ಅಮೆರಿಕಾದಲ್ಲೇ ಮಗುವಿಗೆ ಜನ್ಮ ನೀಡ್ತಾರಾ ಉಪಾಸನಾ? ಡೆಲಿವರಿ ಮಾಡಿಸುವ ವೈದ್ಯೆಯನ್ನು ಪರಿಚಯಿಸಿದ ರಾಮ್ ಚರಣ್
ರಾಮ್ ಚರಣ್ ಸದ್ಯ ಅಮೆರಿಕಾದಲ್ಲಿದ್ದು ಪತ್ನಿ ಉಪಾಸನಾಗೆ ಡೆಲಿವರಿ ಮಾಡಿಸುವ ವೈದ್ಯೆಯನ್ನು ಪರಿಚಯಿಸಿದ್ದಾರೆ.
ತೆಲುಗಿನ ಖ್ಯಾತ ನಟ ರಾಮ್ ಚರಣ್ ಸದ್ಯ ಅಮೆರಿಕಾದಲ್ಲಿದ್ದಾರೆ. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಲು ರಾಮ್ ಚರಣ್ ಅಮೆರಿಕಾಗೆ ತೆರಳಿದ್ದಾರೆ. ಯುಸ್ ನಲ್ಲಿ ಆರ್ ಆರ್ ಆರ್ ಸ್ಟಾರ್ ಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಅಮೆರಿಕಾಗೆ ಹೋಗುತ್ತಿದ್ದಂತೆ ಅವರು ಅಮೆರಿಕಾದ ಜನಪ್ರಿಯ ಕಾರ್ಯಕ್ರಮ ‘ಗುಡ್ ಮಾರ್ನಿಂಗ್ ಅಮೆರಿಕಾ’ ಶೋನಲ್ಲಿ ಭಾಗಿಯಾಗಿದ್ದಾರೆ. ಈ ಶೋನಲ್ಲಿ ರಾಮ್ ಚರಣ್ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತನ್ನ ಸಿನಿಮಾ ಜೀವನ ಜೊತೆಗೆ ಹಲವು ವೈಯಕ್ತಿಕ ಸಂಗತಿಗಳನ್ನು ಅವರು ಹಂಚಿಕೊಂಡಿದ್ದಾರೆ. ಆ ಸಮಯದಲ್ಲಿ ಗರ್ಭಿಣಿ ಪತ್ನಿಯ ಬಗ್ಗೆಯೂ ಮಾತನಾಡಿದರು.
ಚಾಟ್ ಶೋನಲ್ಲಿ ತೆಲುಗು ಸ್ಟಾರ್ ರಾಮ್ ಚರಣ್ GMA ಮತ್ತು ABC ಯ ಮುಖ್ಯ ವೈದ್ಯಕೀಯ ವರದಿಗಾರ್ತಿ ಮತ್ತು ಸ್ತ್ರೀರೋಗತಜ್ಞರಲ್ಲಿ ಒಬ್ಬರಾದ ಡಾ. ಜಾನಿಫರ್ ಆಷ್ಟನ್ ಅವರನ್ನು ಭೇಟಿಮಾಡುವುದಾಗಿ ಬಹಿರಂಗಪಡಿಸಿದರು. ಈ ಬಗ್ಗೆ ಶೋನಲ್ಲೇ ಮಾತನಾಡಿದ ರಾಮ್ ಚರಣ್, 'ನಾನು ನಿಮ್ಮನ್ನು ಭೇಟಿಯಾಗುತ್ತಿರುವುದು ತುಂಬಾ ಸಂತೋಷವಾಗಿ. ನಾನು ನಿಮ್ಮ ಮೊಬೈಲ್ ನಂಬರ್ ಪಡೆಯುತ್ತಿದ್ದೀನಿ. ನನ್ನ ಹೆಂಡತಿ ಸ್ವಲ್ಪ ಸಮಯದವರೆಗೆ US ನಲ್ಲಿರುತ್ತಾಳೆ' ಎಂದು ಹೇಳಿದರು.
ರಾಮ್ ಚರಣ್ ಮಾತಿಗೆ ಪ್ರತಿಕ್ರಿಯೆ ನೀಡಿದ ಡಾ.ಜಾನಿಫರ್ ಆಷ್ಟನ್ ನಿಮ್ಮ ಮಗುವನ್ನು ಡೆಲಿವರಿ ಮಾಡಿಸುವುದು ನನಗೂ ಖುಷಿ ಎಂದು ಹೇಳಿದರು. ಈ ಮಾತುಕತೆ ಬಳಿಕ ರಾಮ್ ಚರಣ್ ಪತ್ನಿ ಉಪಾಸನಾ ಮೊದಲ ಮಗುವನ್ನು ಅಮೆರಿಕಾದಲ್ಲೇ ಸ್ವಾಗತಿಸುತ್ತಾರಾ ಎನ್ನುವ ಪ್ರಶ್ನೆ ಎದುರಾಗಿದೆ. ರಾಮ್ ಚರಣ್ ಮತ್ತು ವೈದ್ಯಯ ಮಾತುಗಳು ಕೇಳಿದ್ರೆ ಇಬ್ಬರೂ ಮೊದಲ ಮಗುವನ್ನು ಯುಎಸ್ ನಲ್ಲೇ ಪಡೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
Oscar 2023; ಆಸ್ಕರ್‌ಗಾಗಿ ಬರಿಗಾಲಿನಲ್ಲೇ US ಹಾರಿದ ರಾಮ್ ಚರಣ್, ಜೂ.ಎನ್ ಟಿ ಆರ್ ಹೋಗೋದು ಯಾವಾಗ?
ಕಾರ್ಯಕ್ರಮದಲ್ಲಿ ರಾಮ್ ಚರಣ್‌ಗೆ ತಂದೆ ಆಗುತ್ತಿರುವ ಭಯ ಎಷ್ಟಿದೆ ಎನ್ನುವ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ರಾಮ್ ಚರಣ್ ಈ ವರ್ಷದಲ್ಲಿ ನಾನು ಹೆಚ್ಚು ಪತ್ನಿ ಜೊತೆ ಸಮಯ ಕಳೆದಿದ್ದೀನಿ. ಆದರೀಗ ನಾನು ಪ್ಯಾಕಿಂಗ್ ಮತ್ತು ಅನ್ ಪ್ಯಾಕಿಂಗ್ ಮಾಡೋದೆ ಆಗಿದೆ ಎಂದು ಹೇಳಿದರು. ರಾಮ್ ಚರಣ್ ಸದ್ಯ ಆರ್ ಆರ್ ಆರ್ ಸಿನಿಮಾದ ಪ್ರಮೋಷನ್ ಗಾಗಿ ಹೆಚ್ಚು ಪ್ರವಾಸ ಮಾಡುತ್ತಿದ್ದಾರೆ. ಹಾಗಾಗಿ ಪತ್ನಿ ಜೊತೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಗುಡ್ ಮಾರ್ನಿಂಗ್ ಅಮೆರಿಕದಲ್ಲಿ RRR: ಹುಚ್ಚೆದ್ದು ಸಂಭ್ರಮಿಸ್ತಿದ್ದಾರೆ ಫ್ಯಾನ್ಸ್!
ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್ ಚಿತ್ರದಲ್ಲಿ ಜೂನಿಯರ್ ಮತ್ತು ರಾಮ್ ಚರಣ್ ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ನಾಟು ನಾಟು..' ಹಾಡು ಆಸ್ಕರ್ನ ಅಂತಿಮ ರೇಸ್ ನಲ್ಲಿದೆ. 95ನೇ ಅಕಾಡೆಮಿ ಅವಾರ್ಡ್ ಕಾರ್ಯಕ್ರಮ ಮಾರ್ಚ್ 12ರಂದು ಲಾಸ್ ಏಂಜಲೀಸ್ನಲ್ಲಿ ನಡೆಯಲಿದೆ. ಗೋಲ್ಡನ್ ಗ್ಲೋಬ್ಸ್ ಗೆದ್ದು ಬೀಗಿರುವ ಆರ್ ಆರ್ ಆರ್ ಆಸ್ಕರ್ ಗೆಲ್ಲುತ್ತಾರಾ ಎಂದು ಭಾರತೀಯರು ಕಾಯುತ್ತಿದ್ದಾರೆ. ಈಗಾಗಲೇ ರಾಮ್ ಚರಣ್ ಅಮೆರಿಕಾ ತಲುಪಿದ್ದು ರಾಜಮೌಳಿ, ಜೂ.ಎನ್ ಟಿ ಆರ್ ಸೇರಿದಂತೆ ಉಳಿದವರು ಸದ್ಯದಲ್ಲೇ ಯುಎಸ್ ಹೊರಡಲಿದ್ದಾರೆ.