80-90ರ ದಶಕದ ಜನಪ್ರಿಯ ನಟಿ ಶ್ರೀದೇವಿ 2018ರಲ್ಲಿ ದುಬೈನಲ್ಲಿ ನಿಧನರಾದರು. ಬಾತ್‌ಟಬ್‌ನಲ್ಲಿ ಮುಳುಗಿ ಸಾವನ್ನಪ್ಪಿದರೆಂದು ಹೇಳಲಾದರೂ, ಸಾವಿನ ಬಗ್ಗೆ ಹಲವು ಅನುಮಾನಗಳಿವೆ. ಉದ್ಯಮಿ ದೀಪ್ತಿ ಪಿನ್ನಿಟಿ, ಶ್ರೀದೇವಿಗೆ ಹಾವಿನ ವಿಷ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಜಾರಿಬಿದ್ದು ಸಾವು ಎಂದು ಹೇಳಲಾಗಿದೆ. ಆದರೆ, ಶ್ರೀದೇವಿ ಸಾವಿನ ರಹಸ್ಯ ಮಾತ್ರ ಇಂದಿಗೂ ನಿಗೂಢವಾಗಿಯೇ ಉಳಿದಿದೆ.
80-90ರ ದಶಕದಲ್ಲಿ ಇಡೀ ಸಿನಿ ಇಂಡಸ್ಟ್ರಿಯನ್ನು ಬೆರಳ ತುದಿಯಲ್ಲಿ ಆಡಿಸಿದಾಕೆ, ದಶಕದವರೆಗೆ ನಂಬರ್ 1 ಪಟ್ಟವನ್ನು ಬಿಟ್ಟುಕೊಡದ ಸೌಂದರ್ಯದ ಘನಿ ಶ್ರೀದೇವಿ ದುರಂತ ಅಂತ್ಯಕಂಡು ಇದೀಗ ಏಳು ವರ್ಷ. 2018ರಲ್ಲಿ ಫೆಬ್ರವರಿ 20ರಂದು ನಟಿ ಕುಟುಂಬ ಸಹಿತವಾಗಿ ಮದುವೆಯಲ್ಲಿ ಪಾಲ್ಗೊಳ್ಳಲು ದುಬೈಗೆ ಹೋಗಿದ್ದರು. ಇನ್ನೊಂದೆಡೆ, ಭಾರತದಲ್ಲಿ ಇದ್ದರು ಎನ್ನಲಾದ ಇವರ ಪತಿ ಬೋನಿ ಕಪೂರ್ (Bony Kapoor), ಫೆಬ್ರವರಿ 24ರಂದು ಶ್ರೀದೇವಿ ಭೇಟಿ ಮಾಡಿ ಸರ್ಪ್ರೈಸ್ ಕೊಡೋಕೆ ರೆಡಿ ಆಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಹೋಟೆಲ್ ಬಾತ್ರೂಮ್ಗೆ ಹೋಗಿದ್ದಷ್ಟೇ. ಅಲ್ಲಿಯೇ ಶ್ರೀದೇವಿ ಮೃತಪಟ್ಟಿದ್ದರು. ಬಾತ್‌ಟಬ್‌ನಲ್ಲಿ ಮುಳುಗಿ ಶ್ರೀದೇವಿ ಮೃತಪಟ್ಟರು ಎಂದೇ ಹೇಳಲಾಗುತ್ತಿದೆ. ಇವರ ಶವ ಸಿಕ್ಕಿದ್ದು ಬಾತ್‌ಟಬ್‌ನಲ್ಲಿ.(bathtub) ಆದರೆ ನಿಜವಾಗಿಯೂ ಏನು ಆಗಿದೆ ಎನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ.
ಆಕೆಗೆ ಮಾಮುಷಿ ವಿಷ ಕೊಟ್ಟು ಸಾಯಿಸಾಗಿದೆ ಎನ್ನುವ ಬಗ್ಗೆ ಮತ್ತೆ ಈಗ ಚರ್ಚೆ ಶುರುವಾಗಿದೆ. ಮಾಮುಷಿ ವಿಷ ಎಂದರೆ ಹಾವಿನ ವಿಷ. ನಟಿ ಸಾಯುವ ವಾರದ ಮುಂಚೆಯೇ ಸಾವಿಗೆ ಸ್ಕೆಚ್ ಹಾಕಿರುವ ಅನುಮಾನ ಬಂದಿದ್ದರೂ, ಶ್ರೀದೇವಿ ಸಾವಿನ ಬಗ್ಗೆ ಸಿಕ್ಕ ಸಾಕ್ಷ್ಯಾಧಾರಗಳು ಕೂಡ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದರೂ, ಅಚ್ಚರಿ ಎನ್ನುವಂತೆ ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಬಾತ್‌ಟಬ್‌ನಲ್ಲಿ ಜಾರಿಬಿದ್ದು ಸಾವನ್ನಪ್ಪಿದ್ದಾರೆ ಎಂದೇ ಬಿಂಬಿತವಾಗಿತ್ತು. ಇದರ ಹಿಂದಿನ ರಹಸ್ಯ ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಹಾವಿನ ವಿಷದ ವಿಷಯ ಮಾತ್ರ ಆಕೆಯ ಅಭಿಮಾನಿಗಳನ್ನು ಬೆಂಬಿಡದೇ ಕಾಡುತ್ತಿದ್ದರೂ, ಶ್ರೀದೇವಿ ಕುಟುಂಬಸ್ಥರು ಈ ಬಗ್ಗೆ ತಲೆ ಕೆಡಿಸಿಕೊಂಡಂತಿಲ್ಲ!
ಸ್ವಂತ ತಂಗಿಗೇ ನಟಿ ಶ್ರೀದೇವಿಯಿಂದ ಮೋಸ? ಅಂತ್ಯಕ್ರಿಯೆಗೆ ಗೈರಾಗಿದ್ದೇಕೆ? ಯಾರೀ ನಿಗೂಢ ಸಹೋದರಿ?
ಅಷ್ಟಕ್ಕೂ ಹಾವಿನ ವಿಷದ ವಿಷಯ ಬೆಳಕಿಗೆ ಬಂದದ್ದು, ಉದ್ಯಮಿಯಾಗಿರುವ ದೀಪ್ತಿ ಪಿನ್ನಿಟಿ ಎನ್ನುವವರು ಶಾಕಿಂಗ್ ವಿಷಯ ರಿವೀಲ್ ಮಾಡಿದಾಗ. ಇವರು ಸ್ವಯಂ ಪ್ರೇರಿತರಾಗಿ ಸುಶಾಂತ್ ಸಿಂಗ್ ರಜಪೂತ್ ಹಾಗೂ ಶ್ರೀದೇವಿ ಸಾವಿನ ಬಗ್ಗೆ ಖಾಸಗಿಯಾಗಿ ತನಿಖೆ ಮಾಡುತ್ತಿದ್ದರು. ಶ್ರೀದೇವಿಯನ್ನು ಹಾವಿನ ವಿಷದಿಂದ ಸಾಯಿಸಲಾಗಿದೆ ಎಂದು ದೀಪ್ತಿ ಹೇಳಿದ್ದರು. ವಾರದ ಹಿಂದೆಯೇ ಈ ಬಗ್ಗೆ ಪ್ಲ್ಯಾನ್ ಮಾಡಲಾಗಿತ್ತು. ಆಕೆ ಸಾಯುವುದಕ್ಕೆ 5 ದಿನ ಮುನ್ನ ಮುಂಬೈನಲ್ಲೇ ಈ ವಿಷವನ್ನು ನೀಡಲಾಗಿತ್ತು. ಇದು ನಿಧಾನವಾಗಿ ಒಂದೊಂದೇ ಅಂಗವನ್ನು ಡ್ಯಾಮೇಜ್ ಮಾಡಿದೆ. ಈ ವಿಷ ಎಲ್ಲಿಂದ ಬಂದಿದೆ, ಹೇಗೆ ಬಂದಿದೆ ಎನ್ನುವುದು ತಿಳಿಸಿದೆ. ಆದರೆ ಸದ್ಯ ರಿವೀಲ್ ಮಾಡುವುದಿಲ್ಲ. ಅಗತ್ಯ ಬಂದರೆ ಎಲ್ಲವನ್ನೂ ಹೇಳುತ್ತೇನೆ ಎಂದಿದ್ದರು. ಆದರೆ, ಆ ದಿನ ಬರಲೇ ಇಲ್ಲ, ಏಕೆಂದರೆ ಎಲ್ಲವೂ ಗಪ್‌ಚುಪ್ ಆಗಿ, ಮರಣೋತ್ತರ ಪರೀಕ್ಷೆ ಕೂಡ ಗೊಂದಲವಾಗಿಯೇ ಬಂದುಬಿಟ್ಟಿತು. ಒಟ್ಟಿನಲ್ಲಿ ಶ್ರೀದೇವಿ ಸಾವು ಮಾತ್ರ ಇಂದಿಗೂ ನಿಗೂಢವೇ.
ಅಷ್ಟಕ್ಕೂ ತಮ್ಮ ಮುಗ್ಧ ಮುಖ, ಮನೋಜ್ಞ ನಟನೆ, ಸರಳ ವ್ಯಕ್ತಿತ್ವದ ಮೂಲಕ ಇವರು ಎಲ್ಲರ ಮನಸ್ಸು ಕದ್ದವರು. 13ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀದೇವಿ, ರಾಷ್ಟ್ರ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ತಮ್ಮ ನಟನೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆಶ್ರೀದೇವಿ ಅನುಮಾನಾಸ್ಪದವಾಗಿ ನಿಧನರಾಗಿ ಐದು ವರ್ಷಗಳು ಕಳೆದಿವೆ. ಈಕೆಯದ್ದು ಸಾಮಾನ್ಯ ಸಾವು ಎಂದು ಹೇಳಲಾಗುತ್ತಿದ್ದರೂ, ಈಕೆಯ ಸಾವಿನ ರಹಸ್ಯ (Secret) ಕೊನೆಗೂ ರಹಸ್ಯವಾಗಿಯೇ ಉಳಿದಿದೆ. ಶ್ರೀದೇವಿಯ ಸಾವಿನ ರಹಸ್ಯದ ಬಗ್ಗೆ ಹಲವರು ಹಲವು ರೀತಿ ಆಡಿಕೊಳ್ಳುತ್ತಿದ್ದಾರೆ. ಇದು ಬಹುತೇಕ ಕೊಲೆ ಎನ್ನುವುದು ಎಲ್ಲರ ಮಾತು. ಕೊಲೆಗಾರ ಯಾರು ಎನ್ನುವ ಬಗ್ಗೆಯೂ ಜನರು ಆಡಿಕೊಳ್ಳುತ್ತಿದ್ದರೂ ನಿಜ ಏನು ಎಂಬ ರಹಸ್ಯ ಮಾತ್ರ ಶ್ರೀದೇವಿಯ ಜೊತೆಗೇ ಸುಟ್ಟು ಭಸ್ಮವಾಗಿದೆ. 1963ರಲ್ಲಿ ಹುಟ್ಟಿದ್ದ ಈ ತಾರೆ ಬದುಕಿರುತ್ತಿದ್ದರೆ, 62 ವರ್ಷ ವಯಸ್ಸಾಗಿರುತ್ತಿತ್ತು.
ಪ್ರೇಮಿಗಳ ದಿನಕ್ಕಾಗಿ ವೈಷ್ಣವಿಗೆ ವಜ್ರಾಭರಣ ಗಿಫ್ಟ್! ಮದ್ವೆಗೆ ಸಜ್ಜಾಗ್ತಿದ್ಯಾ ಸೀತಾ-ರಾಮ ಜೋಡಿ? ಇಲ್ಲಿದೆ ಡಿಟೇಲ್ಸ್
