Asianet Suvarna News Asianet Suvarna News

'ಸೂರರೈ ಪೊಟ್ರು' ನಟಿ ಅಪರ್ಣಾ ಜೊತೆ ಕಾಲೇಜು ವಿದ್ಯಾರ್ಥಿಯ ಕೆಟ್ಟ ವರ್ತನೆ; ವಿಡಿಯೋ ವೈರಲ್

ಸೂರರೈ ಪೊಟ್ರು ಖ್ಯಾತಿಯ ನಟಿ ಅಪರ್ಣಾ ಬಾಲಮುರಳಿ ಜೊತೆ ಕಾಲೇಜು ವಿದ್ಯಾರ್ಥಿಯೊಬ್ಬ ಕೆಟ್ಟದಾನಿ ನಡೆದುಕೊಂಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Student misbehaves with Soorarai Pottru actress Aparna Balamurali at Kerala college video viral sgk
Author
First Published Jan 19, 2023, 5:42 PM IST

ತಮಿಳು ಸ್ಟಾರ್ ಸೂರ್ಯ ನಟನೆಯ ಸೂರರೈ ಪೊಟ್ರು ಸಿನಿಮಾ ಮೂಲಕ ಸ್ಟಾರ್ ಆಗಿ ಹೊರಹೊಮ್ಮಿದ ನಟಿ ಅಪರ್ಣಾ ಬಾಲಮುರಳಿ ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡುತ್ತಿರುವ ನಟಿ ಅಪರ್ಣಾ ಇತ್ತೀಚೆಗೆ ಕೇರಳ ಕಾಲೇಜಿಗೆ ಭೇಟಿ ನೀಡಿದ್ದರು. ಕಾಲೇಜು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬರು ಅಪರ್ಣಾ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ವೇದಿಕೆ ಮೇಲೆ ಕುಳಿತಿದ್ದ ಅರ್ಪಣಾ ಬಳಿ ವಿದ್ಯಾರ್ಥಿಯೊಬ್ಬರು ಓಡಿ ಬಂದ. ಬಂದವನೇ ಅಪರ್ಣಾ ಕೈ ಹಿಡಿದು ಮಾತನಾಡಿದ, ಬಳಿಕ ಸೆಲ್ಫಿ ಕೇಳಿದ. ಅಪರ್ಣಾ ಕೂಡ ಸೆಲ್ಫಿ ಕೊಡಲು ಎದ್ದು ನಿಂತರು. ಆಗ ವಿದ್ಯಾರ್ಥಿ ಅಪರ್ಣಾ ಹೆಗಲ ಮೇಲೆ ಮೈ ಕೈ ಹಾಕಿದ. ಅಪರ್ಣಾ ಆತನಿಂದ ತಪ್ಪಿಸಿಕೊಂಡು ದೂರ ಹೋದರು. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಘಟನೆಯಿಂದ ಅಪರ್ಣಾ ತುಂಬಾ ಹಿಂಸೆ ಅನುಭವಿಸಿದ್ದಾರೆ. 

ಈ ಘಟನೆ ಬಳಿಕ ಕೆಲವು ವಿದ್ಯಾರ್ಥಿಗಳು ಬಂದು ಕ್ಷಮೆ ಕೇಳಿದರು. ಬಳಿಕ ಅನುಚಿತವಾಗಿ ವರ್ತಿಸಿದ ವಿದ್ಯಾರ್ಥಿ ಕೂಡ ಬಂದು ಅಪರ್ಣಾ ಬೇಳಿ ಕ್ಷಮೆ ಕೇಳಿದರ. ತಾನು ದೊಡ್ಡ ಅಭಿಮಾನಿ ಮತ್ತು  ಅನುಚಿತವಾಗಿ ವರ್ತಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಹೇಳಿದ. 

ನಟಿ ಅಪರ್ಣ ತಮ್ಮ ಮುಂದಿನ ಸಿನಿಮಾ ತಂಕಂ ಚಿತ್ರದ ಪ್ರಚಾರಕ್ಕಾಗಿ ಕೇರಳದ ಕಾಲೇಜಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಅಪರ್ಣಾ ಜೊತೆ ಸಹನಟ ವಿನೀತ್ ಶ್ರೀನಿವಾಸ್ ಮತ್ತು ಚಿತ್ರ ತಂಡವಿತ್ತು. ಯಾವುದೇ ಮಾತನಾಡದೇ ಸೈಲೆಂಟ್ ಆಗಿದ್ದ ತಂಡದ ವಿರುದ್ಧ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಆಕ್ರೋಶ ಹೊರಹಾಕಿದ್ದಾರೆ.

ರಾಜ್ ಬಿ ಶೆಟ್ಟಿಗೆ ಜೋಡಿಯಾದ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಅಪರ್ಣಾ; ಯಾವ ಸಿನಿಮಾ, ಏನ್ ಕಥೆ? ಇಲ್ಲಿದೆ ವಿವರ

ಅಪರ್ಣಾ ಬಗ್ಗೆ 

ನಟಿ ಅಪರ್ಣಾ ಬಾಲಮುರಳಿ ಮಲಯಾಳಂ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. 2015ರಲ್ಲಿ ಸಿನಿಮಾರಂಗಕ್ಕೆ ಬಂದ ನಟಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಲು ಸಾಲು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ 2017ರಲ್ಲಿ ತಮಿಳು ಚಿತ್ರರಂಗ ಪ್ರವೇಶಿಸಿದರು. 2020ರಲ್ಲಿ ಬಂದ ಸೂರರೈ ಪೊಟ್ರು ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿತು. ಈ ಸಿನಿಮಾ ಬಳಿಕ ಸ್ಟಾರ್ ಆಗಿ ಹೊರಹೊಮ್ಮಿದರು. ಆ ಸಿನಿಮಾದಲ್ಲಿ ಅಪರ್ಣಾ ಪಾತ್ರಕ್ಕೆ ದೊಡ್ಡ ಮೆಚ್ಚುಗೆ ವ್ಯಕ್ತವಾಗಿತ್ತು. ಸೂರ್ಯ ಪತ್ನಿಯಾಗಿ ಅಪರ್ಣಾ ಕಾಣಿಸಿಕೊಂಡಿದ್ದರು. ನೈಜ ಘಟನೆ ಆಧಾರಿತ ಸಿನಿಮಾ ಅದಾಗಿತ್ತು. ಸೂರರೈ ಪೊಟ್ರು ಬಳಿಕ ಅಪರ್ಣಾ ಬೇಡಿಕೆ ಹೆಚ್ಚಾಯಿತು. 

ದಪ್ಪಗಿದ್ದೀಯಾ ತಾಯಿ ಪಾತ್ರಕ್ಕೆ ಲಾಯಕ್ಕು: ಬಾಡಿ ಶೇಮಿಂಗ್‌ ಬಗ್ಗೆ Aparna Balamurali ಬೇಸರ

ಸದ್ಯ ಅಪರ್ಣಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಧೂಮಮ್ ಮೂಲಕ ಕನ್ನಡ ಸಿನಿಮಾರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ನಟಿ ಅಪರ್ಣಾ ನಾಯಕಿಯಾಗಿ ನಟಿಸಿದ್ದಾರೆ. ಪದ್ಮಿನಿ, 2018 ಸೇರಿದಂತೆ ಅನೇಕ ಸಿನಿಮಾಗಳು ಅಪರ್ಣಾ ಕೈಯಲಿದೆ.  

Follow Us:
Download App:
  • android
  • ios