ಪ್ರಭಾಸ್ ಸಿನಿಮಾಗೆ ‘ಕಲ್ಕಿ 2898-ಎಡಿ’ ಟೈಟಲ್ ಫಿಕ್ಸ್: ಟೀಸರ್ ನೋಡಿ ಪ್ರಶ್ನೆ ಕೇಳಿದ ರಾಜಮೌಳಿ
ಪ್ರಭಾಸ್ ನಟನೆಯ ಪ್ರಜೆಕ್ಟ್ ಕೆ ಸಿನಿಮಾಗೆ ‘ಕಲ್ಕಿ 2898-ಎಡಿ’ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಪ್ರಭಾಸ್ ಟೀಸರ್ ನೋಡಿದ ಖ್ಯಾತ ನಿರ್ದೇಶಕ ರಾಜಮೌಳಿ ಪ್ರಶ್ನೆ ಕೇಳಿದ್ದಾರೆ.
ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷೆಯ 'ಪ್ರಾಜೆಕ್ಟ್ ಕೆ' ಸಿನಿಮಾದ ಟೈಟಲ್ ಕೊನೆಗೂ ರಿವೀಲ್ ಆಗಿದೆ. ಪ್ರಾಜೆಕ್ಟ್ ಕೆ ಎಂದರೇನು ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು. ಇದೀಗ ಕೊನೆಗೂ ಬಹಿರಂಗವಾಗಿದೆ. ಪ್ರಭಾಸ್ ಸಿನಿಮಾಗೆ 'ಕಲ್ಕಿ 2898 AD' ಎಂದು ಟೈಟಲ್ ಇಡಲಾಗಿದೆ. ಟೈಟಲ್ ಜೊತೆಗೆ ಟೀಸರ್ ಕೂಡ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಮೆರಿಕಾದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಕಲ್ಕಿ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ.
ಕಲ್ಕಿ ಸಿನಿಮಾಗೆ ತೆಲುಗು ಖ್ಯಾತ ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಸೇರಿದಂತೆ ದೊಡ್ಡ ಸ್ಟಾರ್ ಕಾಸ್ಟ್ ಇದೆ. ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ಈ ಸಿನಿಮಾದಲ್ಲಿದ್ದಾರೆ. ಸದ್ಯ ರಿಲೀಸ್ ಆಗಿರುವ ಟೀಸರ್ ಅಭಿಮಾನಿಗಳ ಹೃದಯ ಗೆದ್ದಿದ್ದು ಭಾರಿ ನಿರೀಕ್ಷೆ ಮೂಡಿಸಿದೆ. ಪ್ರಭಾಸ್ ಕಲ್ಕಿ ಟೀಸರ್‌ಗೆ ಖ್ಯಾತ ನಿರ್ದೇಶಕ ರಾಜಮೌಳಿ ಕೂಡ ಫಿದಾ ಆಗಿದ್ದಾರೆ. ಟೀಸರ್ ಶೇರ್ ಮಾಡಿ ಹಾಡಿಹೊಗಳಿದ್ದಾರೆ. ಪ್ರಭಾಸ್‌ಗೆ ವಿಶೇಷ ಸಂದೇಶ ಕಳುಹಿಸಿದ್ದಾರೆ. ಜೊತೆಗೆ ಒಂದು ಪ್ರಶ್ನೆಯನ್ನು ಕೇಳಿದ್ದಾರೆ.
‘ನಾಗ್ ಅಶ್ವಿನ್ ಹಾಗೂ ವೈಜಯಂತಿ ಮೂವೀಸ್ ನಿಜಕ್ಕೂ ಅದ್ಭುತ ಕೆಲಸ ಮಾಡಿದ್ದೀರಿ. ಭವಿಷ್ಯದ ಕಥೆ ಇಟ್ಟುಕೊಂಡು ಸಿನಿಮಾ ಮಾಡುವುದು ತುಂಬಾ ಕಷ್ಟಕರವಾದ ಕೆಲಸ. ಅದನ್ನು ನೀವು ಸಾಧ್ಯವಾಗಿಸಿದ್ದೀರಿ. ಡಾರ್ಲಿಂಗ್ ಸಖತ್ತಾಗಿ ಕಾಣಿಸುತ್ತಿದ್ದಾರೆ. ರಿಲೀಸ್ ಡೇಟ್ ಯಾವಾಗ ಎಂಬ ಒಂದು ಪ್ರಶ್ನೆ ಮಾತ್ರ ಉಳಿದುಕೊಂಡಿದೆ’ ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ.
ಪ್ರಭಾಸ್ 'ಪ್ರಾಜೆಕ್ಟ್ ಕೆ' ಸಿನಿಮಾದಿಂದ ದೀಪಿಕಾ ಪಡುಕೋಣೆ ಲುಕ್ ಔಟ್: ಹೇಗಿದೆ?
'ಕಲ್ಕಿ 2898 AD'ಚಿತ್ರವನ್ನು ಮುಂದಿನ ಜನವರಿ 12ರಂದು ರಿಲೀಸ್ ಮಾಡುವುದಾಗಿ ತಂಡ ಹೇಳಿಕೊಂಡಿತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಚಿತ್ರದ ಗ್ರಾಫಿಕ್ಸ್ ಕೆಲಸಗಳು ಬಾಕಿ ಇವೆ. ಈ ಕಾರಣಕ್ಕೆ ಸಿನಿಮಾ ಜನವರಿ ತಿಂಗಳಲ್ಲಿ ರಿಲೀಸ್ ಆಗುತ್ತಿಲ್ಲ. ಈ ವಿಚಾರವನ್ನು ತಂಡದವರು ಅಧಿಕೃತ ಮಾಡಿಲ್ಲ. ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಅತ್ಯಂತ ದೊಡ್ಡ ಬಜೆಟ್ ನಲ್ಲಿ ಸಿನಿಮಾ ಮೂಡಿಬರುತ್ತಿದ್ದು ಇದು ಭಾರತದ ಅತ್ಯಂತ ದುಬಾರಿ ಚಲನಚಿತ್ರವಾಗಿದೆ.
Project K: ಪ್ರಭಾಸ್ ಲುಕ್ ಔಟ್: ಫ್ಯಾನ್ಸ್ ರಿಯಾಕ್ಷನ್ ಹೀಗಿದೆ
ಪ್ರಭಾಸ್ ಸದ್ಯ ಈ ಸಿನಿಮಾ ಜೊತೆಗೆ ಸಲಾರ್ ಸಿನಿಮಾದಲ್ಲೂ ನಿರತರಾಗಿದ್ದಾರೆ. ಸಲಾರ್ ಕೂಡ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಸಲಾರ್ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಪ್ರಭಾಸ್ ಮುಂದಿನ ಎರಡು ಸಿನಿಮಾಗಳು ಸಹ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದ್ದು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.