28ನೇ ಮಹಡಿಯಲ್ಲಿದ್ದೆವು, ನೆಲ ಚಲಿಸಿತು, ಎದೆ ಝಲ್ ಅಂತು... ಭೂಕಂಪದ ಭೀಕರತೆ ಬಿಚ್ಚಿಟ್ಟ ರಾಜಮೌಳಿ
28ನೇ ಮಹಡಿಯಲ್ಲಿದ್ದೆವು, ನೆಲ ಚಲಿಸಿತು, ಎದೆ ಝಲ್ ಅಂತು... ಜಪಾನ್‌ನಲ್ಲಿ ನಡೆದ ಭೂಕಂಪದ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಎಸ್.ಎಸ್. ರಾಜಮೌಳಿ ಮತ್ತು ಅವರ ಪುತ್ರ ಕಾರ್ತಿಕೇಯ.
ನಾವು 28ನೇ ಮಹಡಿಯಲ್ಲಿ ಇದ್ದೆವು. ನೆಲವು ಚಲಿಸಲು ಆರಂಭಿಸಿತು. ಎದೆ ಝಲ್ ಅಂತು. ಭೂಕಂಪ ಆಗುತ್ತಿದೆ ಎಂದು ಗೊತ್ತಾಯಿತು. ಆದರೆ ಇದನ್ನು ತಿಳಿಯಲು ಸ್ವಲ್ಪ ಹೊತ್ತು ಬೇಕಾಯಿತು. ಭಯದಿಂದ ಓಡಿ ಬಂದೆವು. ಅಲ್ಲಿದ್ದ ಜಪಾನಿಯರು ಕದಲದೇ ನಿಂತುಕೊಂಡರು...
ಇದು ಜಪಾನ್‌ನಲ್ಲಿ ನಡೆದ ಭೂಕಂಪದ ಭೀಕರ ಅನುಭವ ಬಿಚ್ಚಿಟ್ಟ ಜನಪ್ರಿಯ ಸಿನಿಮಾ ನಿರ್ದೇಶಕ ಎಸ್‌ಎಸ್ ರಾಜಮೌಳಿ ಮತ್ತು ಅವರ ಪುತ್ರ ಕಾರ್ತಿಕೇಯ ಹಾಗೂ ನಿರ್ಮಾಪಕ ಶೋಬು ಯರ್ಲಗಡ್ಡ. ಈ ತಂಡವು ಆರ್‌ಆರ್‌ಆರ್ ಸಿನಿಮಾದ ವಿಶೇಷ ಪ್ರದರ್ಶನಕ್ಕಾಗಿ ಜಪಾನ್ಗೆ ಹೋಗಿದ್ದು, ಈ ಸಂದರ್ಭದಲ್ಲಿ ಆದ ಭೂಕಂಪದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 28ನೇ ಮಹಡಿಯಲ್ಲಿ ತಂಗಿದ್ದ ರಾಜಮೌಳಿ ಮತ್ತು ತಂಡಕ್ಕೆ ಭೂಕಂಪನದ ಅನುಭವವಾಗಿದೆ. ಜಪಾನ್‌ನಲ್ಲಿ ಆಗಾಗ ಭೂಕಂಪನ ಆಗುತ್ತಿರುವುದು ಸಾಮಾನ್ಯ. ಆದರೆ, ಕಟ್ಟಡದೊಳಗೆ ಇರುವಾಗ ಆದ ಈ ಅನುಭವದ ಕುರಿತು ರಾಜಮೌಳಿ ಮಗ ಕಾರ್ತಿಕೇಯ ಫುಲ್ ಡಿಟೇಲ್ಸ್ ಕೊಟ್ಟಿದ್ದಾರೆ. ಅಂದಹಾಗೆ ಈ ಘಟನೆ ನಡೆದದ್ದು ಇಂದೇ. ರಾಜಮೌಳಿ ಮತ್ತು ಅವರ ಮಗ ಕಾರ್ತಿಕೇಯ ಅವರು ಜಪಾನ್‌ನಲ್ಲಿ ಇರುವಾಗ ಇದು ಸಂಭವಿಸಿದೆ. ಎಸ್‌ಎಸ್ ರಾಜಮೌಳಿ ಅವರ 'ಆರ್‌ಆರ್‌ಆರ್' ಚಿತ್ರ ಜಪಾನ್‌ನಲ್ಲಿಯೂ ದೊಡ್ಡ ಹಿಟ್ ಆಗಿದೆ. ಹೀಗಿರುವಾಗ ಚಿತ್ರದ ವಿಶೇಷ ಪ್ರದರ್ಶನಕ್ಕಾಗಿ ರಾಜಮೌಳಿ, ಕಾರ್ತಿಕೇಯ ಮತ್ತು ಶೋಬು ಜಪಾನ್‌ನಲ್ಲಿದ್ದಾರೆ. ಮೂವರೂ ತಮ್ಮ ಜಪಾನ್ ಪ್ರವಾಸದ ಅಪ್‌ಡೇಟ್ ನ್ನು ತಮ್ಮ ಅಭಿಮಾನಿಗಳ ಜೊತೆ ನಿರಂತರವಾಗಿ ಹಂಚಿಕೊಳ್ಳುತ್ತಿದ್ದಾರೆ.
ಡಿವೋರ್ಸ್ ಪಡೆದ ಬಳಿಕ ಮೊದಲ ಬಾರಿಗೆ ಒಟ್ಟಿಗೇ ಕಾಣಿಸಿಕೊಂಡ ಸಮಂತಾ- ನಾಗಚೈತನ್ಯ! ಏನಿದು ವಿಷ್ಯ?
ಎಸ್ ಎಸ್ ಕಾರ್ತಿಕೇಯ ಅವರ ಈ ಪೋಸ್ಟ್ ಗೆ ಅಭಿಮಾನಿಗಳು ಕೂಡ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಮೂವರೂ ಸುರಕ್ಷಿತರಾಗಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಕೆಲ ಅಭಿಮಾನಿಗಳು ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಕೆಲವು ಅಭಿಮಾನಿಗಳು ಶೀಘ್ರದಲ್ಲೇ ಹಿಂತಿರುಗುವಂತೆ ಕೇಳಿಕೊಂಡಿದ್ದಾರೆ ಮತ್ತು ಕೆಲವರು ಜಾಗರೂಕರಾಗಿರಿ ಎಂದು ಸಲಹೆ ನೀಡಿದ್ದಾರೆ, ಏಕೆಂದರೆ ಜಪಾನ್‌ನಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತಲೇ ಇರುತ್ತವೆ ಎಂದಿದ್ದಾರೆ. ಜಪಾನ್‌ನಲ್ಲಿ ಭೂಕಂಪನವು 5.3 ರ ಕಂಪನದ ತೀವ್ರತೆಯೊಂದಿಗೆ ಸಂಭವಿಸಿದೆ ಎಂದು ವರದಿಯಾಗಿದೆ. ಟ್ವಿಟರ್ ಮೂಲಕ ರಾಜಮೌಳಿ ಅವರ ಮಗ ಈ ವಿಚಾರವನ್ನು ಶೇರ್ ಮಾಡಿದ್ದಾರೆ. ಕಾರ್ತಿಕೇಯ ಅವರು ಭೂಕಂಪದ ಎಚ್ಚರಿಕೆಯನ್ನು ಒಳಗೊಂಡಿರುವ ತಮ್ಮ ಸ್ಮಾರ್ಟ್ ವಾಚ್‌ನ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ತಮ್ಮ ಭೂಕಂಪದ ಅನುಭವದ ಬಗ್ಗೆ ಮಾತನಾಡಿದ್ದಾರೆ.
ಜಪಾನ್‌ನಲ್ಲಿ ಆರ್‌ಆರ್‌ಆರ್ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಅಪಾರ ಅಭಿಮಾನಿಗಳನ್ನು ರಾಜಮೌಳಿ ಮತ್ತು ಮಗ ಭೇಟಿಯಾಗಿದ್ದಾರೆ. ರಾಜಮೌಳಿ ಅವರು ಈ ಕುರಿತು ಫೋಟೋ ಶೇರ್ ಮಾಡಿಕೊಂಡಿದ್ದರು. ಇದರಲ್ಲಿ ರಾಜಮೌಳಿ, ಅವರ ಪತ್ನಿ ಮತ್ತು 83 ವರ್ಷದ ಅಭಿಮಾನಿಯೊಬ್ಬರು ನಿಂತಿರುವುದನ್ನು ನೋಡಬಹುದು. ಜಪಾನ್‌ನಲ್ಲಿ ತಮ್ಮ ಪ್ರೀತಿಪಾತ್ರರರಿಗೆ ಉತ್ತಮ ಆರೋಗ್ಯ ಮತ್ತು ಅದೃಷ್ಟಕೋರಿ ಒರಿಗಾಮಿ ಉಡುಗೊರೆಗಳನ್ನು ನೀಡುತ್ತಾರೆ. ಆರ್‌ಆರ್‌ಆರ್ ಸಿನಿಮಾ ನೋಡಿ ಖುಷಿಗೊಂಡಿರುವ ಈ ಹಿರಿಯ ಮಹಿಳೆ 1000 ಇಂತಹ ಒರಿಗಾಮಿ ಕ್ರೇನ್ಸ್ ಮಾಡಿದ್ದಾರೆ. ಕೆಲವರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ರಾಜಮೌಳಿ ಟ್ವೀಟ್ ಮಾಡಿದ್ದರು.
ಸದ್ಗುರು ನೋಡಿ ದೇವರೇ ಕುಸಿದು ಬಿದ್ದಂತೆ ಭಾಸವಾಯ್ತು: ಕಂಗನಾ ಭಾವುಕ- ಆರೋಗ್ಯದ ಮಾಹಿತಿ ನೀಡಿದ ಪುತ್ರಿ