Sridevi Biopic: ಶ್ರೀದೇವಿ ಜೀವನ ಚರಿತ್ರೆ ಶೀಘ್ರ ಬಿಡುಗಡೆ: ನಿಗೂಢ ಸಾವಿನ ರಹಸ್ಯ ಬಯಲಾಗುತ್ತಾ?
ಹಲವು ವರ್ಷಗಳವರೆಗೆ ನಂ.1 ಪಟ್ಟದಲ್ಲಿಯೇ ಮೆರೆದಿದ್ದ ನಟಿ ಶ್ರೀದೇವಿಯ ಜೀವನ ಚರಿತ್ರೆ ಶೀಘ್ರ ಬಿಡುಗಡೆಯಾಗಲಿದೆ. ಮುಂಬೈನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಈಕೆಯ ಸಾವಿನ ರಹಸ್ಯಕ್ಕೆ ಉತ್ತರ ಸಿಗಲಿದೆಯೇ ಕಾದು ನೋಡಬೇಕಿದೆ.
80-90ರ ದಶಕದಲ್ಲಿ ಬಾಲಿವುಡ್ ಚಿತ್ರದಲ್ಲಿ ನಂ.1 ಪಟ್ಟವನ್ನು ಯಾರಿಗೂ ಬಿಟ್ಟುಕೊಡದಿದ್ದ ಚೆಲುವೆ ಶ್ರೀದೇವಿ (Shreedevi). ತಮ್ಮ ಮುಗ್ಧ ಮುಖ, ಮನೋಜ್ಞ ನಟನೆ, ಸರಳ ವ್ಯಕ್ತಿತ್ವದ ಮೂಲಕ ಇವರು ಎಲ್ಲರ ಮನಸ್ಸು ಕದ್ದವರು. 13ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀದೇವಿ, ರಾಷ್ಟ್ರ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ತಮ್ಮ ನಟನೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. 1997ರಿಂದ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ಶ್ರೀದೇವಿ, 2012ರಲ್ಲಿ 'ಇಂಗ್ಲಿಷ್‌ಗೌರಿ ಶಿಂಧೆ ನಿರ್ದೇಶನದ -ವಿಂಗ್ಲಿಷ್' ಚಿತ್ರದ ಮೂಲಕ ಮತ್ತೆ ನಟನೆಗೆ ವಾಪಸ್ ಆದರು. ಇದು ಇಂಗ್ಲಿಷ್ ಬರದೇ ಮನೆಯವರಿಂದ ಕಡೆಗಣನೆಗೆ ಒಳಗಾಗುವ ಪಾತ್ರದಲ್ಲಿ ನಟಿಸಿದ್ದರು ಶ್ರೀದೇವಿ. ಈ ಚಿತ್ರವನ್ನೂ ಜನರ ಅದರಲ್ಲಿಯೂ ಗೃಹಿಣಿಯರ ಅಚ್ಚುಮೆಚ್ಚಿನದ್ದಾಗಿತ್ತು. ಶ್ರೀದೇವಿ ಈ ಚಿತ್ರದಲ್ಲಿ ಶಶಿ (Shashi) ಹೆಸರಿನ ಪಾತ್ರ ಮಾಡಿದ್ದರು. ಶಶಿ ಮದುವೆ ಆದ ನಂತರದಲ್ಲಿ ಮನೆ ನೋಡಿಕೊಂಡಿರುವ ಗೃಹಿಣಿ. ಮಕ್ಕಳು, ಗಂಡ ಆಕೆಯ ಪ್ರಪಂಚ. ಇಂಗ್ಲಿಷ್ ಬರುವುದಿಲ್ಲ ಎಂದು ಆಕೆಯನ್ನು ಕುಟುಂಬದವರೇ ಹಂಗಿಸುತ್ತಾರೆ. ಈ ಕಾರಣಕ್ಕೆ ಆಕೆ ಇಂಗ್ಲಿಷ್ ಕಲಿಯುವ ಪ್ರಯತ್ನ ಮಾಡುತ್ತಾಳೆ. ನಂತರ ಇಂಗ್ಲಿಷ್ ಕಲಿತು ಮಾತನಾಡುತ್ತಾಳೆ. ಸಿನಿಮಾ ಕೊನೆಯಲ್ಲಿ ಆಕೆ ಅರ್ಥಪೂರ್ಣವಾಗಿ ಇಂಗ್ಲಿಷ್ ಮಾತನಾಡುತ್ತಾಳೆ. ಈ ಚಿತ್ರದ ಸಂದೇಶ ಬಹಳ ಮೆಚ್ಚುಗೆಗೆ ಒಳಗಾಗಿತ್ತು.
ಸೌಂದರ್ಯದ ಘನಿಯಂತಿದ್ದ ಶ್ರೀದೇವಿ ದುರಂತ ಅಂತ್ಯ (sad end) ಕಂಡವರು. ಇದೇ ಫೆ.28 ಶ್ರೀದೇವಿ ಅನುಮಾನಾಸ್ಪದವಾಗಿ ನಿಧನರಾಗಿ ಐದು ವರ್ಷಗಳು ಕಳೆಯುತ್ತವೆ. ಈಕೆಯದ್ದು ಸಾಮಾನ್ಯ ಸಾವು ಎಂದು ಹೇಳಲಾಗುತ್ತಿದ್ದರೂ, ಈಕೆಯ ಸಾವಿನ ರಹಸ್ಯ (Secret) ಕೊನೆಗೂ ರಹಸ್ಯವಾಗಿಯೇ ಉಳಿದಿದೆ. ಶ್ರೀದೇವಿಯ ಸಾವಿನ ರಹಸ್ಯದ ಬಗ್ಗೆ ಹಲವರು ಹಲವು ರೀತಿ ಆಡಿಕೊಳ್ಳುತ್ತಿದ್ದಾರೆ. ಇದು ಬಹುತೇಕ ಕೊಲೆ ಎನ್ನುವುದು ಎಲ್ಲರ ಮಾತು. ಕೊಲೆಗಾರ ಯಾರು ಎನ್ನುವ ಬಗ್ಗೆಯೂ ಜನರು ಆಡಿಕೊಳ್ಳುತ್ತಿದ್ದರೂ ನಿಜ ಏನು ಎಂಬ ರಹಸ್ಯ ಮಾತ್ರ ಶ್ರೀದೇವಿಯ ಜೊತೆಗೇ ಸುಟ್ಟು ಭಸ್ಮವಾಗಿದೆ. 1963ರಲ್ಲಿ ಹುಟ್ಟಿದ್ದ ಈ ತಾರೆ ಇಂದು ಬದುಕಿರುತ್ತಿದ್ದರೆ, 60 ವರ್ಷ ವಯಸ್ಸಾಗಿರುತ್ತಿತ್ತು. ಆದರೆ 2018ರಲ್ಲಿ ಈಕೆ ದುರಂತ ಅಂತ್ಯ ಕಂಡರು. ಆದರೆ ವಯಸ್ಸಾದರೂ ಕೊನೆಯವರೆಗೂ ಆಕೆಯ ಮುಖದ ತೇಜಸ್ಸು ಎಂಥವರನ್ನೂ ಮರುಳು ಮಾಡುವಂತಿತ್ತು.
ಚೀನಾದ 6 ಸಾವಿರ ಸ್ಕ್ರೀನ್ಗಳಲ್ಲಿ ಶ್ರೀದೇವಿ ' English Vinglish' ಸಿನಿಮಾ ಪ್ರದರ್ಶನ!
2018ರಲ್ಲಿ ಫೆಬ್ರವರಿ 20ರಂದು ನಟಿ ಕುಟುಂಬ ಸಹಿತವಾಗಿ ಮದುವೆಯಲ್ಲಿ ಪಾಲ್ಗೊಳ್ಳಲು ದುಬೈಗೆ ಹೋಗಿದ್ದರು. ಇನ್ನೊಂದೆಡೆ, ಭಾರತದಲ್ಲಿ ಇದ್ದರು ಎನ್ನಲಾದ ಇವರ ಪತಿ ಬೋನಿ ಕಪೂರ್ (Bony Kapoor), ಫೆಬ್ರವರಿ 24ರಂದು ಶ್ರೀದೇವಿ ಭೇಟಿ ಮಾಡಿ ಸರ್ಪ್ರೈಸ್ ಕೊಡೋಕೆ ರೆಡಿ ಆಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಹೋಟೆಲ್ ಬಾತ್ರೂಮ್ಗೆ ಹೋಗಿದ್ದಷ್ಟೇ. ಅಲ್ಲಿಯೇ ಶ್ರೀದೇವಿ ಮೃತಪಟ್ಟಿದ್ದರು. ಬಾತ್ಟಬ್ನಲ್ಲಿ ಮುಳುಗಿ ಶ್ರೀದೇವಿ ಮೃತಪಟ್ಟರು ಎಂದೇ ಹೇಳಲಾಗುತ್ತಿದೆ. ಇವರ ಶವ ಸಿಕ್ಕಿದ್ದು ಬಾತ್ಟಬ್ನಲ್ಲಿ.(bathtub) ಆದರೆ ನಿಜವಾಗಿಯೂ ಏನು ಆಗಿದೆ ಎನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ.
ಇವರ ಜೀವನವೀಗ ಪುಸ್ತಕ ರೂಪದಲ್ಲಿ ಹೊರಬರುತ್ತಿದೆ. ಈ ವಿಷಯವನ್ನು ಶ್ರೀದೇವಿಯವರ ಪತಿ, ಬೋನಿ ಕಪೂರ್ (Bony Kapoor)ಬಹಿರಂಗಪಡಿಸಿದ್ದಾರೆ. ಧೀರಜ್ ಕುಮಾರ್ ಈಗ ಶ್ರೀದೇವಿಯ ಜೀವನವನ್ನು ಪುಸ್ತಕ ರೂಪದಲ್ಲಿ ತರುತ್ತಿದ್ದಾರೆ. ಈ ಪುಸ್ತಕವು ಮುಂದೊಂದು ದಿನ ಸಿನಿಮಾ ಆಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಈ ವಿಷಯವನ್ನು ಅವರು ಮಾಧ್ಯಮದವರ ಜೊತೆ ಶೇರ್ ಮಾಡಿಕೊಂಡಿದ್ದಾರೆ, 'ಶ್ರೀದೇವಿಗೆ ನಟನೆ ಎಂದರೆ ಸರ್ವಸ್ವವಾಗಿತ್ತು. ಇದೇ ಆಕೆಯ ಜೀವವಾಗಿತ್ತು. ಅದೇ ಇನ್ನೊಂದೆಡೆ, ವೈಯಕ್ತಿಕ ಜೀವನದಲ್ಲಿ ಆಕೆ ಬಹಳ ಶಿಸ್ತಿನ, ಹೆಚ್ಚು ಜನರೊಟ್ಟಿಗೆ ಬೆರೆಯದ ವ್ಯಕ್ತಿಯಾಗಿದ್ದರು. ಆದರೆ ನಮ್ಮದೇ ಕುಟುಂಬದ ವ್ಯಕ್ತಿಯಂತಿರುವ ಬರಹಗಾರ ಧೀರಜ್ ಕುಮಾರ್ ಈಗ ಶ್ರೀದೇವಿಯ ಜೀವನವನ್ನು ಪುಸ್ತಕ ರೂಪದಲ್ಲಿ ತರುತ್ತಿದ್ದಾರೆ ಎಂದಿದ್ದಾರೆ ಬೋನಿ ಕಪೂರ್. ಅಂದಹಾಗೆ ಈ ಪುಸ್ತಕದ ಹೆಸರು 'ಶ್ರೀದೇವಿ: ದಿ ಲೈಫ್ ಆಫ್ ಎ ಲೆಜೆಂಡ್' ಬರೆದಿದ್ದಾರೆ. ಇನ್ನು ಲೇಖಕ ಧೀರಜ್ ಕುಮಾರ್ ಅವರ ಕುರಿತು ಹೇಳಿರುವ ಅವರು, ಧೀರಜ್ಕುಮಾರ್ ಸಂಶೋಧಕರು, ಬರಹಗಾರರು, ಅಂಕಣ ಬರಹಗಾರರು. ಶ್ರೀದೇವಿಯ ಜೀವನದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ನಮ್ಮ ಕುಟುಂಬದವರನ್ನು ಸೇರಿದಂತೆ ಹಲವರೊಟ್ಟಿಗೆ ಮಾತುಕತೆ ನಡೆಸಿ ಇದನ್ನು ಬರೆದಿದ್ದು, ಪುಸ್ತಕ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ ಎಂದಿದ್ದಾರೆ.
ಹಾಲಿವುಡ್ ದಿಗ್ಗಜ ಸ್ಟೀವನ್ ಸ್ಪೀಲ್ಬರ್ಗ್ ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ರು ಶ್ರೀದೇವಿ: ಕಾರಣವೇನು?
ಇವೆಲ್ಲವೂ ಸರಿ. ಶ್ರೀದೇವಿಯಂಥ ತಾರೆಯ ಜೀವನ ಚರಿತ್ರೆ ಬರುತ್ತಿರುವುದು ಸಂತೋಷದ ಸಂಗತಿ. ಆದರೆ ಈಕೆಯ ಸಾವಿನ ನಿಜವಾದ ಕಾರಣವನ್ನು ಧೀರಜ್ ಕುಮಾರ್ (Dheeraj Kumar) ನೀಡುವರೆ ಎಂದು ಶ್ರೀದೇವಿ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.