತು ಸುಹಾನಾ ಕೆನ್ನೆಗೆ ಮುತ್ತಿಡುತ್ತಾನೆ. "ಬರ್ತ್‌ಡೇ ಬಾಯ್" ಎಂಬ ಕ್ಯಾಪ್ಶನ್ ಜೊತೆ ವೀಡಿಯೊವನ್ನು ಸುಹಾನಾ ಹಂಚಿಕೊಂಡಿದ್ದಾರೆ.

ಕುರೂಪಿ ಎಂದಿದ್ದಕ್ಕೆಲ್ಲ ತಲೆ ಕೆಡಿಸಿಕೊಳ್ಳೋಲ್ಲ ಶಾರುಖ್ ಮಗಳು!

ಅಬ್ರಾಮ್ ಖಾನ್ ಕುಟುಂಬದ ಕಿರಿಯ ಮಗು, ಸುಹಾನ ಎರಡನೇ ಮಗಳು. ಅವರಿಗೆ ಆರ್ಯನ್ ಖಾನ್ ಎಂಬ ಹಿರಿಯ ಸಹೋದರನೂ ಇದ್ದಾನೆ. ಸುಹಾನಾ ಪ್ರಸ್ತುತ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಚಲನಚಿತ್ರ ಅಧ್ಯಯನದಲ್ಲಿ ಕೋರ್ಸ್ ಕಲಿಯುತ್ತಿದ್ದಾರೆ.

ಆರ್ಯನ್ ಈ ತಿಂಗಳ ಆರಂಭದಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಅಬ್ರಾಮ್, ಈ ಮಧ್ಯೆ, ತನ್ನ ಹೆತ್ತವರೊಂದಿಗೆ ಮುಂಬೈನಲ್ಲಿ ವಾಸಿಸುತ್ತಾನೆ. ಇತ್ತೀಚೆಗೆ, ಸುಹಾನಾ ತನ್ನ 21 ನೇ ಹುಟ್ಟುಹಬ್ಬವನ್ನು ಮೇ 22 ರಂದು ಆಚರಿಸಿದರು.