ದೆಹಲಿ ಏರ್ಪೋರ್ಟ್ ವ್ಯವಸ್ಥೆ ಬಗ್ಗೆ ಬಾಹುಬಲಿ ನಿರ್ದೇಶಕನ ಮಾತು ಭಾರತಕ್ಕೆ ಬರುವಾಗ ಸಿಗೋ ಮೊದಲ ಇಂಪ್ರೆಷನ್ ಚೆನ್ನಾಗಿಲ್ಲ ಎಂದ ರಾಜಮೌಳಿ

ಬಾಹುಬಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ಸೌಕರ್ಯಗಳ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಟೇಬಲ್ ಒದಗಿಸದ ಕಾರಣ ಪ್ರಯಾಣಿಕರು ಆರ್‌ಟಿ-ಪಿಸಿಆರ್ ಪರೀಕ್ಷಾ ಫಾರ್ಮ್‌ಗಳನ್ನು ಭರ್ತಿ ಮಾಡಲು ನೆಲದ ಮೇಲೆ ಕುಳಿತುಕೊಳ್ಳಬೇಕಾಯಿತು ಎಂದು ಚಲನಚಿತ್ರ ನಿರ್ದೇಶಕ ಹೇಳಿದ್ದಾರೆ.

ೆಕ್ಸಿಟ್‌ನಲ್ಲಿ ಬೀದಿ ನಾಯಿಗಳನ್ನು ನೋಡಿದ್ದೇನೆ ಎಂದು ಅವರು ಬರೆದಿದ್ದಾರೆ, ಇದು ವಿದೇಶಿಯರಿಗೆ ಭಾರತದ ಬಗ್ಗೆ ಒಳ್ಳೆ ಅಭಿಪ್ರಾಯ ಮೂಡಿಸುವುದಿಲ್ಲಎಂದು ಟ್ವೀಟ್ ಮಾಡಿದ್ದಾರೆ. ಸಮಸ್ಯೆಗಳನ್ನು ಪರಿಶೀಲಿಸುವಂತೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ರಾಜಮೌಳಿ ನಿರ್ದೇಶನದಲ್ಲಿ ಕೊರೋನಾ ಕರ್ತವ್ಯದಲ್ಲಿರೋ ಪೊಲೀಸರ ಕುರಿತ ಶಾರ್ಟ್ ಫಿಲ್ಮ್...

ರಾಜಮೌಳಿ ಟ್ವೀಟ್ ಮಾಡಿದ್ದಾರೆ. “ದೆಹಲಿ ಏರ್ಪೋರ್ಟ್, ಲುಫ್ಥಾನಾಸ ವಿಮಾನದಲ್ಲಿ ಬೆಳಗ್ಗೆ 1 ಗಂಟೆಗೆ ಬಂದೆ. ಆರ್‌ಟಿ ಪಿಸಿಆರ್ ಪರೀಕ್ಷೆಗೆ ಭರ್ತಿ ಮಾಡಲು ಫಾರ್ಮ್‌ಗಳನ್ನು ನೀಡಲಾಯಿತು. ಎಲ್ಲಾ ಪ್ರಯಾಣಿಕರು ನೆಲದಲ್ಲಿ ಕುಳಿತುಕೊಂಡರು. ಫಾರ್ಮ್ಗಳನ್ನು ಭರ್ತಿ ಮಾಡಲು ಗೋಡೆಗಳಲ್ಲಿ ಕಾಗದವಿಟ್ಟು ಬರೆದರು. ಇದು ಸುಂದರ ದೃಶ್ಯವಲ್ಲ. ಟೇಬಲ್ ಒದಗಿಸೋದು ಒಂದು ಸಿಂಪಲ್ ಸೇವೆಯಾಗಿದೆ ಎಂದಿದ್ದಾರೆ.

Scroll to load tweet…

ನಿರ್ಗಮನ ಗೇಟ್‌ನ ಹೊರಗೆ ಬೀದಿ ನಾಯಿಗಳನ್ನು ಕಂಡು ಆಶ್ಚರ್ಯವಾಯಿತು. ವಿದೇಶಿಯರಿಗೆ ಭಾರತದ ಬಗ್ಗೆ ಮೊದಲ ಇಂಪ್ರೆಷನ್ ಚೆನ್ನಾಗಿಲ್ಲ. ದಯವಿಟ್ಟು ಅದನ್ನು ಗಮನಿಸಿ. ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.