ಮುಂಬೈ( ನ. 19) ಸುಶಾಂತ್ ಸಿಂಗ್ ಸಾವಿನ ನಂತರ ಜೋರಾಗಿ ಮಾತನಾಡಿದ್ದ ನಟಿ ಕಂಗನಾ ರಣಾವತ್ ನಂತರ ಬಾಲಿವುಡ್ ಡ್ರಗ್ಸ್ ವಿಚಾರದಲ್ಲಿಯೂ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದರು. ಇದೀಗ ಐಪಿಎಸ್ ಅಧಿಕಾರಿಯೊಬ್ಬರ ಸೋಶಿಯಲ್ ಮೀಡಿಯಾ ಪೋಸ್ಟ್ ಗೂ ಪ್ರತಿಕ್ರಿಯೆ ನೀಡಿದ್ದಾರೆ.

ಮಹಾರಾಷ್ಟ್ರ ಸರ್ಕಾರವನ್ನೇ ಎದುರು ಹಾಕಿಕೊಂಡಿದ್ದ  ಕಂಗನಾಗೆ ಸೋಶಿಯಲ್ ಮೀಡಿಯಾದಲ್ಲಿ, ಮಾಧ್ಯಮಗಳಲ್ಲಿ ಅಬ್ಬರದ ಪ್ರಚಾರ ಸಿಕ್ಕಿತ್ತು.  ಇದೆ ವರಸೆ ಮುಂದುವರಿಸಿರುವ ಕಂಗನಾ ಬೇಕು-ಬೇಡವಾದುದ್ದಕ್ಕೆಲ್ಲ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಹಸಿರು ಪಟಾಕಿಯೂ ಸೇಫಲ್ಲ

ಪಟಾಕಿ ವಿಚಾರ ಮಾತನಾಡಿದ್ದ ಐಪಿಎಸ್ ಅಧಿಕಾರಿಯ ಬಗ್ಗೆ  ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಂಗನಾ ಮತ್ತೊಮ್ಮೆ ಪ್ರಚಾರ ಪಡೆದುಕೊಳ್ಳುವ ಯತ್ನ ಮಾಡಿದ್ದಾರೆಯೇ?  ಮುಂಬೈನಲ್ಲಿ ಕಂಗನಾ ಅವರ ಕಚೇರಿ ಧ್ವಂಸ ಮಾಡಿದ್ದಾಗ ಸಿಕ್ಕ ಬೆಂಬಲವನ್ನೇ ಇಟ್ಟುಕೊಂಡು ತಮಗೆ ಬೇಕಾದ ರೀತಿ ವರ್ತನೆ ಮಾಡುತ್ತಿದ್ದಾರೆಯೇ? ಹೀಗೆ ಹಲವಾರು ಪ್ರಶ್ನೆಗಳು ಸಹಜವಾಗಿಯೇ ಎದ್ದಿವೆ.

ದೀಪಾವಳಿಗೆ ಕಂಗನಾ ಮನೆಗೆ ಬಂದ ವಿಶೇಷ ಅತಿಥಿ

ಕಂಗನಾ ರಣಾವತ್ ಬಾಲಿವುಡ್ ಡ್ರಗ್ಸ್ ವಿಚಾರ, ಬಾಲಿವುಡ್ ಮಾಫಿಯಾದಬಗ್ಗೆ ದನಿ ಎತ್ತಿದಾಗ ಜನರು, ಅಭಿಮಾನಿಗಳು ಬೆಂಬಲಿಸಿದ್ದರು. ಇದನ್ನೇ ಕಂಗನಾ ಬಂಡವಾಳ ಮಾಡಿಕೊಂಡಿದ್ದಾರೆಯೇ? ಉತ್ತರ ಮಾತ್ರ ಗೊತ್ತಿಲ್ಲ