ಕನ್ನಡ ನಟ ಪುನೀತ್ ರಾಜ್‌ಕುಮಾರ್ ಅಗಲಿ ಮೂರು ವರ್ಷಗಳು ಕಳೆದಿವೆ. ಜಿ. ನಾಗರಾಜು ತೊಂಬರಿಯವರು ಅರ್ಜುನ ಜೋಗಿ ಪದದ ಮೂಲಕ ಪುನೀತ್‌ರಿಗೆ ಗೌರವ ಸಲ್ಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪುನೀತ್ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚುತ್ತಿದೆ. ನೇತ್ರದಾನದ ಮೂಲಕವೂ ಸಮಾಜಕ್ಕೆ ಕೊಡುಗೆ ನೀಡಿದ ಪುನೀತ್ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.

ಕರ್ನಾಟಕ ರತ್ನ, ಕನ್ನಡದ ಕಂದ ಅಪ್ಪು ಖ್ಯಾತಿಯ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ನಮ್ಮನ್ನಗಲಿ ಮೂರು ವರ್ಷಗಳೇ (29 October 2021 ) ಸಂದಿವೆ. ಬಾಲನಟನೆ ಸೇರಿದಂತೆ ಒಟ್ಟೂ 58 ಸಿನಿಮಾಗಳ ಮೂಲಕ ಕನ್ನಡದ ಸ್ಟಾರ್ ನಟ ಎನಿಸಿಕೊಂಡಿದ್ದ ಪುನೀತ್ ನಾಯಕರಾಗಿ 32 ಸಿನಿಮಾಗಳಲ್ಲಿ ಅಭಿನಯಿಸಿ ಜನಮನ ಗೆದ್ದವರು. ಇಂಥ ಪುನೀತ್ ರಾಜ್‌ಕುಮಾರ್ ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ ಅವರ ಮೂರನೆಯ ಮಗ ಎಂಬುದು ಬಹುತೇಕರಿಗೆ ಗೊತ್ತು. 

ಇದೀಗ ನಟ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಜಿ. ನಾಗರಾಜು ತೊಂಬರಿ ಎಂಬ ಕಲಾವಿದರ ಕಂಠದಲ್ಲಿ ಅರ್ಜುನ ಜೋಗಿ ಪದ ಮೂಡಿಬಂದಿದೆ. ಅದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗ್ತಿದೆ. ಪುನೀತ್ ರಾಜ್‌ಕುಮಾರ್ ಅವರು ಬದುಕಿದ್ದಾಗ ಹಲವರ ಕಷ್ಟಕ್ಕೆ ಬೆಂಬಲವಾಗಿ ನಿಂತಿದ್ದರು. ಈ ಕಾರಣಕ್ಕೆ ಅವರು ನಿಧನರಾದ ಬಳಿಕ ಜನರು ಅಭಿಮಾನದ ಮೂಲಕ ತಮ್ಮ ಕೃತಜ್ಞತೆ ಅರ್ಪಿಸುತ್ತಿದ್ದಾರೆ. 

ಅಣ್ಣಾವ್ರು ಮನೆಲ್ಲಿ 'ತತ್ತಯ್ಯಾ' ಅಂತಿದ್ರು..; ಅದ್ನ ಅಪ್ಪು ಬಾಯಲ್ಲಿ ಕೇಳಿ, ಎಂಥಾ ಸೊಗಸು!

ಅದೇ ರೀತಿ, ಈ ಜಿ. ನಾಗರಾಜು ತೊಂಬರಿ ಎಂಬ ಕಲಾವಿದರು ತಮ್ಮದೇ ಆ ದ ರೀತಿಯಲ್ಲಿ 'ಅರ್ಜುನ ಜೋಗಿ ಪದ'ದ ಮೂಲಕ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ನಮನ ಸಲ್ಲಿಸಿದ್ದಾರೆ. 'ಚಿತ್ತಾರ ಮೀಡಿಯಾ' ಈ ವಿಡಿಯೋವನ್ನು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದೆ. ಅದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಮೂಲಕ ಪುನೀತ್ ಅಭಿಮಾನಿ ಬಳಗ ದಿನದಿನಕ್ಕೂ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದೆ ಎಂಬುದನ್ನು ಮನಗಾಣಬಹುದು, 

ಒಟ್ಟಿನಲ್ಲಿ, ಕೇವಲ 46ನೆಯ ವಯಸ್ಸಿಗೇ ದುರಂತ ಸಾವು ಕಂಡ ವರನಟ ಡಾ ರಾಜ್‌ಕುಮಾರ್ ಮಗ ಪುನೀತ್, ಹೀಗೆ ನಾನಾ ರೂಪಗಳಲ್ಲಿ ತಮ್ಮ ಅಭಿಮಾನಿಗಳ ಮನದಲ್ಲಿ ಇನ್ನೂ ನೆಲೆಸಿದ್ದಾರೆ. ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಸತ್ತ ಬಳಿಕವೂ ನಾಲ್ಕು ಜನರ ಬಾಳಿಗೆ ಕೂಡ ಬೆಳಕಾಗಿದ್ದಾರೆ ನಟ ಪುನೀತ್ ರಾಜ್‌ಕುಮಾರ್. ನೇತ್ರದಾನದ ಟ್ರೆಂಡ್ ಕರ್ನಾಟಕದಲ್ಲಿ ಹುಟ್ಟುಹಾಕಿರುವ ಕೀರ್ತಿ ಡಾ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರಿಗೆ ಸಲ್ಲುತ್ತದೆ. ಅಂದಹಾಗೆ, ವಿಡಿಯೋದಲ್ಲಿ ಪುನೀತ್ ಬಗೆಗಿನ ಜೋಗಿ ಪದ ಕೇಳಿ ನೀವೂ 'ಪುನೀತ'ರಾಗಿ!

ಮತ್ತೆ ಒಂದಾದ ಗಣೇಶ್-ಪೂಜಾಗಾಂಧಿ: 'ಮುಂಗಾರು ಮಳೆಯಲ್ಲಿ' ಕಣ್ಣೀರು ಹಾಕಿಲ್ಲ ಯಾಕೆ?

View post on Instagram