Suqid Game Season 3: ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಹೊಸ ರೆಕಾರ್ಡ್ ಸೃಷ್ಟಿಸಿದ ಸ್ಕ್ವಿಡ್ ಗೇಮ್ ಸೀಸನ್‌ 3ಗಾಗಿ ಕಾಯುತ್ತಿರುವವಿಗೆ ಗುಡ್‌ನ್ಯೂಸ್ ಕೊಟ್ಟ ಕ್ರಿಯೇಟರ್ ನೆಟ್‌ಫ್ಲಿಕ್ಸ್ ಜೊತೆ 2 ಮತ್ತು 3ನೇ ಸೀಸನ್ ಮಾತು ಕತೆ, ಈ ಬಾರಿ ಸ್ಟೋರಿ & ಗೇಮ್ಸ್ ಹೇಗಿರಲಿದೆ ?

ವಾಷಿಂಗ್ಟನ್(ಜ.01): ವಿಶ್ವದಾದ್ಯಂತ ಮನೋರಂಜನಾ ಕ್ಷೇತ್ರದಲ್ಲಿ ಹೊಸ ರೆಕಾರ್ಡ್ ಮಾಡಿದ ಸ್ಕ್ವಿಡ್ ಗೇಮ್(Squid Game) ಭಾಷೆಯ ಅಡೆತಡೆ ಮೀರಿ ಎಲ್ಲರನ್ನೂ ತಲುಪಿತು. ಡಿಫರೆಂಟ್ ಸಿರೀಸ್ ಕೊಟ್ಟ ನೆಟ್‌ಫ್ಲಿಕ್ಸ್‌ ಈ ಸಿರೀಸ್‌ನಿಂದ ಬಹಳಷ್ಟು ಹೊಸ ಬಳಕೆದಾರರು, ಲಾಭವನ್ನೂ ಗಳಿಸಿದೆ. ಒಂದಿಷ್ಟೂ ಬೋರ್ ಎನಿಸದೆ ಕುತೂಹಲದಲ್ಲಿ ಪ್ರೇಕ್ಷಕನನ್ನು ಕರೆದೊಯ್ಯುವ ಸಿರೀಸ್ ಲವರ್ಸ್‌ಗೆ ಈಗ ಗುಡ್‌ನ್ಯೂಸ್ ಸಿಕ್ಕಿದೆ. ಹೌದು. ಸ್ಕ್ವಿಡ್ ಗೇಮ್‌ನ ಅಭಿಮಾನಿಗಳಿಗೆ ಅದರ ಕ್ರಿಯೇಟರ ಹ್ವಾಂಗ್ ಡಾಂಗ್ ಹ್ಯುಕ್(Hwang Dong Hyuk) ಸಿಹಿ ಸುದ್ದಿಕೊಟ್ಟಿದ್ದಾರೆ. ಎರಡನೇ ಸೀಸನ್ ಮಾತ್ರವಲ್ಲ ಸ್ಕ್ವಿಡ್‌ಗೇಮ್‌ನ ಮೂರನೇ ಸೀಸನ್ ಬಗ್ಗೆಯೂ ನೆಟ್‌ಫ್ಲಿಕ್ಸ್ ಜೊತೆ ಮಾತುಕತೆ ನಡೆಸಿರುವುದಾಗಿ ಹ್ವಾಂಗ್ ಡಾಂಗ್ ಹ್ಯುಕ್ ಹೇಳಿದ್ದಾರೆ.

ಸೆಪ್ಟೆಂಬರ್ 17ರಂದು ಸ್ಕ್ವಿಡ್ ಗೇಮ್ ರಿಲೀಸ್ ಆದಾಗ ಇದು ಈ ರೀತಿಯ ಹವಾ ಸೃಷ್ಟಿಸಬಹುದೆಂದು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ. ಬಹಳಷ್ಟು ಬಾರಿ ರಿಜೆಕ್ಟ್ ಆಗಿದ್ದ ಸ್ಕ್ರಿಪ್ಟ್ ಹೊಸ ದಾಖಲೆ ಬರೆದಿತ್ತು. ಸೌತ್ ಕೊರಿಯನ್ ಶೋ ನೆಟ್‌ಫ್ಲಿಕ್ಸ್‌ನ ಅತ್ಯಂತ ದೊಡ್ಡ ಸಿರೀಸ್ ಎಂದು ದಾಖಲೆ ಬರೆಯಿತು.

ವಿಶ್ವಾದ್ಯಂತ 142 ಮಿಲಿಯನ್ ಹೌಸ್‌ಹೋಲ್ಡ್ ಮೆಂಬರ್ಸ್‌ಗಳನ್ನು ಪಡೆಯಿತು. ಮೊಟ್ಟ ಮೊದಲಬಾರಿಗೆ 100 ಮಿಲಿಯನ್ ವ್ಯೂಸ್ ಗಳಿಸಿತು. ನಾನು ನೆಟ್‌ಫ್ಲಿಕ್ಸ್ ಜೊತೆ ಸ್ಕ್ವಿಡ್ ಗೇಮ್‌ನ ಸೀಸನ್ 2 ಹಾಗೂ 3ರ ಮಾತುಕತೆಯಲ್ಲಿದ್ದೇನೆ. ಇದು ಶೀಘ್ರ ಇತ್ಯರ್ಥವಾಗಲಿದೆ ಎಂದಿದ್ದಾರೆ.

ಕಡಿಮೆ FIR, ಜಾಸ್ತಿ ಲವ್‌ ಸಿಗ್ಲಿ, ಮಂದಿರದಲ್ಲಿ ಕಂಗನಾ ಪ್ರಾರ್ಥನೆ

ನವೆಂಬರ್ ಸ್ಪೆಷಲ್ ಸ್ಕ್ರೀನಿಂಗ್ ವೇಳೆ ಮಾತನಾಡಿದ ಅವರು, ಸೀಸನ್ 2 ಸ್ಟೋರಿಲೈನ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ಹಾಗೆಯೇ ನೆಟ್‌ಫ್ಲಿಕ್ಸ್‌ ಜೊತೆ ಮಾತುಕತೆಯನ್ನೂ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಗ್ಲೋಬಲ್ ಸಕ್ಸಸ್ ಪಡೆದ ಸಿರೀಸ್ ಸೀಸನ್ ಮಾಡುವುದು ನಿಜಕ್ಕೂ ಸ್ವಲ್ಪ ಒತ್ತಡದ ಕೆಲಸ ಎಂದೂ ಅವರು ಹೇಳಿದ್ದಾರೆ.

ಸೀಸನ್ 2ಗಾಗಿ ನನ್ನಲ್ಲಿ ಸ್ಟೋರಿ ಲೈನ್ ಇದೆ. ಇದೆಲ್ಲವೂ ನನ್ನ ತಲೆಯಲ್ಲಿದೆ. ಸದ್ಯ ನನ್ನ ಮೈಂಡ್‌ಗೆ ಪ್ರೆಶರ್ ಬೀಳುವ ಸ್ಟೇಜ್‌ನಲ್ಲಿದ್ದೇನೆ. ಸೀಸನ್‌ಗಳನ್ನು ಮಾತುತ್ತೇನೆ, ಹೆಚ್ಚಿನ ಡೀಟೆಲ್ಸ್ ಈಗಲೇ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. 

ಸ್ಕ್ವಿಡ್‌ ಗೇಮ್ ಬಹಳ ಡಿಫರೆಂಟ್ ಸ್ಟೋರಿಲೈನ್ ಹೊಂದಿದ್ದು ಗ್ಯಾಮ್ಲಿಂಗ್‌ನ ಇನ್ನೊಂದು ಸ್ವರೂಪವನ್ನು ತೆರೆದಿಡುತ್ತದೆ. ವಿಚಿತ್ರ ಎನಿಸುವ ಮಾನವೀಯ ಗುಣವೇ ಇಲ್ಲದೆ ಕ್ರೂರವಾಗಿ ಜೀವವನ್ನೇ ಇಟ್ಟು ಗೇಮ್ ಮಾಡುವ ಸ್ಟೋರಿ ಹೊಂದಿರೋ ಕಥೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಕ್ಸಸ್ ಆಯಿತು. ಸಾಲದ ಹೊರೆಯಲ್ಲಿರುವ ಜನರನ್ನೇ ಹುಡುಕಿ ಅವರ ಮಾಹಿತಿಗಳನ್ನು ಹುಡುಕಿ ಅವರಿಗೆ ಯಾವೊಂದು ವಿಚಾರ ತಿಳಿಸದೆ ಗೇಮ್ ಆಡಲು ಆಹ್ವಾನಿಸಿ ಅವರಿಗೆ ಗೇಮ್ಸ್ ಕಂಡೀಷನ್ಸ್ ತಿಳಿಸಲಾಗುತ್ತದೆ.

ಜೀವವನ್ನೇ ಪಣಕ್ಕಿಡುವ ಆಟವಾದರೂ ಹಣದ ಆಸೆಯಿಂದ ಯಾರು ಗೇಮ್‌ನಿಂದ ಹೊರಬರುವುದಿಲ್ಲ. ಹಾಗೆಯೇ ಈ ಗೇಮ್‌ನಲ್ಲಿ ಗೆದ್ದವರಿಗೆ ಜೀವ, ಸೋತವರಿಗೆ ಸಾವು ಎಂಬ ರೂಲ್ಸ್ ಇರುತ್ತದೆ. ಆದರೂ ಸಾಲದ ಹೊರೆಯಿಂದ ಗೇಮ್‌ನಲ್ಲಿ ಜನರು ಭಾಗವಹಿಸುತ್ತಾರೆ. ಗೇಮ್‌ನಲ್ಲಿ ಸೋತಾಗ ನಿರ್ದಾಕ್ಷಿಣ್ಯವಾಗಿ ಗುಂಡಿಕ್ಕಿ ಅವರನ್ನು ಕೊಲ್ಲಲಾಗುತ್ತದೆ. ಹೀಗೆ ಒಂದಕ್ಕಿಂದ ಒಂದು ವಿಚಿತ್ರ ಗೇಮ್‌ಗಳು ಸೀಸನ್‌ಗಳನ್ನು ತೋರಿಸುತ್ತಲೇ ಹೋಗುತ್ತಾರೆ.

ಗೇಮ್ ಆಡಲು ಬರುವ ತನಕ ಯಾವ ಗೇಮ್ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಒಬ್ಬೊಬ್ಬರೇ ಗೇಮ್ ಆಡಿ ಗೆಲ್ಲುತ್ತಾ ಕೊನೆಗೆ ಕೆಲವೇ ಜನರು ಉಳಿದಿರುತ್ತಾರೆ. ಟ್ರಿಕ್ಕಿ ಗೇಮ್‌ಗಳಲ್ಲಿ ಸಾವಿನಿಂದ ಹೊರ ಬರುವುದು ಪ್ರತಿಬಾರಿಯ ಸವಾಲಾಗಿರುತ್ತದೆ. ಇಂಟ್ರೆಸ್ಟಿಂಗ್ ರೀತಿಯಲ್ಲಿ ಸಾಗುವ ಸ್ಟೋರಿ ವೀಕ್ಷಕರನ್ನು ಕೊನೆಯವರೆಗೂ ಹಿಡಿದಿಡುತ್ತದೆ. ಇದೀಗ ಸೀಸನ್ 2 ಹಾಗೂ 3ಕ್ಕಾಗಿ ಕಾಯುತ್ತಿದ್ದಾರೆ ಜನ.