ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ನಟ ಸೈಫ್ ಅಲಿ ಖಾನ್ ಪುತ್ರ ಯಾವುದೇ ಹಬ್ಬ ಬಂದ್ರೂ ಸಖತ್ ಆಗಿ ರೆಡಿಯಾಗ್ತಾನೆ. ಗಮ್ಮತ್ತಾಗಿ ಸಂಭ್ರಮಿಸ್ತಾನೆ. ಮಹಾಶಿವರಾತ್ರಿಗೆ ಬಾಲ ಶಿವನಾಗಿ ಕಾಣಿಸ್ಕೊಂಡಿದ್ದ ತೈಮೂರ್ ಹೋಳಿ ದಿನ ಹೇಗೆ ರೆಡಿಯಾಗಿದ್ದಾನೆ ನೋಡಿ

ಮಾಧ್ಯಮ, ಕ್ಯಾಮೆರಾ ಅಂದ್ರೆ ಉರಿ ಉರಿಯಾಗೋ ತೈಮೂರ್ ಕ್ಯಾಮೆರಾಗೆ ಪೋಸ್ ಕೊಡೋವಾಗ್ಲೂ ನಗೋದು ಸ್ವಲ್ಪ ಕಮ್ಮೀನೇ.. ಗುರ್ ಅಂತಾನೆ ಹೋಲಿ ಪೋಸ್ ಕೊಟ್ಟಿರೋದು ಈಗ ವೈರಲ್ ಆಗಿದೆ.

ಮಹಾ ಶಿವರಾತ್ರಿ ಆಚರಿಸಿದ ತೈಮೂರ್ ಅಲಿ ಖಾನ್: ಪುಟ್ಟ ಶಿವನ ಲುಕ್ ನೋಡಿ

ತಂದೆ ಸೈಫ್‌ನಂತೆಯೇ ಜುಬ್ಬಾ ಧರಿಸಿದ ತೈಮೂರ್ ಮೈ ಎಲ್ಲ ಒದ್ದೆಯಾಗಿದೆ. ಆಗಲೇ ಸಿಕ್ಕಾಪಟ್ಟೆ ಹೋಳಿ ಆಡಿದ್ದಾನೆ ಬೇಬೂ ಮಗ. ಮುಖದ ಮೇಲೆಲ್ಲಾ ರಂಗು ಚೆಲ್ಕೊಂಡು ವೈಟ್ ಜುಬ್ಬಾ ನೆನೆಸ್ಕೊಂಡು ಗುರಾಯಿಸುವಂತೆ ದಿಟ್ಟಿಸಿದ್ದಾನೆ.

ಎರಡೂ ಕೈನಲ್ಲಿ ಯೋ ಯೋ ಅಂತ ಸಿಗ್ನಲ್ ಕೊಟ್ಟು ಫುಲ್ ಜೋಶ್‌ನಲ್ಲಿದ್ದೀನಿ ಎಂದಿದ್ದಾನೆ ತೈಮೂರ್. ಅಂತೂ ಪುಟ್ಟ ತಮ್ಮ ಬಂದಿರೋ ಖುಷಿಯಲ್ಲೂ ಗಮ್ಮತ್ತಾಗಿ ಹೋಳಿ ಆಡಿದ್ದಾನೆ ಕರೀನಾ ಮಗ.