ಈ ಬಾಲಿವುಡ್ ನಟಿಯ ಜೀವನ ಪಯಣ ಒಂಥರಾ ಸ್ಫೂರ್ತಿದಾಯಕವಾಗಿದೆ. ಸೆಟ್‌ನಲ್ಲಿ ನೆಲ ಗುಡಿಸಿ, ವಾಂತಿ ಬಾಚುತ್ತಿದ್ದ ಈಕೆ ಮುಂದೆ ಬಾಲಿವುಡ್‌ನ ಬೇಡಿಕೆಯ ತಾರೆಯಾದರು. ಕೆಜಿಎಫ್ ಚಿತ್ರದಲ್ಲೂ ಕಾಣಿಸಿಕೊಂಡ ಈಕೆ ಯಾರು ಗೊತ್ತೆ?
ನಟನಟಿಯರು ಮತ್ತು ಖ್ಯಾತಿಗಾಗಿ ಅವರ ಬದುಕಿನ ಹೋರಾಟದ ಕಥೆಗಳನ್ನು ನಾವು ಆಗಾಗ್ಗೆ ಕೇಳುತ್ತೇವೆ. ಅವರ ಅನುಭವಗಳು ಅನೇಕರನ್ನು ಪ್ರೋತ್ಸಾಹಿಸುತ್ತವೆ ಮತ್ತು ಯಾವುದೂ ಅಸಾಧ್ಯವಲ್ಲ ಎಂದು ತೋರಿಸುತ್ತವೆ. ಇದು ಅಂಥ ಒಬ್ಬ ಹುಡುಗಿಯ ಕಥೆ. ಈಕೆ ನೆಲ ಗುಡಿಸಿ ಒರೆಸುತ್ತಿದ್ದವಳು, ಸೆಟ್‌ಗಳಲ್ಲಿ ಇತರರು ಮಾಡಿದ ವಾಂತಿ ಬಾಚಿ ತೆಗೆಯುತ್ತಿದ್ದವಳು. ಅಲ್ಲಿಂದ ಬೆಳೆದು ಬಾಲಿವುಡ್‌ನ ಬಲು ಬೇಡಿಕೆಯ ತಾರೆಗಳಲ್ಲಿ ಒಬ್ಬಳಾದಳು. ಅನೇಕ ಹಿಟ್ ಬಾಲಿವುಡ್ ಫಿಲಂಗಳಲ್ಲಿ ನಟಿಸಿದಳು, ಅಭಿನಯಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಗೆದ್ದಳು. ಹೀರೋಯಿನ್ ಪಾತ್ರ ಮಾಡುವ ವಯಸ್ಸಾದ ಬಳಿಕವೂ OTT ವೆಬ್ ಶೋಗಳು ಮತ್ತು ಚಲನಚಿತ್ರಗಳಲ್ಲಿ ಭರ್ಜರಿ ಸೆಕೆಂಡ್ ಇನ್ನಿಂಗ್ಸ್ ಆಗಮಿಸಿದಳು. ಆಕೆ ಚಲನಚಿತ್ರ ನಿರ್ಮಾಪಕರೊಬ್ಬರ ಮಗಳಾಗಿದ್ದುದು ನಿಜ. ಆದರೆ ಅವಳ ಬದುಕು ತನ್ನದೇ ಆದ ಹೋರಾಟಗಳಿಂದ ಕೂಡಿತ್ತು.
ಈಕೆ ಬೇರೆ ಯಾರೂ ಅಲ್ಲ, ರವೀನಾ ಟಂಡನ್. ಚಲನಚಿತ್ರ ನಿರ್ಮಾಪಕ ರವಿ ಟಂಡನ್ ಮತ್ತು ವೀಣಾ ಟಂಡನ್ ಅವರ ಮಗಳು. ರವೀನಾ ಟಂಡನ್ ಚಿತ್ರರಂಗದ ಹಿನ್ನೆಲೆಯಿಂದ ಬಂದಿದ್ದರೂ ವೃತ್ತಿಯಲ್ಲಿ ಹೆಸರುವಾಸಿಯಾಗುವ ಮೊದಲು ಕಷ್ಟಗಳ ಸಾಲನ್ನೇ ಹೊಂದಿದ್ದಳು. ಒಂದು ಸಂದರ್ಶನದಲ್ಲಿ ಅವಳು, ತಾನು ಸೆಟ್‌ನಲ್ಲಿ ವಾಂತಿ ಒರೆಸುವ ಮೂಲಕ ಮತ್ತು ನೆಲವನ್ನು ಗುಡಿಸುವ ಮೂಲಕ ಕೆರಿಯರ್ ಪ್ರಾರಂಭಿಸಿದೆ ಎಂದು ಬಹಿರಂಗಪಡಿಸಿದ್ದಳು. ಹೌದು!
"ನಾನು ಸ್ಟಾಲ್‌ಗಳ ನೆಲ ಒರೆಸಿದೆ, ಸ್ಟುಡಿಯೋ ಮಹಡಿಗಳಲ್ಲಿ ವಾಂತಿಯನ್ನು ಒರೆಸಿ ತೆಗೆದೆ. ಫ್ಲೋರ್‌ಗಳನ್ನು ಸ್ವಚ್ಛಗೊಳಿಸುವ ಮೂಲಕ ಕೆಲಸ ಪ್ರಾರಂಭಿಸಿದೆ. ನಾನು 10ನೇ ತರಗತಿಯಿಂದಲೇ ಸ್ಕೂಲ್‌ನಿಂದ ಹೊರಬಂದೆ. ಆ ಸಮಯದಲ್ಲೂ ತೆರೆಯ ಹಿಂದೆ ನೀನು ಏನು ಮಾಡುತ್ತಿದ್ದೀ ಎಂದು ಕೇಳುತ್ತಿದ್ದರು. ನೀನು ಸ್ಕ್ರೀನ್ ಮೇಲೆ ಇರಬೇಕು ಎಂದರು. ಇಲ್ಲ, ಇಲ್ಲ, ನಾನು ಎಂದಿಗೂ ನಟಿಯಾಗೋಲ್ಲ ಎನ್ನುತ್ತಿದ್ದೆ. ಹಾಗಾಗಿ ನಾನು ಡೀಫಾಲ್ಟ್ ಆಗಿ ಈ ಉದ್ಯಮದಲ್ಲಿ ಇದ್ದೆ. ಆದರೆ ನಾನು ನಟಿಯಾಗುತ್ತೇನೆ ಎಂದು ಯೋಚಿಸುತ್ತ ಬೆಳೆಯಲಿಲ್ಲ" ಎಂದು ರವೀನಾ ಟಂಡನ್ ಹೇಳಿದ್ದಾರೆ.
ರವೀನಾ ಟಂಡನ್, ಮೊದಲಿಗೆ ಸಲ್ಮಾನ್ ಖಾನ್‌ರ ಪತ್ತರ್ ಕೆ ಫೂಲ್‌ನಲ್ಲಿ ತೆರೆಗೆ ಪಾದಾರ್ಪಣೆ ಮಾಡಿದರು. ಅದು ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆಯಿತು. ರವೀನಾ ಟಂಡನ್‌ಗೆ ದೊಡ್ಡ ಬ್ರೇಕ್ ನೀಡಿತು, ಅವಳನ್ನು ಓಡುವ ಕುದುರೆಯಾಗಿ ಪರಿವರ್ತಿಸಿತು. ಆಕೆಯ ನಂತರದ ಚಲನಚಿತ್ರಗಳು ಆ ವರ್ಷ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಆಕೆಯ ತೆಲುಗು ಚೊಚ್ಚಲ ಚಿತ್ರ ಬಂಗಾರು ಬುಲ್ಲೋಡು ಕುಸಿಯಿತು.
ಟಂಡನ್ ನಟಿಸಿದ ಹತ್ತು ಚಲನಚಿತ್ರಗಳು 1994ರಲ್ಲಿ ಬಿಡುಗಡೆಯಾದವು. ಅವುಗಳಲ್ಲಿ ಹೆಚ್ಚಿನವು ವಾಣಿಜ್ಯಿಕವಾಗಿ ಯಶಸ್ವಿಯಾದವು. ಇವುಗಳಲ್ಲಿ ನಾಲ್ಕು ಚಿತ್ರಗಳು-ಮೊಹ್ರಾ, ದಿಲ್ವಾಲೆ, ಆತಿಶ್ ಮತ್ತು ಲಾಡ್ಲಾ- ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಸೇರಿವೆ. ಅದರ ನಂತರ ಆಕೆ ಹಿಂತಿರುಗಿ ನೋಡಲಿಲ್ಲ. ಅನಾರಿ ನಂ.1, ಘರ್ವಾಲಿ ಬಹರ್ವಾಲಿ, ಬಡೇ ಮಿಯಾನ್ ಚೋಟೆ ಮಿಯಾನ್, ಖಿಲಾಡಿಯೋನ್ ಕಾ ಕಿಲಾಡಿ, ಆಂಟಿ ನಂ.1 ಮತ್ತು ಜಿದ್ದಿ ಸೇರಿದಂತೆ ಹಲವಾರು ಹಿಟ್ ಮತ್ತು ಬ್ಲಾಕ್‌ಬಸ್ಟರ್‌ಗಳನ್ನು ನೀಡಿದಳು.
ಆಕೆ ಅನೇಕ ಹಿಟ್‌ಗಳೊಂದಿಗೆ 1990ರ ದಶಕದಲ್ಲಿ ಬಾಲಿವುಡ್‌ನಲ್ಲಿ ಜನಪ್ರಿಯತೆ ಪಡೆದಳು. ಆಗಿನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬಳಾದಳು. ಕಲ್ಪನಾ ಲಾಜ್ಮಿ ನಿರ್ದೇಶಿಸಿದ ದಮನ್: ಎ ವಿಕ್ಟಿಮ್ ಆಫ್ ಮ್ಯಾರಿಟಲ್ ವಯಲೆನ್ಸ್‌ನಲ್ಲಿನ ಪಾತ್ರಕ್ಕಾಗಿ ಅತ್ಯುತ್ತಮ ನಟಿ ಎಂಬ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಳು.ಇದರ ನಂತರವೂ ಹಲವಾರು ಹಿಟ್ ಚಲನಚಿತ್ರಗಳನ್ನು ನೀಡಿದಳು.
ಭಾರತದಲ್ಲಿ 20 ವರ್ಷದಿಂದ ಸಂಭಾವನೆ ಪಡೆಯದೇ ನಟಿಸುತ್ತಿರುವ ಸೂಪರ್‌ಸ್ಟಾರ್ ನಟ ಯಾರು?
90ರ ದಶಕದಲ್ಲಿ ತನ್ನ ಗ್ಲಾಮರಸ್ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದ ರವೀನಾ ಟಂಡನ್ ಈಗ ವಿಶಿಷ್ಟ ಪಾತ್ರಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಕೆಜಿಎಫ್: ಚಾಪ್ಟರ್ 2ರಲ್ಲಿ ಆಕೆ ಕಾಣಿಸಿಕೊಂಡ ಪಾತ್ರ ಮನೆಮಾತಾಗಿದೆ. ಆದರೆ ಅಲೌಕಿಕ ಥ್ರಿಲ್ಲರ್ನಲ್ಲಿ ಅವರು ಸಂಪೂರ್ಣವಾಗಿ ವಿಭಿನ್ನ ಅವತಾರವಾಗಿ ಕಾಣಿಸಿಕೊಳ್ಳುವ ಅವಕಾಶವನ್ನು ಹೊಂದಿರುತ್ತಾರೆ. ಈ ಚಲನಚಿತ್ರವು 2025 ರಲ್ಲಿ ಮಹಾಶಿವರಾತ್ರಿಯ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಅವರು ನಟ ಅಕ್ಷಯ್ ಕುಮಾರ್ ನೇತೃತ್ವದ ವೆಲ್‌ಕಮ್ ಫ್ರಾಂಚೈಸ್, ವೆಲ್‌ಕಮ್ ಟು ದಿ ಜಂಗಲ್‌ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಸುನೀಲ್ ಶೆಟ್ಟಿ, ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡೀಸ್, ಅರ್ಷದ್ ವಾರ್ಸಿ, ತುಷಾರ್ ಕಪೂರ್, ಅಫ್ತಾಬ್ ಶಿವದಾಸನಿ ಮತ್ತು ಇನ್ನೂ 34 ನಟರು ನಟಿಸಿದ್ದಾರೆ.
ಅವರ ಟಚ್ ನನಗೆ..! ಬಚ್ಚನ್ ಜೊತೆಗಿನ ರೊಮ್ಯಾಂಟಿಕ್ ಸೀನ್‌ಗಾಗಿ ಬ್ಲೌಸ್ ಟೈಟ್ ಮಾಡಿಸಿಕೊಂಡಿದ್ರು ಡ್ರೀಮ್ ಗರ್ಲ್!
